27 November 2025
Karnataka

ಕೇಸ್ ಖುಲಾಸೆ ಮಾಡಿಕೊಡಲು ಲಂಚ : ಲೋಕಾಯುಕ್ತ ಬಲೆಗೆ ಬಿದ್ದ ಹೆಡ್‌ ಕಾನ್‌ಸ್ಟೇಬಲ್‌.

ಜುಲೈ -17-2023 swabhimananews@gmail.com
ವಂಚನೆ ಕೇಸ್‌ವೊಂದನ್ನು ಖುಲಾಸೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಹೆಡ್‌ ಕಾನ್‌ಸ್ಟೇಬಲ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

swabhimananews@gmail.com
ರಾಮನಗರ ಸೆನ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆ ಮಹೇಶ್ 50 ಸಾವಿರ ರೂ. ಲಂಚ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ‌ ಖಾಸಗಿ ಹೋಟೆಲ್‌ನಲ್ಲಿ ಹಣ ಪಡೆಯುವಾಗ ಖಚಿತ ಮಾಹಿತಿ ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಚೀಟಿಂಗ್ ಪ್ರಕರಣ ಖುಲಾಸೆ ಮಾಡಿಕೊಡುವುದಾಗಿ 2.5 ಲಕ್ಷಕ್ಕೆ ಬೇಡಿಕೆ‌ ಇಟ್ಟಿದ್ದ ಮಹೇಶ್, ಈಗಾಗಲೇ 75 ಸಾವಿರ ಲಂಚ ಪಡೆದಿದ್ದ‌.
swabhimananews@gmail.com
ಇಂದು 50 ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ‌. ಸದ್ಯ ಹೆಡ್ ಕಾನ್‌ಸ್ಟೇಬಲ್ ಮಹೇಶ್ ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
swabhimananews@gmail.com

Related posts

ಸೌಜನ್ಯ ಕೇಸ್: ‘ಅಭಿಮಾನಿಗಳನ್ನು ನಾನೇ ತಡೆದಿರುವೆ, ಏನನ್ನಾದರೂ ಮಾಡಲು ಸಿದ್ದ’: ಹೋರಾಟಗಾರರಿಗೆ ಹೆಗ್ಗಡೆ ಪರೋಕ್ಷ ಬೆದರಿಕೆ?

Swabhimana News Desk

ಲೋಕಸಭೆ ಚುನಾವಣೆ 2024ರ 14 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ.

Swabhimana News Desk

ಮುರುಘಾ ಶ್ರೀ ಮತ್ತೆ ಜೈಲಿಗೆ: ಜಾಮೀನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶ

Swabhimana News Desk

Leave a Comment