13.2 C
New York
14 October 2025
Karnataka

ದಸಂಸ-50 ನೇ ವರ್ಷದ ಸ್ವಾಭಿಮಾನಿ ಚಳುವಳಿಯ ರೂವಾರಿ ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನದ ಅಂಗವಾಗಿ ‘ಸ್ವಾಭಿಮಾನಿ ಚಳುವಳಿ ಮತ್ತು ಅಂಬೇಡ್ಕ‌ರ್ ಸಿದ್ಧಾಂತ’ದ ಸಮಾಲೋಚನಾ ಸಮಾವೇಶ.

ಜೂನ್ -09-2024 swabhimananews

ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್ ರಸ್ತೆ, ಇಲ್ಲಿ
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷ.ಮತ್ತು ಕದಸಂಸ ಭೀಮವಾದ (ರಿ)ಇದರ ರಾಜ್ಯ ಸಮಿತಿ ವತಿಯಿಂದ ಪ್ರೊ ಬಿ ಕೃಷ್ಣಪ್ಪ ರವರ ಜನ್ಮ ದಿನಾಚರಣೆ.

ಮತ್ತು ದಸಂಸಕ್ಕೆ 50 ರ ಸಂಬ್ರಮದ ಅಂಗವಾಗಿ ನಡೆದ ಕಾರ್ಯಕ್ರಮ.ಕರ್ನಾಟಕದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ಒಪ್ಪಿಕೊಂಡು ಸಮಾನತೆಯ ಸಮಾಜಕ್ಕಾಗಿ ಜಾತಿರಹಿತವಾದ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಕೊನೆಯ ಉಸಿರಿರುವರೆಗೂ ಹೋರಾಟ ಮಾಡಿ,

ಕಾರ್ಯಕರ್ತರಲ್ಲಿ ಸ್ಪೂರ್ತಿ, ಬದ್ಧತೆಯನ್ನು ಉಂಟು ಮಾಡಿದ ಪ್ರೊ|ಬಿ.ಕೃಷ್ಣಪ್ಪನವರು ಹುಟ್ಟಿದ್ದು ಜೂನ್ 09-1938ರಲ್ಲಿ. ಉನ್ನತ ವಿದ್ಯಾಭ್ಯಾಸ ಪಡೆದು ಉಪನ್ಯಾಸಕರಾಗಿ ಉದ್ಯೋಗಕ್ಕೆ ಸೇರ್ಪಡೆಯಾಗಿ ಸ್ವಯಂ ನಿವೃತ್ತಿ ಪಡೆಯುವವರೆಗೂ ಉಪನ್ಯಾಸಕರಾಗಿ, ರೀಡರ್ ಆಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಲೇ ಸಮಾಜದಲ್ಲಿರುವ ಅಸಮಾನತೆಯನ್ನು,

ಜಾತಿ ವ್ಯವಸ್ಥೆಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟುವ ಮುಖಾಂತರ ತಮ್ಮನ್ನೇ ತಾವು ಪರಿವರ್ತನಾ ಚಳುವಳಿಗೆ ತೊಡಗಿಸಿಕೊಂಡಿದ್ದು ವಿಶಿಷ್ಟವಾದುದ್ದು.

ಸಮಾಜವಾದಿ ಯುವಜನ ಸಭಾ, ಬೂಸಾ ಪ್ರಕರಣ, ಜಾತಿವಿನಾಶ ಆಂದೋಲನ, ಕರ್ನಾಟಕ ಕಲಾವಿದರ ಮತ್ತು ಬರಹಗಾರರ ಒಕ್ಕೂಟಗಳು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಆರಂಭಕ್ಕೆ ತಳಪಾಯಗಳು.

ನಂತರ ದಲಿತ, ಬಹುಜನ ಚಳುವಳಿಗಳ ಆಂತರಿಕ ವೈರುಧ್ಯಗಳ ಬಗ್ಗೆ ರೈತ, ದಲಿತ, ಬಂಡಾಯ ಚಳುವಳಿಗಳ ನಡೆಗಳು ವಿರುದ್ಧ ದಿಕ್ಕಿಗೆ ಸಾಗುವ ಮುಖಾಂತರ ತಮ್ಮ ಅಸ್ತಿತ್ವಕ್ಕಾಗಿ ನಡೆಯುತ್ತಿರುವ ಹೋರಾಟಗಳನ್ನು ಈ ಸಂದರ್ಭದಲ್ಲಿ ಗಮನಿಸಬೇಕಾಗಿದೆ.


2024ರಲ್ಲಿ ದಲಿತ ಚಳುವಳಿಗೆ 50ರ ಸಂಭ್ರಮ. ಇಂದಿನ ಕೋಮುವಾದ, ಜಾತಿವಾದ ತಮ್ಮ ತಮ್ಮಲ್ಲೇ ಅಸೂಯೆ ವಿಜೃಂಬಿಸುತ್ತಿದೆ. ಆಳುವ ವರ್ಗಗಳು ಬಡವರ, ಮಹಿಳೆಯರ, ಶೋಷಿತರ ಮಾನ, ಪ್ರಾಣ, ಆಸ್ತಿ, ಗೌರವಗಳನ್ನು ಕಾಪಾಡುವಲ್ಲಿ ವಿಫಲವಾಗಿವೆ. ಜನಪರವಾದ ಚಳುವಳಿಗಳು ನಿಂತ ನೀರಾಗಿವೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರೊ|| ಬಿ.ಕೃಷ್ಣಪ್ಪನವರ ಜನ್ಮದಿನದ ಅಂಗವಾಗಿ ಸ್ವಾಭಿಮಾನಿ ಚಳುವಳಿ ಮತ್ತು ಅಂಬೇಡ್ಕ‌ರ್ ಸಿದ್ಧಾಂತ ವನ್ನು ಕುರಿತು ಸಮಾಲೋಚನಾ ಸಮಾವೇಶವನ್ನು.
ಹಮ್ಮಿಕೊಳ್ಳಲಾಗಿತ್ತು. ಸಮಸಮಾಜನಿರ್ಮಾಣಕ್ಕಾಗಿ ಹೋರಾಡುತ್ತಿರುವ.ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು,
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ರಾಜ್ಯ ಅಧ್ಯಕ್ಷರು ಮತ್ತು ಕದಸಂಸ ಭೀಮವಾದದ ರಾಜ್ಯ ಸಂಚಾಲಕರಾದ ಡಾ.ಆರ್ ಮೋಹನ್ ರಾಜ್ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ದಸಂಸ ಭೀಮವಾದದ ರಾಜ್ಯ ಸಂಘಟನಾ ಸಂಚಾಲಕರಾದ ರಾಜು ಎಂ ತಳವಾರ ಬೆಳಗಾಂ, ಶೇಖರ್ ಹಾವಂಜೆ ಉಡುಪಿ, ರಿಪಬ್ಲಿಕನ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸಪ್ನಾ ಮೋಹನ್,ಹಿರಿಯ ದಲಿತ ಮುಖಂಡರಾದ ಬಸವರಾಜ್ ಕೌತಳ್, ರಂಜಿನಿ ಆರತಿ,ಆನಂದ್,
ಶ್ರಿ ನಿವಾಸ್, ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ರಂಜಿನಿ ಆರತಿ ಮತ್ತು ಸಿದ್ದರಾಜು ರವರು ಕ್ರಾಂತಿ ಗೀತೆಗಳನ್ನು ಹಾಡಿದರು.

ಮುಖ್ಯ ಅತಿಥಿಗಳನ್ನು ಎಸ್ ಡಿ.ರಾಯಮಾನೆ ಸ್ವಾಗತಿಸಿದರು
ಕಾರ್ಯಕ್ರಮದ ನಿರೂಪಣೆ ಶರಣು ದೋರಣಹಳ್ಳಿ, ಕೆಬಿ ರಾಜು ಕೊಡಗು ವಂದನಾರ್ಪಣೆ ಮಾಡಿದರು.
ಸಂದರ್ಭದಲ್ಲಿ ಸಂಘಟನೆಯ ಮತ್ತು ಪಕ್ಷದ ಪ್ರಮುಖರಾದ.ಪ್ರಕಾಶ್,





ಮಂಜು,ಮಲ್ಲಿಕಾರ್ಜುನ್, ಶರಣಬಸಪ್ಪ, ಶಿವು, ಸಂಜೀವ ನಾಯ್ಕ್ ಕುಕ್ಕೆಹಳ್ಳಿ, ಶಂಕರ್ ಕೋಲಾರ, ತಿಮ್ಮರಾಯಪ್ಪ, ಹಾಗೂ ಇನ್ನಿತರರು
ಉಪಸ್ಥಿತರಿದ್ದರು ಮತ್ತು ನೂರಾರು ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
Swabhimananews

Related posts

ಸೌಜನ್ಯ ಕೇಸ್: ‘ಅಭಿಮಾನಿಗಳನ್ನು ನಾನೇ ತಡೆದಿರುವೆ, ಏನನ್ನಾದರೂ ಮಾಡಲು ಸಿದ್ದ’: ಹೋರಾಟಗಾರರಿಗೆ ಹೆಗ್ಗಡೆ ಪರೋಕ್ಷ ಬೆದರಿಕೆ?

Swabhimana News Desk

ದಲಿತರಿಗೆ ವಂಚನೆ ಮಾಡಿದ ಕಾಂಗ್ರೆಸ್ ಸರಕಾರ.ನೈತಿಕ ಹೊಣೆ ಹೊತ್ತು. ಸಮಾಜಕಲ್ಯಾಣ ಸಚೀವ ಡಾ.ಹೆಚ್ ಸಿ ಮಹದೇವಪ್ಪ ರಾಜಿನಾಮೆಗೆ RPIK ಮತ್ತು ಕದಸಂಸ ಭೀಮವಾದ ಆಗ್ರಹ.

Swabhimana News Desk

ಎಸ್‍ಸಿ-ಎಸ್‍ಟಿ ಮೀಸಲು ಹಣ ಬಳಕೆಗೆ ಪಂಚತಂತ್ರ-2 ಜಾರಿ: ಸಚಿವ ಪ್ರಿಯಾಂಕ್ ಖರ್ಗೆ

Swabhimana News Desk

Leave a Comment