ಸೆಪ್ಟೆಂಬರ್ -18-2023
swabhimananews@gmail.com
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಟೋಪಿ ಹಾಕಿ ಸದ್ಯ ಕಂಬಿ ಎಣಿಸುತ್ತಿರುವ ಡೀಲ್ ಚೈತ್ರ ಉಡುಪಿಯಲ್ಲಿ ತಲೆ ಮರೆಸಿಕೊಂಡಿರುವ ಬಗ್ಗೆ ಸಿಸಿಬಿಗೆ ಮಾಹಿತಿ ನೀಡಿದ್ದೇ ಹಿಂದೂ ಸಂಘಟನೆಯ ಕಾರ್ಯಕರ್ತರು ಎನ್ನುವ ಮಾಹಿತಿ ಲಭ್ಯವಾಗಿದೆ.
2023 ರೈ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರಿನ ಎಂಎಲ್‌ಎ ಸೀಟ್ ಕೊಡಿಸುವುದಾಗಿ ಸಂಘ ಪರಿವಾರದ ನಕಲಿ ಟೀಂ ಸೃಷ್ಟಿಸಿ ಕೊಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ದ ಚೈತ್ರಳ ಬಗ್ಗೆ ಉದ್ಯಮಿ ಗೋವಿಂದ ಪೂಜಾರಿ ತನಗೆ ಗೊತ್ತಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರಲ್ಲಿ ಬೇಸರ ತೊಡಿಕೊಂಡಿದ್ದರು ಎನ್ನಲಾಗಿದೆ.

ಚೈತ್ರಾಳ ಈ ಕೆಲಸದಿಂದಾಗಿ ಸಂಘಟನೆಗಳಿಗೆ ಭಾರೀ ಇರಿಸು ಮುರಿಸು ಉಂಟಾಗಿತ್ತು.ರಾಜ್ಯ ಮಟ್ಟದಲ್ಲೂ ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.ಕೆಲವರು ಬಹಿರಂಗವಾಗಿಯೇ
ಸೋಶಿಯಲ್ ಮೀಡಿಯದಲ್ಲಿ ಈಕೆಯ ಮಹಾನ್ ಕಾರ್ಯಗಳನ್ನ ಬರೆದುಕೊಂಡಿದ್ದರು.

ಅಷ್ಟೇ ಅಲ್ಲದೇ ಈ ಉಡುಪಿಯ ಹಿಂದೂ ಸಂಘಟನೆಯ ಕಾರ್ಯಕರ್ತರಿಗೂ ಚೈತ್ರಾಳಿಗೂ ಹಿಂದಿನಿಂದಲೂ ಅಸಮಾಧಾನ ಇತ್ತು.!ಜೊತೆಗಿದ್ದವರನ್ನೇ ಒವರ್ ಟೇಕ್ ಮಾಡುವ ಚೈತ್ರಳಾ ಸ್ವಭಾವ ಹೆಚ್ಚು ಸಂಘಪರಿವಾರದ ನಾಯಕರಿಗೆ, ಕಾರ್ಯಕರ್ತರಿಗೆ ಇಷ್ಟವಾಗುತ್ತಿರಲಿಲ್ಲ.ಕಳೆದ ಬಾರಿ ಕೆಲವು ವರ್ಷಗಳ ಹಿಂದೆ ಸುಬ್ರಮಣ್ಯದಲ್ಲಿ ನಡೆದ ಘಟನೆಯ ಬಳಿಕ ಚೈತ್ರಾ ಕರಾವಳಿ ಭಾಗದಲ್ಲಿ ಅಷ್ಟೇನು ಕಾಣಿಸಿಕೊಂಡಿರಲಿಲ್ಲ.ಅದರೆ ಅಕೆಯ ಜನಪ್ರಿಯತೆ ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿತ್ತು.ಹಿಂದೂ ಹೆಣ್ಣು ಹುಲಿ,ಹಿಂದೂ ಲೇಡಿ ಫೈರ್ ಬ್ರ್ಯಾಂಡ್ ಎನ್ನುವ ಬಿರುದುಗಳು ಚೈತ್ರಾಳ ಮುಡಿಗೇರಿದ್ದವು.
ಚೈತ್ರಾಳ ಈ ಬೆಳವಣಿಗೆ ಸಹಜವಾಗಿ ಕರಾವಳಿಯ ಕೆಲವೊಂದು ನಾಯಕರಿಗೆ ಅರಗಿಸಲಾಗದ ತುತ್ತಾಗಿ ಬಿಟ್ಟಿತ್ತು.ಯಶಸ್ಸಿನ ತುತ್ತತುದಿಯಲಿದ್ದ ಆ ಹುಡುಗಿ ಚೈತ್ರಾ ಮಾಡಿದ ಎಡವಟ್ಟು ಈಗ ಅಕೆಯನ್ನೇ ಸುಟ್ಟು ಬಿಟ್ಟಿದೆ.
ಗೋವಿಂದ ಬಾಬು ಪೂಜಾರಿ ತನಗಾಗಿರುವ ವಂಚನೆ ಬಗ್ಗೆ ಸಂಘ ಪರಿವಾರದ ಬಳಿ ಹೇಳಿಕೊಂಡಿದ್ದರೂ ಸಹ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗಿರಲಿಲ್ಲ.ಅದರೆ ಸಂಘ ಪರಿವಾರಕ್ಕೆ ಇದನ್ನು ಬಿಡುವ ಪ್ರಶ್ನೆ ಇರಲಿಲ್ಲ.ಮೊದಲೇ ಈಕೆಯ ವಿರುದ್ದ ಕಿಡಿಕಾರುತ್ತಿದ್ದವರಂತೂ .. ಆಕೆಯನ್ನು ಸಿಕ್ಕಿಸಿ ಹಾಕೋಕೆ ಇದಕ್ಕಿಂತ ಬೇರೊಂದು ಅವಕಾಶ ಸಿಗೋದೇ ಇಲ್ಲ ಅನ್ನೋದನ್ನ ಅರಿತ ಸಂಘಟನೆ ವ್ಯವಸ್ಥಿತವಾಗಿ ಚೈತ್ರಾಳನ್ನು ಹೆಣೆಯಲು ಮಾಸ್ಟರ್ ಪ್ಲಾನ್ ಮಾಡಿತ್ತು ಎನ್ನಲಾಗಿದೆ.
ಗೋವಿಂದ ಬಾಬು ಪೂಜಾರಿ ಬೆನ್ನಿಗೆ ನಿಂತು ಪೊಲೀಸ್ ದೂರು ಕೊಡುವುದರಿಂದ ಹಿಡಿದು ಉಡುಪಿಯಲ್ಲಿ ಚೈತ್ರಾಳನ್ನ ಸಿಸಿಬಿ ಪೊಲೀಸರ ಕೈಗೆ ಹಿಡಿದುಕೊಡೊ ವರೆಗೆ ಸಂಘಟನೆ ಕೆಲಸ ಮಾಡಿದೆ.
ಚೈತ್ರಾಳ ಮೇಲೆ ಕೇಸು ದಾಖಲಾದಾಗ ಅಕೆ ತಲೆ ಮರೆಸಿಕೊಂಡಿದ್ದ ಮುಸ್ಲಿಂ ಸ್ನೇಹಿತೆಯ ಮನೆಯ ಸುಳಿವನ್ನು ಸಂಘಟನೆಯ ಕಾರ್ಯಕರ್ತರು ನೀಡಿದ್ದರು.ಉಡುಪಿಗೆ ಚೈತ್ರಾಳನ್ನು ಬಂಧಿಸಲು ಬರುವ ವಿಚಾರ ಉಡುಪಿ ಪೊಲೀಸರಿಗಾಗಲೀ, ಮಾಧ್ಯಮದವರಿಗೆ ಆಗಲೀ ಮಾಹಿತಿ ಇರಲಿಲ್ಲ.ಅದರೆ ಆಕೆಯನ್ನ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದಾಗ ಸಿಸಿಬಿ ಪೊಲೀಸರ ಜೊತೆ ಹಿಂದೂ ಸಂಘಟನೆಯ ಕಾರ್ಯಕರ್ತರಿದ್ದರು.ಮತ್ತು ಆಸಂಧರ್ಭದಲ್ಲಿ ಅಕೆಯ ವಿಡಿಯೋ ವನ್ನು ಕೂಡ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಾಡಿದ್ದರು ಎನ್ನಲಾಗಿದೆ.

swabhimananews@gmail.com