ಆಗಸ್ಟ್ -21-2023 swabhimananews@gmail.com
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಜಿಲ್ಲೆ ಮತ್ತು ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಇದರ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಹಿಂದೂ ಧರ್ಮದ ನಾಗರಪಂಚಮಿ ಆಚರಣೆ ಹೆಸರಲ್ಲಿ ಪೌಷ್ಠಿಕ ಆಹಾರವಾದ ಹಾಲು,ತುಪ್ಪ,ಎಳನೀರು,
ಜೇನು ತುಪ್ಪ ಇತ್ಯಾದಿಗಳನ್ನು ಜೀವವಿರದ ಕಲ್ಲು ನಾಗನಿಗೆ ಎರೆದು ಮಣ್ಣು ಪಾಲು ಮಾಡುತ್ತಿರುವವರಿಗೆ ಸಂದೇಶ ನೀಡುವ ಉದ್ದೇಶದಿಂದ
ಸಮಾಜದಲ್ಲಿ ಅದೆಷ್ಟೋ ಬಡವರು, ನಿರ್ಗತಿಕರು, ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ನಾಗರೀಕ ಸಮಾಜದಲ್ಲಿ ಕಣ್ಣಾರೆ ಕಂಡರೂ ಅಂತಹ ಅಪೌಷ್ಠಿಕತೆಯಿಂದ ಬಳಲುತ್ತಿರುವ ಜೀವ ಇರುವ ಮನುಷ್ಯರಿಗೆ ಇಂತಹ ಪೌಷ್ಠಿಕ ಆಹಾರವನ್ನು ನೀಡಲ್ಲ.
ಹಿಂದೂ ಧರ್ಮದ ನಾಗರ ಪಂಚಮಿಯಂದು ನಿರ್ಜೀವ ಕಲ್ಲು, ಮಣ್ಣು,ಹುತ್ತಕ್ಕೆ ಹಾಲು, ತುಪ್ಪ, ಎಳನೀರು ಮುಂತಾದ ಪೌಷ್ಠಿಕ ಆಹಾರವನ್ನು ವ್ಯರ್ಥ ಮಾಡುವವರಿಗೆ ನಾಗರಿಕ ಬದುಕು, ಮಾನವೀಯತೆ, ಮನುಷ್ಯತ್ವ,
ಸಾಮಾನ್ಯ ಜ್ಞಾನದ ಅರಿವನ್ನು ಮೂಡಿಸುವ ಕಾರ್ಯವನ್ನು ಕಳೆದ 14 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವಂತೆ ಈ ಬಾರಿಯೂ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದಲ್ಲಿರುವ ಚೈತನ್ಯ ಚಾರಿಟೇಬಲ್ ಟ್ರಸ್ಟ್ ರವರ ವಿಶೇಷ ಚೇತನ ಮಕ್ಕಳಿಗೆ ಹಾಗೂ ಉಡುಪಿ ತಾಲೂಕಿನ ಮೂಡುತೋನ್ಸೆ ಗ್ರಾಮದ ಸ್ಪಂದನಾ ದಿವ್ಯಾಂಗರ ತರಬೇತಿ ಮತ್ತು ಸಂರಕ್ಷಣಾ ಸಂಸ್ಥೆಯ ವಿಶೇಷ ಚೇತನ ಮಕ್ಕಳಿಗೆ ಹಾಲು,
ಹಣ್ಣುಹಂಪಲು ಮತ್ತು ದಿನಬಳಕೆಯ ಸಾಬೂನು, ಪೇಸ್ಟ್, ಇತ್ಯಾದಿಗಳನ್ನು ನೀಡಿ ಈ ರೀತಿಯಾಗಿ ಇಂತಹ ವಿಶೇಷ ಚೇತನರಿಗೆ ಪೌಷ್ಠಿಕ ಆಹಾರವನ್ನು ನೀಡುವ ಮೂಲಕ ನಾಗರಪಂಚಮಿ ಆಚರಣೆ ಮಾಡುವಂತೆ ಸಮಾಜಕ್ಕೆ ಪಕ್ಷದ ಮತ್ತು ಸಂಘಟನೆಯ ರಾಜ್ಯ ಮುಖಂಡರಾದ ಶೇಖರ್ ಹಾವಂಜೆ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕರಾದ ಸಂಜೀವ ಕುಕ್ಕೆಹಳ್ಳಿ, ಸಂಘಟನಾ ಸಂಚಾಲಕರಾದ ವಿಠ್ಠಲ ಹಾವಂಜೆ, ಜಿಲ್ಲಾ ಖಜಾಂಚಿ ಪೃಥ್ವಿ ಒಳಗುಡ್ಡೆ, ಸಮಿತಿ ಸದಸ್ಯರಾದ ಸುಜಾತ ಎಸ್ ಹಾವಂಜೆ, ಸುನೀತ,ನಾಥು,ಅನಿಲ್ ಫೆರ್ನಾಂಡಿಸ್ ಬಾರ್ಕೂರು,
ಮುದ್ದು ಅಜೆಕಾರು,ಶರತ್ ಎಸ್ ಹಾವಂಜೆ, ಶ್ರೇಯಾ ವಿ ಹೆಚ್,ಮಹಾಬಲ, ಪ್ರತಾಪ್, ಬೇಬಿ ಮತ್ತು ಸ್ಪಂದನಾ ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರಾದ ಉಮೇಶ್ ನಾಕೂರು,ಮತ್ತು ಸಿಬ್ಬಂದಿ ವರ್ಗ ಹಾಗೂ ಜನಾರ್ಧನ್ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
swabhimananews@gmail.com