ಅಕ್ಟೋಬರ್ 06-2024.swabhimananews
ದಿನಾಂಕ 06-10-2024 ರಂದು ಉಡುಪಿ ಜಿಲ್ಲೆಯ ಹಾವಂಜೆ ಗ್ರಾಮದ ಬೋಧಿಸತ್ವ ಬುದ್ಧ ಫೌಂಡೇಶನ್ ನ ಬೋಧಿಸತ್ವ ಬುದ್ಧ ವಿಹಾರದಲ್ಲಿ ಬುದ್ಧವಂದನೆ, ಧ್ಯಾನ, ಮೈತ್ರಿ ಧ್ಯಾನ ನಡೆಯಿತು
ನಂತರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಾನ್ಯ ಸೋಮಪ್ಪ ರವರು ಮಾತನಾಡಿ ಮುಂದೆ ಬೌದ್ಧ ಧಮ್ಮದ ಕಾರ್ಯಚಟುವಟಿಕೆಗಳು ಯಾವ ರೀತಿಯಲ್ಲಿ ನಡೆಯಬೇಕು, ಬುದ್ಧರ, ಬಾಬಾಸಾಹೇಬ್ ಅಂಬೇಡ್ಕರ್ ರವರ ಸತ್ಯದ ಮಾರ್ಗದಲ್ಲಿ ಯಾವ ರೀತಿಯಲ್ಲಿ ನಡೆಯಬೇಕು ಎನ್ನುವ ಬಗ್ಗೆ ವಿವರಣೆ ನೀಡಿದರು.
ಚಿಂತಕ ವಿಠ್ಠಲ್ ಸಾಲೀಕೇರಿ ರವರು ಮಾತನಾಡಿ ನಾವೆಲ್ಲರೂ ಬೌದ್ಧರು ನಮ್ಮ ಬಗ್ಗೆ, ನಮ್ಮ ಜಾತಿ, ಧರ್ಮದ ಬಗ್ಗೆ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡು ಧಮ್ಮ ಮಾರ್ಗದಲ್ಲಿ ನಡೆಯುವುದೇ ಬಾಬಸಾಹೇಬ್ ಅಂಬೇಡ್ಕರ್ ಮತ್ತು ಬುದ್ಧರಿಗೆ ನೀಡುವ ಗೌರವ ಎಂದರು.
ಹಾಗೂ ಬುದ್ಧ ಫೌಂಡೇಶನ್ ನ ಅಧ್ಯಕ್ಷರಾದ ಶೇಖರ್ ಹಾವಂಜೆರವರು ಮಾತನಾಡಿ ಮುಂದೆ ರಾಜ್ಯದಲ್ಲಿ ಬೌದ್ಧ ಧರ್ಮದ ನಿಗಮ ಮಂಡಳಿ ಸ್ಥಾಪಿಸುವಂತೆ ಮತ್ತು ಬೌದ್ಧ ಧಮ್ಮಕ್ಕೆ ಮರಳಿದವರಿಗೆ ಸಂವಿಧಾನ ಬದ್ಧವಾಗಿ ಜಾತಿ ಪ್ರಮಾಣ ಪತ್ರದಲ್ಲಿ ಧರ್ಮದ ಬಗ್ಗೆ ಹಾಗೂ ಜಾತಿಯ ಬಗ್ಗೆ ಉಲ್ಲೇಖ ಇರುವಂತೆ,
ಮಾರ್ಪಾಡು ಮಾಡುವಂತೆ ಮತ್ತು ಕಾನೂನು ಬದ್ಧವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕೃಷಿಗಾಗಿ ತಲಾ ಒಂದೊಂದು ಕುಟುಂಬಕ್ಕೆ ತಲಾ ಎರಡು ಎಕರೆ ಕೃಷಿ ಭೂಮಿಯನ್ನು ನೀಡುವಂತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉನ್ನತ ಮಟ್ಟದ ವಿದ್ಯಾಭ್ಯಾಸ ಮುಗಿಸಿ ಕುಳಿತಿರುವ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವಂತೆ ಸಭೆಯಲ್ಲಿ ಮಂಡಿಸಿದರು.
ಸಭೆಯಲ್ಲಿ ಎಲ್ಲರೂ ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದರು
ಈ ಸಂದರ್ಭದಲ್ಲಿ ಕದಸಂಸ ಭೀಮವಾದ (ರಿ)ನ,
(ಆರ್ ಪಿ ಐ ಕೆ ಪಕ್ಷದ) ಮತ್ತು ಬೋಧಿಸತ್ವ ಬುದ್ಧ ಫೌಂಡೇಶನ್ ನ ಪದಾಧಿಕಾರಿಗಳು, ಕಾರ್ಯಕರ್ತರು, ಬೌದ್ಧ ಉಪಾಸಕ, ಉಪಾಸಿಕರು , ಹಾಜರಿದ್ದರು. ಬೌದ್ಧ ಧಮ್ಮಾಚಾರಿಗಳಾದ ಶಂಭು ಸುವರ್ಣ,ಸೋಮಪ್ಪಸರ್, ವಿಠ್ಠಲ್ ಸಾಲಿಕೇರಿ, ಗೋವಿಂದ ಎನ್ ಆರ್, ಗೋಪಾಲ್ ಶಿವಪುರ,
ಪ್ರಭಾಕರ್ ಅಮ್ಮುಂಜೆ, ಪ್ರತಾಪ್ ಕುಡೂರು, ರೂಪ, ಮಹಾಬಲ, ಲೀಲಾ, ವನಿತಾ, ನಾರಾಯಣ, ಸುಜಾತ, ಪೃಥ್ವಿ ಒಳಗುಡ್ಡೆ, ಶೀಲಾ, ಸಂಜೀವ ಕುಕ್ಕೆಹಳ್ಳಿ ಹಾಗೂ ಅನೇಕರು ಉಪಸ್ಥಿತರಿದ್ದರು. ಟ್ರಸ್ಟ್ ನ ಕಾರ್ಯದರ್ಶಿ ಶರತ್ ಹಾವಂಜೆ ಸ್ವಾಗತಿಸಿದರು, ಬುದ್ಧ ಫೌಂಡೇಶನ್ ನ ಅಧ್ಯಕ್ಷರಾದ ಶೇಖರ್ ಹಾವಂಜೆ ಧನ್ಯವಾದಗೈದರು.