19.4 C
New York
12 September 2024
Coastal

ಮೂವತ್ತಮೂರು ಎಕರೆ ಕೆರೆ ಈವಾಗ ಇರೋದು ಬರೀ ಇಪ್ಪತ್ತ ಮೂರು ಎಕರೆ.!

ಜುಲೈ -18-2023 Swabhimananews@gmail.com

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ. ಚಾಂತರು ಮದಗ ಕೆರೆಯನ್ನು ಸುಮಾರು ಹತ್ತು ಎಕರೆಗೂ ಹೆಚ್ಚು ಕೆರೆ ಪ್ರದೇಶವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ.ಅದರಲ್ಲಿ ತೆಂಗು ಅಡಿಕೆ ತೋಟ, ಗದ್ದೆ ಮಾಡಿಕೊಂಡಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ವರ್ಷವಿಡೀ ನೀರು ತುಂಬಿಕೊಂಡಿರುವ ಈ ಕೆರೆಯಿಂದ ಎರಡು ಗ್ರಾಮದ ಜನರಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ.


ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಈ ಕೆರೆ ಅಭಿವೃದ್ದಿ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ ಮಾಡಿಕೊಂಡು ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಎಂದು ಜನರು ಆಡಿಕೊಳ್ಳುತ್ತಿದ್ದಾರೆ.
ಕೆರೆ,ತೋಡು, ನದಿ, ಹಳ್ಳ ಗಳು ಒತ್ತುವರಿಯನ್ನು ತೆರವು ಗೊಳಿಸುವಂತೆ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶ ಇದ್ದರೂ. ಭೂ ಕಳ್ಳರು ತಮ್ಮ ಕಳ್ಳ ದಂಧೆಯಲ್ಲಿ ರಾಜಾರೋಷವಾಗಿ ತೊಡಗಿಸಿಕೊಂಡಿದ್ದಾರೆ ಅದರಂತೆ ಮುಂದುವರಿಯುತ್ತಿದ್ದಾರೆ.

ಇದರಿಂದಾಗಿ ಪ್ರಕೃತಿ ನಾಶದ ಅಂಚಿಗೆ ಬರಲಿದೆ.ಮಾನವಕುಲಕ್ಕೆ ಬಹುದೊಡ್ಡ ಗಂಡಾಂತರ ಮುಂದಿದೆ ಎನ್ನುವುದನ್ನು ಜಿಲ್ಲೆಯ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಅರ್ಥ ಮಾಡಿಕೊಳ್ಳಬೇಕು.ಮತ್ತು ಜಿಲ್ಲೆಯ ಪ್ರತಿ ತಾಲೂಕಿನ ಗ್ರಾಮಗಳಲ್ಲಿಯೂ ಸರಕಾರಿ ಕೆರೆ,ನದಿ,ಮದಗ ತೋಡುಗಳನ್ನು ಒತ್ತುವರಿ ಮಾಡಿಕೊಂಡಿರುವುದರ ವಿರುದ್ಧ ಹೋರಾಡಬೇಕು.

ಮಾನ್ಯ ಜಿಲ್ಲಾಧಿಕಾರಿಗಳು ಉಚ್ಚ ನ್ಯಾಯಾಲಯದ ಅದೇಶದಂತೆ ಒತ್ತುವರಿ ಅಗಿರುವ ಕೆರೆಯ ಪ್ರದೇಶವನ್ನು ಮತ್ತೆ ಸರ್ವೆ ಮಾಡಿ ಸ್ವಾಧೀನ ಪಡಿಸಿಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸುತಿದ್ದಾರೆ.


ಆದುದ್ದರಿಂದ ನಮ್ಮ ಉಡುಪಿ ಜಿಲ್ಲೆಯಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡ ಮಾನ್ಯ ಜಿಲ್ಲಾಧಿಕಾರಿಗಳು ಈ ಕೂಡಲೇ ಜಿಲ್ಲೆಯಲ್ಲಿ ಒತ್ತುವರಿ ಗೊಂಡಿರುವ ನೂರಾರು ಕೆರೆಗಳನ್ನು , ತೋಡು,ಮದಗ, ನದಿಗಳನ್ನು ತೆರವು ಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು ಮತ್ತು ಸರಕಾರಿ ಕೆರೆ, ನದಿ , ಮದಗ, ತೋಡುಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲೆಯ ಜನತೆಯ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

Swabhimananews@gmail.com

Related posts

ಹಿಂದೂ ಧರ್ಮದ ನಾಗರಪಂಚಮಿಯಂದು ಪೌಷ್ಟಿಕ ಆಹಾರವಾದ ಹಾಲು, ತುಪ್ಪ, ಜೇನುತುಪ್ಪ, ಹಣ್ಣುಹಂಪಲು ಗಳನ್ನು ನಿರ್ಜೀವ ಕಲ್ಲಿಗೆ ಎರೆದು ವ್ಯರ್ಥ ಮಾಡದೆ. ಜಿಲ್ಲಾದ್ಯಂತ ಇರುವ ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ, ಅನಾಥರಿಗೆ, ವಿಶೇಷ ಚೇತನರಿಗೆ, ರೋಗಿಗಳಿಗೆ ನೀಡಿ.

Swabhimana News Desk

ದಕ್ಷಿಣಕನ್ನಡ: ಎಳನೀರು ಕುಡಿದು ಅಸ್ವಸ್ಥ ಪ್ರಕರಣ – ಫ್ಯಾಕ್ಟರಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ.

Swabhimana News Desk

ಕೋಟತಟ್ಟು ಗ್ರಾಮದಲ್ಲಿ ಅಕ್ರಮವಾಗಿ, ಕಾನೂನು ಬಾಹಿರವಾಗಿ, ಜನವಸತಿ ಪ್ರದೇಶದಲ್ಲಿ, ಗ್ರಾಮಸ್ಥರಿಗೆ ಮಾರಕ ವಾಗಿರುವ ಜನತಾ ಫಿಶ್ ಮಿಲ್ಲ್ ಬಂದ್ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ.ಮತ್ತು RPIK ಪಕ್ಷ ಚುನಾವಣಾಧಿಕಾರಿಗೆ ದೂರು.

Swabhimana News Desk

Leave a Comment