13.2 C
New York
14 October 2025
Karnataka

ಕಾಂಗ್ರೆಸ್ ಸರಕಾರ ದಲಿತರ ನಿಧಿಯನ್ನು ದುರ್ಬಳಕೆ ಮಾಡಿರುವುದನ್ನು ಉನ್ನತ ಮಟ್ಟದ ತನಿಖೆ ನಡೆಸುವಂತೆ. ಆಗ್ರಹಿಸಿ ಕ ದ ಸಂ ಸ ಭೀಮವಾದ ಮತ್ತು RPIK ವತಿಯಿಂದ ರಾಜ್ಯಪಾಲಾರಿಗೆ ದೂರು.

ಅಕ್ಟೋಬರ್ -03-2024 swabhimananews

ಕ ದ ಸಂ ಸ ಭೀಮವಾದ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಶೇಖರ್ ಹಾವಂಜೆ ರವರ ನೇತೃತ್ವದಲ್ಲಿ.
ಕಾಂಗ್ರೆಸ್ ಸರಕಾರ ದಲಿತರಿಗೆ ವಂಚನೆ ಮಾಡಿರುವುದನ್ನು ಉನ್ನತ ಮಟ್ಟದ ತನಿಖೆ ನಡೆಸುವಂತೆ,

ಹಾಗೂ ರಾಜ್ಯದಲ್ಲಿ ಬೌದ್ಧ ಧಮ್ಮದ ಅಭಿವೃದ್ಧಿಗಾಗಿ ನಿಗಮವನ್ನು ಸ್ಥಾಪಿಸುವಂತೆ, ಹಾಗೂ ಬೌದ್ಧ ಧರ್ಮಕ್ಕೆ ಮತಾಂತರ ಗೊಂಡವರಿಗೆ ನಮೂನೆ 1ರ ಸಂವಿಧಾನ ಪ್ರಕಾರ ಜಾತಿ ಪ್ರಮಾಣ ಪತ್ರದಲ್ಲಿ ಧಮ್ಮದ ಉಲ್ಲೇಖ ಇರುವಂತೆ ಈ ಕೂಡಲೇ ಮಾರ್ಪಡು ಮಾಡಬೇಕು.ಎಂಬ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ್ಯ ಎಲ್ಲಾ ಜಿಲ್ಲೆಗಳಲ್ಲಿ ಏಕ ಕಾಲದಲ್ಲಿ ಜಿಲ್ಲಾಧಿಕಾರಿಗಳ ಮುಕಾಂತರ ರಾಜ್ಯಪಾಲಾರಿಗೆ ಮನವಿ ಸಲ್ಲಿಸಲಾಯಿತು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಸ್.ಸಿ/ಎಸ್.ಟಿ ಸಮುದಾಯಗಳಿಗೆ ವಂಚಿಸುತ್ತ ಬಂದಿದೆ, ಕಳೆದ ಒಂದು ವರ್ಷದಿಂದ ಎಸ್.ಸಿ/ಎಸ್.ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ SCSP/TSP ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಸುಮಾರು 25ಸಾವಿರ ಕೋಟಿ ಹಣವನ್ನು ದುರುಪಯೋಗ ಪಡಿಸಿಕೊಂಡಿದೆ.

ಇದರಿಂದ ಈ ಸಮುದಾಯಗಳಿಗೆ ಸರ್ಕಾರ ಅನ್ಯಾಯ ಮಾಡಿದೆ. ಇದೇ ಸಂದರ್ಭದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರದಿಂದ ಕೋಟ್ಯಾಂತರ ರೂಪಾಯಿಗಳ ಹಣವನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದು ಸರ್ಕಾರದ ವೈಪಲ್ಯವಾಗಿದೆ. ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿದೆ.

ಮೂಡಾ ಹಗರಣದಲ್ಲಿ ಮಾನ್ಯ ಮುಖ್ಯಮಂತ್ರಿಗಳೆ ನೇರವಾಗಿ ಭಾಗಿಯಾಗಿದ್ದಾರೆ. ರಾಜ್ಯಸರ್ಕಾರ ನಡೆಸುವ ತನಿಖೆಯಿಂದ ನ್ಯಾಯ ಸಿಗುವುದಿಲ್ಲ.ಹಾಗೂ ಭ್ರಷ್ಟಾಚಾರದಿಂದ ಮುಖ್ಯಮಂತ್ರಿಗಳು ಮುಕ್ತರಾಗುವ ಸಂಭವ ಇಲ್ಲದಾಗಿದೆ.

ಈ ಎಲ್ಲದರ ಹಿನ್ನಲೆಯಲ್ಲಿ ಈ ಕೆಳಕಂಡ ಹಕ್ಕೊತ್ತಾಯಗಳನ್ನು ತಾವುಗಳು ಪರಿಶೀಲಿಸಿ ಈಡೇರಿಸಬೇಕು ಹಾಗೂ ಸೂಕ್ತಕ್ರಮ ತೆಗೆದುಕೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಭೀಮವಾದ (ರಿ)ಉಡುಪಿ ಜಿಲ್ಲೆ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ವತಿಯಿಂದ ದಿನಾಂಕ 03/10/2024 ರಂದು ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಡಾ.ವಿದ್ಯಾ ಕುಮಾರಿ ಇವರ ಮುಖಾಂತರ ಸನ್ಮಾನ್ಯ ರಾಜ್ಯಪಾಲರು , ರಾಜಭವನ ಕರ್ನಾಟಕ , ಬೆಂಗಳೂರು ಇವರಿಗೆ ಮನವಿ ಸಲ್ಲಿಸಲಾಯಿತು.

ನಮ್ಮ ಹಕ್ಕೋತ್ತಾಯಗಳು

ಎಸ್.ಸಿ/ಎಸ್.ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ SCSP/TSP ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದನ್ನು ಕೂಡಲೇ ವಾಪಸ ನೀಡಬೇಕು.
ಮೂಡಾ ಹಗರಣವನ್ನು ಸಿ.ಬಿ.ಐ. ತನಿಖೆಗೆ ವಹಿಸಬೇಕು.
ಎ.ಸಿ.ಎಸ್. ಮಣಿವಣ್ಣನನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು.

ವಸತಿಶಾಲೆಗಳ ನೇಮಕದಲ್ಲಿ ವಿಧಿಸಿರುವ ನಿಬಂಧನೆಗಳನ್ನು ಕೂಡಲೇ ರದ್ದು ಪಡಿಸಿ ಎಲ್ಲಾ ಮಕ್ಕಳಿಗೆ ಅವಕಾಶ ಕಲ್ಪಿಸಿಕೊಡಬೇಕು.
ಮೂಡಾಹಗರಣದಲ್ಲಿ ಭಾಗಿಯಾಗಿರುವ ಭ್ರಷ್ಟರನ್ನು ಕೂಡಲೇ ಬಂಧಿಸಬೇಕು ಇದರ ನೇರ ಹೊಣೆಗಾರಿಕೆಯನ್ನು ಮುಖ್ಯಮಂತ್ರಿಗಳು ವಹಿಸಬೇಕು.ಈ ಪ್ರಕರಣವನ್ನು ಕೂಡಲೇ ಸಿ.ಬಿ.ಐ ತನಿಖೆಗೆ ನೀಡಬೇಕು.

ಮಹರ್ಷಿ ವಾಲ್ಮೀಕಿ ನಿಗಮದ ಅವ್ಯವಹಾರದ ಹೊಣೆಯನ್ನು ಮುಖ್ಯಮಂತ್ರಿಗಳು ವಹಿಸಿಕೊಳ್ಳಬೇಕು. ಭ್ರಷ್ಟರ ಆಸ್ತಿಗಳನ್ನು ಸರಕಾರ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು.

ಬೌದ್ಧ ಸಮಾಜದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಕರ್ನಾಟಕ ಬೌದ್ಧ ಧರ್ಮ ಅಭಿವೃದ್ಧಿ ನಿಗಮವನ್ನು ಕೂಡಲೇ ಸ್ಥಾಪಿಸಬೇಕು.
ಬೌದ್ಧಧರ್ಮಕ್ಕೆ ಮತಾಂತರಗೊಂಡಿರುವ (ನಮೂನೆ1) ಸಂವಿಧಾನ ಕಾಯಿದೆ ಪ್ರಕಾರ ಜಾತಿ ಪ್ರಮಾಣ ಪತ್ರದಲ್ಲಿ ಧರ್ಮದ ಉಲ್ಲೇಖ ಇರುವಂತೆ ಮಾರ್ಪಾಡು ಮಾಡಬೇಕು.

ಪ್ರತೀ ಹಳ್ಳಿಯ ಎಸ್.ಸಿ. ಎಸ್.ಟಿ ಸಮುದಾಯಗಳಿಗೆಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ಸ್ಮಶಾನಕ್ಕೆ ಭೂಮಿಯನ್ನು ನಿಗದಿಪಡಿಸಬೇಕು (ಕಾಯ್ದಿರಿಸಬೇಕು).
ಎಂದು ಮನವಿಯಲ್ಲಿ ತಿಳಿಸಲಾದೆ.ಈ ಮನವಿಯನ್ನು ಉಡುಪಿ ಜಿಲ್ಲಾಧಿಕಾರಿಗಳಾದ ಡಾ. ವಿದ್ಯಾ ಕುಮಾರಿ ರವರ ಮೂಲಕ ರಾಜ್ಯಪಾಲಾರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ. ರಾಜ್ಯ ಸಂಘಟನಾ ಸಂಚಾಲಕರಾದ ಶೇಖರ್ ಹಾವಂಜೆ,RPIK ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರಾದ ಸದಾಶಿವಶೆಟ್ಟಿ ಹೆರೂರ್, ಕದಸಂಸ ಭೀಮವಾದ ದ ಜಿಲ್ಲಾ ಸಂಘಟನಾ ಸಂಚಾಲಕರಾದ ಗೋಪಾಲ್ ಶಿವಪುರ, ರಮೇಶ್ ಮಾಭಿಯಾನ್, ಪ್ರಭಾಕರ್ ಅಮುಂಜೆ,ಬೌದ್ಧ ಧಮ್ಮದ ಧಮ್ಮಚಾರಿ ಶಂಭು ಸುವರ್ಣ, ಸಾಮಾಜಿಕ ಹೋರಾಟಗಾರ ಅನಿಲ್ ಫೆರ್ನಾಂಡಿಸ್, ಸಮಿತಿಯ ಸದಸ್ಯರಾದ ಸುಜಾತ ಎಸ್ ಹಾವಂಜೆ, ಸುನಿತಾ ಒಳಗುಡ್ಡೆ, ನಾರಾಯಣ್ ಒಳಗುಡ್ಡೆ, ಶೇಖರ್ ಪಡುಕುಡೂರು,
ಕ ದ ಸಂ ಸ ಭೀಮವಾದದ ಉಡುಪಿ ಜಿಲ್ಲಾ ಖಜಾಂಚಿ ಪೃಥ್ವಿ ಒಳಗುಡ್ಡೆ.ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Swabhimananews.

Related posts

ಬಿಜೆಪಿಯಿಂದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಉಚ್ಚಾಟನೆ

Swabhimana News Desk

ಹೆಚ್‌.ಡಿ. ರೇವಣ್ಣ , ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ.ಪ್ರಕರಣ ದಾಖಲು!

Swabhimana News Desk

ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ : ಆರೇಂಜ್ ಅಲರ್ಟ್ ಘೋಷಣೆ.

Swabhimana News Desk

Leave a Comment