ಉಡುಪಿ – ಜುಲೈ -30-2025-swabhimananews
ಉಡುಪಿಯ ಬನ್ನಂಜೆಯಲ್ಲಿರುವ ಶ್ರಿಮಂತ ಕುಳನ ಬಾರೀ ಕಪ್ಪಕಾಣಿಕೆಗೆ ಕೆಲವೊಂದು ರಾಜಕಾರಣಿಗಳು, ಅಧಿಕಾರಿಗಳು ಸೇರಿಕೊಂಡು ಬನ್ನಂಜೆಯ ರಾಷ್ಟ್ರೀಯ ಹೆದ್ದಾರಿ ಡಿವೈಡರ್ ರನ್ನು ಸರಕಾರಿ ಕಚೇರಿಗಳ ರಜಾ ದಿನವನ್ನು ನೋಡಿಕೊಂಡು ಒಡೆದು ಹಾಕಲಾಗಿದೆ.
ಈ ಬಗ್ಗೆ ಸಾರ್ವಜನಿಕರು ನಗರಸಭೆ ಪೌರಾಯುಕ್ತ,ಇಂಜಿನಿಯರ್ ,
ಅಧ್ಯಕ್ಷರು,ಸದಸ್ಯರು, ಶಾಸಕರು ಹೆದ್ದಾರಿ ಇಲಾಖೆಯ ಇಂಜಿನಿಯರ್ ಮಂಜುನಾಥ ಎನ್ನುವವರಿಗೆ ಕರೆ ಮಾಡಿದರೂ ಯಾರೂ ಕೂಡ ತಲೆ ಕೆಡಿಸಿಕೊಂಡಿಲ್ಲ. ನಿಯಮದಂತೆ ಹೆದ್ದಾರಿ ಡಿವೈಡರ್ ಗಳನ್ನು ಮುಟ್ಟುವಂತಿಲ್ಲ.ಹೆದ್ದಾರಿ ಸುರಕ್ಷಾತಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ,ನಿರ್ಣಯ ಕೈಗೊಳ್ಳಬೇಕಿತ್ತು.
ಅದರೆ ಬನ್ನಂಜೆ ಯಲ್ಲಿ ಅಂತಹ ಗಂಭೀರ ಸಮಸ್ಯೆ ಇರಲಿಲ್ಲ.ಬನ್ನಂಜೆ ಯ ನಿಯಮ ಬಾಹಿರ ಕಟ್ಟಡದಿಂದ ಸಮಸ್ಯೆ ಉಂಟಾಗಿದೆ.ನಿಗದಿತ ಸೆಟ್ ಬ್ಯಾಕ್,ಹೆದ್ದಾರಿಗೆ ಬಿಡಬೇಕಾದ ಭೂಮಿ ಬಿಟ್ಟುಕೊಡದೆ ಇದ್ದುದ್ದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ.ಅಲ್ಲದೆ ವಿರುದ್ಧ ದಿಕ್ಕಿನಿಂದ ಬಟ್ಟೆ ಅಂಗಡಿಗೆ ಬರುವ ವಾಹನ ಗಳಿಂದಾಗಿ ಟ್ರಾಫಿಕ್ ಜಾಮ್ ಅಗುತ್ತಿದೆ.ಇಲ್ಲಿ ಡಿವೈಡರ್ ಸಮಸ್ಯೆ ಇರಲ್ಲಿಲ್ಲ.ಬಟ್ಟೆ ಅಂಗಡಿಯೇ ಸಾರ್ವಜನಿಕರಿಗೆ ಅತಿ ದೊಡ್ಡ ತಲೆನೋವಾಗಿದೆ.
ಬಿಸ್ಕತ್ ತಿನ್ನುವ ನಗರಸಭೆ ಅಡಳಿತ ,ಇದಕ್ಕೆ ಕೈ ಜೋಡಿಸಿದೆ. ಜಿಲ್ಲಾಧಿಕಾರಿಗಳ ಗಮನಕ್ಕೆ ಬಾರದೇ ಡಿವೈಡರ್ ಧ್ವಂಸ ಮಾಡಿದ ದೂರಿಗೆ ಸಂಭಂಧಿಸಿ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು,ಉತ್ತರ ನೀಡುವಂತೆ ನೋಟಿಸ್ ನೀಡಿದ್ದಾರೆ.
ಈ ಅಕ್ರಮದ ವಿರುದ್ದ ಹೆದ್ದಾರಿ ಅಧಿಕಾರಿ ವಿರುದ್ದ ಸಾರ್ವಜನಿಕರ ಅಸ್ತಿ ನಾಶಪಡಿಸಿ ಕಾನೂನು ಉಲ್ಲಂಘಿಸಿ ದ ಕಾರಣಕ್ಕೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.
ನಗರ ಸಭೆಯ ಅಧ್ಯಕ್ಚ ,ಶಿರಿಬೀಡು ಹಾಗೂ ಬನ್ನಂಜೆ ನಗರಸಭೆಯ ಸದಸ್ಯರುಗಳು,ಈ ಹಗರಣದಲ್ಲಿ ಭಾಗಿಯಾಗದಿದ್ದರೇ ಮೌನ ಮುರಿದು ,ಇಂದು ನಡೆಯುವ ನಗರಸಭೆ ಸಾಮಾನ್ಯ ಸಭೆಯಲ್ಲಿ ಒಕ್ಕೊರಳಿನಿಂದ ವಿರೋಧ ವ್ಯಕ್ತಪಡಿಸಿ,ಕಾನುನು ಬಾಹಿರ ಕಟ್ಟಡದ ವಿರುದ್ದ ಕ್ರಮ ಕೈಗೊಳ್ಳಬೇಕು,ಉಡುಪಿ ಶಾಸಕರು ವಿರೋಧ ಪಕ್ಷದ ಸದಸ್ಯರು ಈ ಪ್ರಕರಣದ ಬಗ್ಗೆ ನಗರ ಸಭೆ ಸಾಮಾನ್ಯ ಸಭೆಯಲ್ಲಿ ಯಾವ ರೀತಿ ಧ್ವನಿ ಎತ್ತುತ್ತಾರೆ ಎಂದು ಕಾದು ನೋಡಬೇಕು.
ಯಾಕೆಂದರೆ ಜನ ಎಲ್ಲವನ್ನು ನೋಡುತ್ತಿದ್ದಾರೆ,ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದಾರೆ.ಅಧಿಕಾರಿಗಳನ್ನು ಜನ ಪ್ರತಿನಿಧಿಗಳನ್ನು ಹೀಗೆ….ಬಿಟ್ಟರೆ ಕಾಸಿಗಾಗಿ ನಮ್ಮ ಊರನ್ನೆ ಮಾರಿಬಿಡುತ್ತಾರೆ.ಎನ್ನುತ್ತಾರೆ ಸಾರ್ವಜನಿಕರು
Swabhimananews