ಉಡುಪಿ:ಆಗಸ್ಟ್-22-2025 Swabhimananews
ಮ್ಯಂಜಮ್ ಮರದ ನೆಪದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಇತರೆ ಜಾತಿಯ ಮರಗಳನ್ನು ಅಕ್ರಮವಾಗಿ ಕಡಿದು ತಮಿಳ್ನಾಡು,ಹಾಗೂ ಇತರೆ ಹೊರ ರಾಜ್ಯಕ್ಕೆ ಸಾಗಾಟ.ಬೆಂಬಲಕ್ಕೆ ನಿಂತ ಉಡುಪಿ.ವಲಯದ
RFO, DRFO, beet forest.
ಅರಣ್ಯ ಇಲಾಖೆಯ ಅನುಮತಿ, ಪರವಾನಿಗೆ ಇಲ್ಲದೆ ಕಡಿದು ಸಾಗಾಟ ಮಾಡಬಹುದೆಂದು ಇಲಾಖೆ ಘೋಷಣೆ ಮಾಡಿರುವ ಮೆಂಜಮ್ ಮರ ಕಟಾವು /ಸಾಗಾಟದ ನೆಪದಲ್ಲಿ ಸೋಮೇಶ್ವರ ಅಭಯಾರಣ್ಯ,ಹೆಬ್ರಿ, ಪೆರ್ಡೂರು,ಕುಕ್ಕೆಹಳ್ಳಿ,ಹರಿಖಂಡಿಗೆ,
ಕಡ್ತಲ,ದೊಂಡೆರಂಗಡಿ,
ಹಾಗೂ ಮುಂತಾದ ಕಡೆಗಳಲ್ಲಿ ಅಕ್ರಮವಾಗಿ ಸರಕಾರಿ, ಅರಣ್ಯ ಹಾಗೂ ಖಾಸಗಿ ಭೂಮಿಗಳಲ್ಲಿದ್ದ ಬೃಹತ್ ಗಾತ್ರದ ಬೋಗಿ, ಸಾಗುವಾನಿ, ಅಕೇಶಿಯ,ಧೂಪ,ಗುಗುಳಿದೀಪ, ಹಾಗೂ ವಿವಿಧ ಜಾತಿಯ ಬೆಲೆಬಾಳುವ ಮರಗಳನ್ನು ಕಳೆದ ಒಂದು ವರ್ಷದಿಂದ ನಿರಂತರವಾಗಿ ಕಟಾವು ಮಾಡಿ,ಕಳ್ಳಸಾಗಣೆ ಮಾಡಿರುವ ಬೃಹತ್ತ್ ಟಿಂಬರ್ ಮಾಫಿಯಾ ದಂಧೆ ಇದೀಗ ಬಯಲಾಗಿದೆ.
ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಹಿರಿಯಡ್ಕದ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಜೊಟ್ಟಿ ಎಂಬಲ್ಲಿ.
ಬಾರಿ ಪ್ರಮಾಣದ ವಿವಿಧ ಜಾತಿಯ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ದಾಸ್ತಾನಿಟ್ಟು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಅಮೂಲ್ಯವಾದ ಮರಗಳನ್ನು ಅಕ್ರಮವಾಗಿ ಬೃಹತ್ ಗಾತ್ರದ ಲಾರಿಗಳ ಮೂಲಕ ಪ್ರತಿದಿನ ಹತ್ತಾರು ಲೋಡ್ ಗಟ್ಟಲೆ ಮರಗಳನ್ನು ಹೊರರಾಜ್ಯಗಳಾದ ತಮಿಳುನಾಡು,ಕೇರಳ ಹಾಗೂ ಮುಂತಾದ ಕಡೆಗಳಿಗೆ ಕಳ್ಳಸಾಗಾಟ ಮಾಡುತಿದ್ದಾರೆ.
ಇದು ಕಳೆದ ಒಂದು ವರ್ಷದಿಂದ ನಿರಂತರವಾಗಿ
ರಾತ್ರಿ ಹಗಲು ಎನ್ನದೆ ನಡೆಯುತ್ತಿದೆ.
ಈ ಒಂದು ಬೃಹತ್ ಅಕ್ರಮ,ಕಳ್ಳದಂಧೆಯಲ್ಲಿ ಅರಣ್ಯ ಇಲಾಖೆಯ ಉಡುಪಿ ವಲಯದ RFO, ಹಿಂದಿನ DRFO,ಪ್ರಸ್ತುತ beet forest ರವರ ಸಂಪೂರ್ಣ ಬೆಂಬಲ, ಸಹಕಾರದಿಂದ ಮತ್ತು ಸ್ಥಳೀಯ ಜನಪ್ರತಿನಿಧಿಗಳ,ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಇತರೆ ಇಲಾಖೆಗಳ ಅಧಿಕಾರಿಗಳ ಬೆಂಗಾವಲಿನಿಂದ ಮತ್ತು ಅಲ್ಲಿನ,ಕೆಲವು ಪ್ರಭಾವಿ ಜನಪ್ರತಿನಿದಿಗಳ ಸಂಪೂರ್ಣ ಜವಾಬ್ದಾರಿಯಿಂದ ನಡೆಯುತ್ತಿತ್ತು ಎನ್ನಲಾಗಿದೆ.
ತಮಿಳುನಾಡು ಮೂಲದ ವ್ಯಕ್ತಿಯೋರ್ವರ ಹೆಸರಲ್ಲಿ ನಡೆಯುತ್ತಿರುವ ಬಹುಕೋಟಿಯ ಅಕ್ರಮ ದಂಧೆ ಇದಾಗಿದೆ ಎಂದು ಸ್ಥಳೀಯರು, ಗ್ರಾಮಸ್ಥರು, ಸಾಮಾಜಿಕ ಹೋರಾಟಗಾರರ, ಹಾಗೂ ಕೆಲವು ಸ್ಥಳೀಯ ಸಂಘ ಸಂಸ್ಥೆಗಳು, ಪ್ರಾಮಾಣಿಕ ಸ್ಥಳೀಯ ಜನಪ್ರತಿನಿಧಿಗಳ ಆರೋಪ.
ಈ ಬಗ್ಗೆ ಕೆಲವು ಸ್ಥಳೀಯ ಜನಪ್ರತಿನಿಧಿಗಳು ಪೋಲಿಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಈ ಪ್ರಕರಣದಲ್ಲಿ ಕಾರ್ಕಳದ ಪೋಲಿಸ್ ಅಧಿಕಾರಿಯೊಬ್ಬರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ.
ಈ ತಮಿಳ್ನಾಡು ಮೂಲದ ವ್ಯಕ್ತಿಯನ್ನು ಮುಂದೆ ಬಿಟ್ಟು.
ಕಾರ್ಕಳ ಹಾಗೂ ಇನ್ನಿತರ ಕಡೆಗಳಲ್ಲಿ ಇಂತಹ ಅಕ್ರಮ ಮರದ ದಾಸ್ತಾನು ಕೇಂದ್ರಗಳನ್ನು ನಿರ್ಮಿಸಿಕೊಂಡು ಹೊರ ರಾಜ್ಯಕ್ಕೆ ನಿರಂತರವಾಗಿ ತಿಂಗಳಿಗೆ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ.
ಇದು ತಮಿಳುನಾಡಿನಿಂದ ವಿದೇಶಗಳಿಗೆ ಭಾರೀ ಮೊತ್ತಕ್ಕೆ ರಫ್ತಾಗುತ್ತಿರುವ ಬಗ್ಗೆಯೂ ಮಾಹಿತಿಗಳು ದೊರೆತ್ತಿವೆ.
ಪಶ್ಚಿಮ ಘಟ್ಟದತಂಹ ಸೂಕ್ಷ್ಮ ಪ್ರದೇಶಗಳಲ್ಲಿ ಈ ರೀತಿ ಹಾಡಹಗಲೇ ಸಸ್ಯರಾಶಿಗಳನ್ನು ಕಡಿದು ಸಾಗಾಟ ಮಾಡುವ ದಂಧೆಯ ಹಿಂದೆ ಉಡುಪಿ ವಲಯಾರಣ್ಯಾಧಿಕಾರಿಗಳ ಬೆಂಬಲ ಇರುವ ಬಗ್ಗೆ ಕೂಡ ಅರೋಪ ಕೇಳಿ ಬರುತ್ತಿದೆ.
ಕಳೆದ ಒಂಬತ್ತು ತಿಂಗಳಿನಿಂದ ಬಹಿರಂಗವಾಗಿ ಹಾಡುಹಗಲೇ ಮರಗಳನ್ನು ಕಡಿದು ,ಅಕ್ರಮವಾಗಿ ಶೇಖರಣೆ ಮಾಡಿರುವ ಬಗ್ಗೆ ಪರಿಸರ ಪ್ರೇಮಿಗಳು ಸಾಮಾಜಿಕ ಕಾರ್ಯ ಕರ್ತರು,ಸ್ಥಳೀಯ ಗ್ರಾಮ ಪಂಚಾಯತ್ ಮುಖಂಡರು ದೂರು ನೀಡಿದರೂ ಕೂಡ,ಹಾರಿಕೆಯ ಉತ್ತರ ನೀಡಿ ,ಮರಗಳ್ಳರ ಪರ ನಿಂತಿದ್ದರು ಎನ್ನಲಾಗಿದೆ.ಇಷ್ಟೊಂದು ಬೃಹತ್ತ್ ಟಿಂಬರ್ ಮಾಫಿಯಾವನ್ನು ಸಾಮಾಜಿಕ ಕಾರ್ಯಕರ್ತರು ಬಯಲಿಗೆಳೆದರೂ ಕೂಡ ಉಡುಪಿ RFO ರವರು ಎಫ್ ಐ ಅರ್ ದಾಖಲಿಸಲು ಮೀನಮೇಷ ಎನಿಸಿರುವ ಹಿಂದೆ ಇರುವ ಮಾಫಿಯಾ ಶಕ್ತಿಗಳ ಬಗ್ಗೆ ತನಿಖೆಯಾಗಬೇಕಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ,ಮಾನ್ಯ ಲೋಕಾಯುಕ್ತರು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ವಲಯ ಅರಣ್ಯಾಧಿಕಾರಿ ವಿರುದ್ದ ಮತ್ತು ಪ್ರಸ್ತುತ ಬೀಟ್ ಫಾರೆಸ್ಟ್ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಖುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಮತ್ತು ಹಿರಿಯಡ್ಕದ ಬೀಟ್ ಫಾರೆಸ್ಟ್ ಇದರ ದಲ್ಲಾಲಿ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತಿದೆ.
Swabhimananews