ಉಡುಪಿ :ಸೆಪ್ಟೆಂಬರ್-12-2025
Swabhimananews
ಬ್ರಹ್ಮಾವರ ತಾಲ್ಲೂಕಿನ ಕೊಕ್ಕರ್ಣೆಯಲ್ಲಿ ಹುಚ್ಚು ಪ್ರೇಮಿಯೊಬ್ಬ ಯುವತಿಯನ್ನು ಚೂರಿಯಿಂದ ಇರಿದು ಹತ್ಯೆಗೈಯಲು ಯತ್ನಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಯುವತಿಯನ್ನು ಕೊಕ್ಕರ್ಣೆ ಪೂಜಾರಿಬೆಟ್ಟು ನಿವಾಸಿ ರಕ್ಷಿತಾ (20) ಎಂದು ಗುರುತಿಸಲಾಗಿದೆ. ಮಣಿಪಾಲದಲ್ಲಿ ಕೆಲಸಕ್ಕೆ ಹೋಗಲೆಂದು ಮನೆಯಿಂದ ಬರುವಾಗ ಕಾರ್ತಿಕ್ ಪೂಜಾರಿ ಎಂಬಾತ ಬೈಕಿನಲ್ಲಿ ಬಂದು ಏಕಾ ಏಕಿ ನೇರವಾಗಿ ಚೂರಿಯಿಂದ ಇರಿದಿದ್ದು ಯುವತಿಗೆ ತೀವ್ರ ರಕ್ತ ಸ್ರಾವವಾಗಿದ್ದು ಯುವತಿಯನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇವತ್ತು ಯುವತಿಯ ಹುಟ್ಟುಹಬ್ಬವಾಗಿದ್ದು ಹುಟ್ಟಿದ ದಿನವೇ ಯುವತಿಯನ್ನು ಕೊಲೆಗೈಯುವ ಉದ್ದೇಶದಿಂದ ಯುವತಿಗೆ ಚೂರಿ ಇರಿದು ಯುವಕ ಬೈಕನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಬ್ರಹ್ಮಾವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದ್ದು ಯುವತಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.
Swabhimananews