24.5 C
New York
6 June 2026
Specials

RSS ಗಣವೇಷದಲ್ಲೇ ಬಂದು ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ ಕಾರ್ಯಕರ್ತ!

Swabhimananews -ಏಪ್ರಿಲ್ -11-2024


ಗದಗ: ಬಿಜೆಪಿಯ ಹಿರಿಯ ಕಾರ್ಯಕರ್ತನೋರ್ವ ಆರ್ ಎಸ್ ಎಸ್ ಗಣ ವೇಷದಲ್ಲೇ ಬಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಇಂದು ಗದಗ ಜಿಲ್ಲೆಯ ನರಗುಂದದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿಂಗಬಸಪ್ಪ ಬಾಣದ್ ಎನ್ನುವ ಆರ್ ಎಸ್ ಎಸ್ ಸ್ವಯಂ ಸೇವಕ ಕಾಂಗ್ರೆಸ್ ಸೇರ್ಪಡೆಯಾದರು.
ಮೂವತ್ತು ವರ್ಷದಿಂದ ಆರ್ ಎಸ್ಎಸ್ ಸಕ್ರೀಯ ಕಾರ್ಯಕರ್ತರಾಗಿರುವ ಬಾಣದ್ ಅವರು ಗಣವೇಷದಲ್ಲೇ ಕಾಂಗ್ರೆಸ್ ಶಾಲು ಹಾಕಿಕೊಂಡಿದ್ದಾರೆ‌

ಮಾಜಿ ಶಾಸಕ ಎಸ್ ಜಿ ನಂಜಯ್ಯನಮಠ ಸಮ್ಮುಖದದಲ್ಲಿ ನಿಂಗಬಸಪ್ಪ ಬಾಣದ್ ಅವರು ಬಿಜೆಪಿ ತೊರೆದು ಕೈ ಹಿಡಿದಿದರು. ಇನ್ನು ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಬಿಆರ್ ಯಾವಗಲ್ ಅವರು ನಿಂಗಬಸಪ್ಪ ಬಾಣದ್ ಅವರ ತಲೆ ಮೇಲಿನ ಕಪ್ಪು ಟೋಪಿ ತೆಗೆದು ಖಾದಿ ಗಾಂಧಿ ಟೋಪಿ ಹಾಕಿ ಕಾಂಗ್ರೆಸ್ ಶಾಲು ಹಾಕುವ ಮೂಲಕ ಪಕ್ಷಕ್ಕೆ ಸ್ವಾಗತ ಮಾಡಿಕೊಂಡರು.



ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ನಿಂಗಬಸಪ್ಪ ಬಾಣದ್, ಬಿಜೆಪಿ ನರಗುಂದ ಮತ ಕ್ಷೇತ್ರದಲ್ಲಿ ಹಣ ಹಂಚಿಚುನಾವಣೆ ಮಾಡಿದೆ. ಭ್ರಷ್ಟಾಚಾರ ವಿರೋಧಿಯಾಗಿ ಬಿಜೆಪಿ ಪಕ್ಷ ತೊರೆದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ತರುತ್ತೇನೆ ಅಂತಾರೆ. ಆದ್ರೆ ಕಾಂಗ್ರೆಸ್ ನಾಯಕರ ಮೇಲೆ ಐಟಿ ‌ದಾಳಿ ಮಾಡಿಸುತ್ತಾರೆ ಎಂದು ಟೀಕಿಸಿದರು.

Swabhimananews

Related posts

ಕೊಕ್ಕರ್ಣೆಯಲ್ಲಿ ಹುಚ್ಚುಪ್ರೇಮಿಯಿಂದ ಯುವತಿಗೆ ಚೂರಿ ಇರಿತ ಯುವತಿ ಗಂಭೀರ.!

Swabhimana News Desk

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಸ್ವಸಹಾಯ ಸಂಘದ ಸಾಲ ವಸೂಲಾತಿ ನೆಪದಲ್ಲಿ ದಲಿತರ ಮನೆಗೆ ನುಗ್ಗಿ ಹಲ್ಲೆಗೆ ಯತ್ನ ,ಅವಾಚ್ಯ ಪದಗಳಿಂದ ಜಾತಿ ನಿಂದನೆ. ಕಾನೂನು , ಮಾಹಿತಿ ನೀಡಲು ಬಂದ ಸಂಚಾರಿ ಯೂಟ್ಯೂಬ್ ಚಾನೆಲ್ ಸಿಬ್ಬಂದಿಗಳ ವಿರುದ್ಧವೂ ಹಲ್ಲೆಗೆ ಯತ್ನ.ದೂರು ನೀಡಿ 15 ದಿನ ಕಳೆದರೂ ಇದು ವರೆಗೂ ಯಾವುದೇ ಕಾನೂನು ಕ್ರಮ ಕೈ ಕೊಳ್ಳದ ಇಲಾಖೆಗಳು.

Swabhimana News Desk

ಕೇವಲ 35 ಪಾಸ್‌ ಅಂಕ ಗಳಿಸಿದ ತುಷಾರ್ ಸುಮೇರಾ ಐಎಎಸ್ ಅಧಿಕಾರಿ!
ತುಷಾರ್ ಸುಮೇರಾ ಅವರ ಜೀವನ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.

Swabhimana News Desk

Leave a Comment