1 December 2025
Coastal

ಸಿದ್ಧಾಂತಗಳ ಪಾಲನೆಯಿಂದ ಸದೃಢ ಹೋರಾಟ ಸಾಧ್ಯ  ಚೇತನ್.ಅಹಿಂಸಾ

ಉಡುಪಿ-ಸೆಪ್ಟೆಂಬರ್.20/09/205Swabhimanaws

ದಿನಾಂಕ 20-09-2025 ರಂದು ಉಡುಪಿ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಚೇತನ್ ಅಹಿಂಸಾರವರು ಮಾತನಾಡುತ್ತಾ .ರಾಜಕೀಯ ಅಸ್ತಿತ್ವವೇ ಮುಖ್ಯವಾದಾಗ ಸಿದ್ಧಾಂತಗಳು ಮೂಲೆ ಗುಂಪಾಗುತ್ತವೆ.

ಹಾಗೆ ಆಗದಿರಬೇಕೆಂದರೆ‌ ಸಂಘಟನೆ, ಹೋರಾಟದ ಹಾದಿಯಲ್ಲಿ ನಾವು ಸಿದ್ಧಾಂತಗಳನ್ನು ಮರೆಯಬಾರದು ಆಗ ಮಾತ್ರ ಸಮಸಮಾಜದ ನಿರ್ಮಾಣ ಸಾಧ್ಯ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಸಮಸಮಾಜ ನಿರ್ಮಾಣದ ಆಶಯ ಹೊತ್ತು ರಾಜ್ಯಾದಾದ್ಯಂತ ಪ್ರವಾಸ ಮಾಡುತ್ತಿರುವ ನಟ, ಸಾಮಾಜಿಕ ಚಿಂತಕ ಚೇತನ್ ಅಹಿಂಸಾ ರವರು ನುಡಿದರು.ಉಡುಪಿಯ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಸಮಾನ ಮನಸ್ಕ ಚಿಂತಕರೊಂದಿಗೆ ನಡೆಸಿದ 156 ನೇ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಂವಾದಕ್ಕೂ ಮೊದಲು “ಸಮ ಸಮಾಜ” ನಿರ್ಮಾಣಕ್ಕೆ ಅಗತ್ಯವಾದ ತಾವು

ಕಂಡುಕೊಂಡ 10 ಪ್ರಮುಖ ಅಂಶಗಳನ್ನು ಪವರ್ ಪಾಯಿಂಟ್ ಮೂಲಕ ವಿವರಿಸಿದರು. ಅವುಗಳೆಲ್ಲವೂ ಜಾತಿ, ಮತ, ಧರ್ಮಗಳನ್ನು ಮೀರಿದ, ಶೋಷಣೆ, ದೌರ್ಜನ್ಯಗಳಿಗೆ ಅವಕಾಶವಿಲ್ಲದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಮೂಲ ಆಶಯಗಳನ್ನು ಹೊಂದಿರುವ ಅಂಶಗಳಾಗಿವೆ.

ಇದಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಒಳಗೊಂಡ ಅಂಬೇಡ್ಕರ್ ವಿಚಾರಧಾರೆಗಳೇ ಬುನಾದಿಯಾಗಿದೆ ಎನ್ನುವುದನ್ನು ಒತ್ತಿ ಹೇಳಿದರು. ಯಾವ ಧರ್ಮದಲ್ಲಿ ಸಮಾನತೆ, ವೈಜ್ಞಾನಿಕತೆ ಇರುತ್ತದೆಯೋ ಅಂಥ ಧರ್ಮವೇ ಶ್ರೇಷ್ಠ ಎನ್ನಬೇಕಾಗುತ್ತದೆ. ಆ ಶ್ರೇಷ್ಠತೆಯನ್ನು ನಾವು ಬೌದ್ಧ ಧರ್ಮದಲ್ಲಿ ಮಾತ್ರ ಕಾಣಬಹುದು. ಬಾಬಾಸಾಹೇಬರು ಸುಮಾರು 50 ವರ್ಷಗಳ ಕಾಲ ಎಲ್ಲಾ ಧರ್ಮಗಳ ಸಾರ, ಸರ್ವಸ್ವವನ್ನು ಅಧ್ಯಯನ ಮಾಡಿದ ಬಳಿಕವೇ ಬೌದ್ಧ ಧಮ್ಮವನ್ನು ಒಪ್ಪಿಕೊಂಡಿದ್ದರು.

ಈ ಧರ್ಮದಿಂದ ಮಾತ್ರ ಮನುಷ್ಯ ಜೀವಿಯ ಸಮಗ್ರ ಅಭ್ಯುದಯ ಸಾಧ್ಯ ಎಂದು ಮನವರಿಕೆ ಆಗಿದ್ದರಿಂದಲೇ‌ ಅವರು ಬೋಧಿಸತ್ವರಾದರು ಮತ್ತು ತಮ್ಮ ಅನುಯಾಯಿಗಳಿಗೂ ತಿಳಿಸಿದ್ದರು.

ಸಮಾಜ ನಿರ್ಮಾಣದ ಪರಿಕಲ್ಪನೆಯಲ್ಲಿ ಮನುಕುಲದ ಸಮಗ್ರ ಹಿತ ಅಡಗಿರುವುದನ್ನು ತಮ್ಮ 10 ಪ್ರಮುಖ ಅಂಶಗಳನ್ನು ಸೋದಾಹರಣವಾಗಿ ವಿವರಿಸಿದ ಚೇತನ್ ರವರು ಸಂವಿಧಾನದ 19ನೇ ವಿಧಿಯಲ್ಲಿ ವಿವರಿಸಿರುವ ಸ್ವಾತಂತ್ರ್ಯಗಳ ಮೂಲಕವೇ ಪ್ರಜೆಗಳ ಉದ್ಧಾರ ಸಾಧ್ಯ ಎನ್ನುತ್ತಾ ಈ ಎಲ್ಲಾ ಹೋರಾಟದ ಹಾದಿಯಲ್ಲಿ ಬುದ್ಧ ಬೋಧಿಸಿದ ಪಂಚಸೀಲಗಳ ಪ್ರಾಮಾಣಿಕ ಪಾಲನೆ ಒಳಗೊಂಡಿದ್ದು ಅದು ಸಮಗ್ರ ಸಮಾಜದ ಉದ್ಧಾರ ಮತ್ತು ಸಮಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ.

ಉಚ್ಛ, ನೀಚ ಮತ್ತು ಬಂಡವಾಳ ಶಾಹಿ ವ್ಯವಸ್ಥೆ ನಿವಾರಿಸುವುದರೊಂದಿಗೆ ದತ್ತಾಂಶ ಆಧಾರಿತ ಅಭಿವೃದ್ಧಿ, ಭಾಷಾ ಹಕ್ಕುಗಳು, ಪ್ರಾದೇಶಿಕತೆ, ನೀರು,ಪರಿಸರ ಸಂರಕ್ಷಣೆ, ಶಿಕ್ಷಣ, ಆರೋಗ್ಯ, ಪೊಲೀಸ್, ಜೈಲು,ನ್ಯಾಯಾಂಗ ವ್ಯವಸ್ಥೆಗಳ ಸುಧಾರಣೆಗಳಿಂದಲೇ ಸರ್ವ ಸಮಾನತೆಯ ಸದೃಢ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಮುಂದಾಗಬೇಕಿದೆ ಎನ್ನುವುದು ಅವರ ಆಶಯವಾಗಿತ್ತು.

ಸಂವಾದದಲ್ಲಿ ಸಾಮಾಜಿಕ ಹೋರಾಟಗಾರ ಶೇಖರ್ ಹಾವಂಜೆ, ದಲಿತ ಚಿಂತಕ ಜಯನ್ ಮಲ್ಪೆ, ಸಾಮಾಜಿಕ ಹೋರಾಟಗಾರ ಸದಾಶಿವ ಶೆಟ್ಟಿ ಹೇರೂರ್,ಅಧ್ಯಾಪಕ ಎಂ.ಫಕೀರಪ್ಪ, , ಧಮ್ಮಾಚಾರಿ ಶಂಭು ಸುವರ್ಣ ಹವ್ಯಾಸೀ ಪತ್ರಕರ್ತ ಚನ್ನಬಸವ ಪುತ್ತೂರ್ಕರ‌, ನಿವೃತ್ತ ಬ್ಯಾಂಕ್ ಉದ್ಯೋಗಿ ಗೋವಿಂದಪ್ಪ,
ಕೆಪಿ ಮಾಲಿಂಗು, ಚಲನ ಚಿತ್ರ ನಿರ್ಮಾಪಕ ಕೃಷ್ಣಪ್ಪ ಉಪ್ಪುರು, ವಿಠ್ಠಲ್ ಸಾಲಿಕೇರಿ, ಮುರಳಿ ಮಾರ್ಪಳ್ಳಿ, ಸಂಜೀವ್, ವಿಠ್ಠಲ್, ಸುಜಾತ ಪೃಥ್ವಿ, ರಮೇಶ್, ಪ್ರಭಾಕರ್, ಮುತ್ತಕ್ಕ,ರೂಪ,ನಾಥು,ಮಹಾಬಲ ಮತ್ತು ಮುಂತಾದ ಹಲವು ಸಾಹಿತಿಗಳು, ಚಿಂತಕರು, ಅಂಬೇಡ್ಕರ್ ಯುವ ಸೇನೆಯ ಹರೀಶ್ ಸಾಲ್ಯಾನ್ ಮೊದಲಾದವರು ಪಾಲ್ಗೊಂಡಿದ್ದ ಕಾರ್ಯಕ್ರಮದ ಆರಂಭದಲ್ಲಿ ಎಂ.ಫಕೀರಪ್ಪ ಅಹಿಂಸಾ ಚೇತನ್ ಅವರನ್ನು ಸಭೆಗೆ ಪರಿಚಯಿಸಿ ಸರ್ವರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಚನ್ನಬಸವ ಪುತ್ತೂರ್ಕರ‌ ವಂದಿಸಿದರು.

ನಂತರ ಇಲ್ಲಿಂದ ತೆರಳಿದ ಅವರು ಹಾವಂಜೆಯ‌ ಬೋಧಿ ಸತ್ವ ಬುದ್ಧ ವಿಹಾರದಲ್ಲಿ ಉಪಾಸಕ, ಉಪಾಸಿಕರೊಂದಿಗೆ ಬುದ್ಧ ವಂದನೆ, ಮೈತ್ರಿ ಧ್ಯಾನ ಮುಗಿಸಿದ ಬಳಿಕ ವಿಹಾರದ ಮೊದಲ ಭಂತೇಜಿ ಧಮ್ಮೋವರೊ ರವರ 26 ನೇ ವರ್ಷದ ಜನ್ಮದಿನದ ಪ್ರಯುಕ್ತ ಕೇಕ್ ಕತ್ತರಿಸುವ ಮೂಲಕ ಹಾರೈಸಿದರು. ಅಲ್ಲಿಯೂ ಉಪಸ್ಥಿತರಿದ್ದ ಉಪಾಸಕರೊಂದಿಗೆ ಮಾತನಾಡಿದ ಸಮಸಮಾಜ ನಿರ್ಮಾಣದ ಪರಿಕಲ್ಪನೆಯ ಚೇತನ್ ಅವರು ,

“ನೀರು ಕಂಡಲ್ಲಿ ಮುಳುಗುವರಯ್ಯ..ಮರೆವು ಕಂಡಲ್ಲಿ ಸುತ್ತುವರಯ್ಯ‌ ಬತ್ತುವ ಜಲ ಒಣಗಿದ ಮರ ಮೆಚ್ಚಿದರು ನಿನ್ನೆಂತು‌ ಬಲ್ಲರು ಕೂಡಲಸಂಗಮದೇವ “ಎಂಬ ಶರಣರ ವಚನ ಉಲ್ಲೇಖಿಸಿ ನಾವೆಲ್ಲರೂ ಬುದ್ಧ, ಬಸವ, ಅಂಬೇಡ್ಕರ್ ಅವರ ವೈಚಾರಿಕತೆಗಳನ್ನು ಅಳವಡಿಸಿಕೊಂಡು ಉತ್ತಮ ಮನುಷ್ಯರಾಗಿ ಪರಿವರ್ತನೆ ಹೊಂದಿ ಮುಂದಿನ ತಲೆಮಾರಿಗೆ ಸಮಾಜವನ್ನು ಕಲ್ಪಿಸಿಕೊಡೋಣ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಬೋಧಿಸತ್ವ ಬುದ್ಧ ಫೌಂಡೇಶನ್ ವತಿಯಿಂದ ಅಹಿಂಸಾ ಚೇತನ್ ಅವರನ್ನು ಕಂಚಿನ ಸುಂದರ ಬುದ್ಧನ ಮೂರ್ತಿ ನೀಡಿ, ಧಮ್ಮ‌ಶಾಲು ಹೊದಿಸಿ, ಫಲವಸ್ತುಗಳನ್ನು ನೀಡಿ ಗೌರವಿಸಲಾಯಿತು ಹಿರಿಯ ಉಪಸಕರಾದ ಪ್ರಕಾಶ್ ಬಿಬಿ, ಜಯಶೀಲ ಬಿ ರೋಟೆ, ಬೊಮ್ಮಯ್ಯ, ಡಾ.ಸುಮೇದ್ ಮತ್ತು ಕುಟುಂಬ NITK.ಮಂಗಳೂರು,ಸುರೇಶ್, ಪ್ರತಾಪ್, ಅಕ್ಷತಾ,ವಿವೇಕಾನಂದ, ಸತೀಶ್ DM,ಶಶಿಕುಮಾರ್,ಹಾಗೂ ಬೋದಿಸತ್ವ ಬುದ್ಧಫೌಂಡಶನ್ ನ ಅಧ್ಯಕ್ಷರು, ಟ್ರಸ್ಟಿಗಳು,ಪದಾಧಿಕಾರಿಗಳು,ಮತ್ತು 50 ಕ್ಕೂ ಹೆಚ್ಚು ಉಪಾಸಕ, ಉಪಸಿಕರು ಉಪಸ್ಥಿತರಿದ್ದರು
.ಅಧ್ಯಾಪಕ ಎಂ.ಫಕೀರಪ್ಪ ಸರ್ವರನ್ನೂ ಸ್ವಾಗತಿಸಿ ವಂದಿಸಿದರು.


Swabhimananews.

Related posts

ಕದಸಂಸ ಭೀಮವಾದ (ರಿ) ಉಡುಪಿ ಜಿಲ್ಲೆ ಇದರ ವತಿಯಿಂದ ಭೋಧಿಸತ್ವ ದಲ್ಲಿ. ಅಂಬೇಡ್ಕರ್ ರವರ 133 ನೇ ಜಯಂತಿ ಆಚರಣೆ ಮತ್ತು ಭೀಮವಾದ ಮತ್ತು ಹಾವಂಜೆ ಗ್ರಾಮಪಂಚಾಯತ್ ಸಹಯೋಗದಲ್ಲಿ ಮತದಾನ ಜಾಗೃತಿ ಅಭಿಯಾನ ಮತ್ತು ಪ್ರತಿಜ್ಞಾ ಸ್ವೀಕಾರ ನೆರವೇರಿತು.

Swabhimana News Desk

ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ.

Swabhimana News Desk

ಪ್ರೀಯಕರನ ಜೊತೆ ಸೇರಿ ಗಂಡನನ್ನು ಕೊಂದೇ ಬಿಟ್ಟ ರೀಲ್ಸ್ ರಾಣಿ ಹೆಂಡತಿ ಪ್ರತಿಮಾ.

Swabhimana News Desk

Leave a Comment