19.1 C
New York
7 October 2024
Coastal

ನಮೋ ತಸ್ಸಾ ಭಗವತೋ ಅರಹತೋ ಸಮ್ಮಾ ಸಂಬುದ್ಧಸ್ಸ

ಜುಲೈ -13-2023.Swabhimananews@gmail.com.

ಉಪಾಸಕ ಶೇಖರ್ ಹಾವಂಜೆಯವರು ತಾವು ಬೋದ್ ಗಯಾ ಪ್ರವಾಸದ ಸಂದರ್ಭ ಭಗವಾನ್ ಬುದ್ಧರ ಭಾವಚಿತ್ರ ಮತ್ತು ವಿಗ್ರಹವನ್ನು ಖರೀದಿಸಿ ಮನೆಗೆ ತಂದಿದ್ದು ಆ ಪ್ರಯುಕ್ತ ಈ ದಿನ ದಿನಾಂಕ 09-07-2023 ಆದಿತ್ಯವಾರ ಬುದ್ಧ ವಂದನೆ ಕಾರ್ಯಕ್ರಮವನ್ನು ತಮ್ಮ ಮನೆಯಲ್ಲಿ ಹಮ್ಮಿಕೊಂಡಿದ್ದರು. ಬುದ್ಧ ವಂದನೆ ಮತ್ತು ಆನಾಪಾನಸತಿಯನ್ನು (ದ್ಯಾನ )ಆಯುಷ್ಮಾನ್ ಶಂಭು ಸುವರ್ಣರವರು ನಡೆಸಿಕೊಟ್ಟರು.
ಬೌದ್ಧ ಸಂಪ್ರದಾಯದ ವರ್ಷ ವಾಸದ ಈ ಸಂದರ್ಭ ಈ ವಾರದ ವಿಷಯ ಭಗವಾನ್ ಬುದ್ಧರ ಕರ್ಮ ಸಿದ್ದಾಂತ ವಿಚಾರದ ಬಗ್ಗೆ ಉಪಾಸಕ ಮಂಜುನಾಥ್ ವಿ ವಿಷಯ ಮಂಡಿಸಿ ಮನುಷ್ಯನ ಪ್ರತಿಯೊಂದು ಕ್ರಿಯೆಯೂ ನೈತಿಕವಾಗಿರಬೇಕು.

ಕರ್ಮವು ನೈತಿಕ ಕ್ರಮದ ಫಲ ಎಂದು ನಂಬಿ ನಡೆಯುವುದೇ ದಮ್ಮ. ಮನುಷ್ಯನು ತನ್ನ ಕ್ರಿಯೆಯ ಆಧಾರದಲ್ಲಿ ಪ್ರತಿಫಲವನ್ನು ಪಡೆಯುತ್ತಾನೆ. ಉತ್ತಮ ಕ್ರಿಯೆಗೆ ಉತ್ತಮ ಪ್ರತಿಫಲವನ್ನು ಕೆಟ್ಟ ಕ್ರಿಯೆಗೆ ಕೆಟ್ಟ ಪ್ರತಿಫಲವನ್ನು ಪಡೆಯುತ್ತಾನೆ. ತನ್ನ ಜೀವನದ ಆಗು ಹೋಗುಗಳಿಗೆ, ಒಳಿತು ಕೆಡಕುಗಳಿಗೆ ಆತನೇ ಕಾರಣನಾಗುತ್ತಾನೆಯೆ ಹೊರತು ಬೇರೆ ಯಾರು ಅಲ್ಲ. ನಾವು ಯಾವಾಗಲೂ ನೈತಿಕ ನಿಯಮವನ್ನೇ ಪಾಲಿಸಬೇಕು ನಾವು ಪ್ರತಿಯೊಂದು ಕ್ರಿಯೆಯನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಏಕೆಂದರೆ ನಮ್ಮ ಕ್ರಿಯೆಗೆ ತಕ್ಕ ಪ್ರತಿಫಲವನ್ನು ನಾವು ಪಡೆಯಲೇಬೇಕು. ನಾವು ನೈತಿಕ ನಿಯಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಮಗೂ ನಮ್ಮ ನೆರೆಹೊರೆಯವರಿಗೂ ಹಾಗೂ ಸಮಾಜಕ್ಕೂ ಒಳಿತಾಗುತ್ತದೆ. ಭಗವಾನ್ ಬುದ್ಧರು ತಮ್ಮ ಪ್ರಥಮ ಉಪದೇಶದಲ್ಲಿ ನಿಯಮಗಳನ್ನ ಉಪದೇಶಿಸಿದ್ದು ಅವುಗಳೆಂದರೆ ಪಂಚಶೀಲದ ಪಾಲನೆ ಅಷ್ಟಾಂಗ ಮಾರ್ಗದ ಪಾಲನೆ ಹಾಗೂ ಸದ್ಗುಣಗಳ ಮಾರ್ಗದ ಪಾಲನೆಯನ್ನು ನಾವು ಮಾಡುವುದರಿಂದ ದುಃಖ ರಹಿತ ವಾದಂತಹ ಸಂತೋಷದ ನೆಮ್ಮದಿಯ ಜೀವನವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಇದು ಉತ್ತಮ ನಾಗರಿಕ ಸಮಾಜವನ್ನು ಕಟ್ಟಲು ಸಹಕಾರಿಯಾಗುತ್ತದೆ. ಕಮ್ಮ ಸಿದ್ದಾಂತವೇ ಭಗವಾನ್ ಬುದ್ಧರ ಉಪದೇಶದ ಗೋಲ್ಡನ್ ರೂಲ್ ಎಂದು ಹೇಳಬಹುದು ಎಂದು ತಿಳಿಸಿದರು.

Swabhimananews@gmail.com
ಈ ಸಂದರ್ಭದಲ್ಲಿ ಶೇಖರ್ ಹಾವಂಜೆ ಅವರು ಮಾತನಾಡಿ ದೇವರ ಅಸ್ತಿತ್ವದ ಬಗ್ಗೆ ವಿಮರ್ಶಿಸಿ ಕೆಲವು ಸಂಪ್ರದಾಯವಾದಿಗಳು ಅವೈಜ್ಞಾನಿಕ ಮತ್ತು ಆವಾಸ್ತವಿಕ ವಿಚಾರಗಳನ್ನು ಪುರಾಣಗಳಲ್ಲಿ ತುರುಕಿಸಿ ನಮ್ಮ ಜನರಲ್ಲಿ ಮೌಢ್ಯವನ್ನು ತುಂಬಿದ್ದಾರೆ. ಜನರು ಭಗವಾನ್ ಬುದ್ಧರ ವೈಜ್ಞಾನಿಕ ವಿಚಾರಧಾರೆಯನ್ನು ತಿಳಿದುಕೊಂಡಲ್ಲಿ ಮೌಡ್ಯತೆಯಿಂದ ಹೊರಬಂದು ಬುದ್ಧರ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗುತ್ತದೆ.

Swabhimananews@gmail.com

ಮೊದಲು ಅವೈಜ್ಞಾನಿಕತೆಯ ಹಾಗೂ ಊಹೆಯ ಆಧಾರದಲ್ಲಿ ರಚಿಸಿದ ದೇವರ ಭಾವಚಿತ್ರಗಳನ್ನು ಮೊದಲು ಮನೆಯಿಂದ ಹೊರಹಾಕಿ ಬುದ್ಧರ ಭಾವಚಿತ್ರ, ಬಾಬಾ ಸಾಹೇಬರ ಭಾವಚಿತ್ರಗಳನ್ನು ಮನೆಯಲ್ಲಿ ಅಲಂಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದಂತ ಉಪಾಸಕ ಸೋಮಪ್ಪ ರವರು ಮಾತನಾಡಿ ಬುದ್ದರ ವಿಚಾರಗಳನ್ನು ಭಾಷಣಕ್ಕೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಯಲ್ಲಿ ತರಬೇಕು ಹಾಗಿದ್ದಾಗ ಮಾತ್ರ ಬಾಬಾ ಸಾಹೇಬರ ಕನಸಿನ ಪ್ರಭುದ್ಧ ಸಮಾಜವನ್ನು ಕಟ್ಟಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಬಿಎಸ್ಐ ಉಡುಪಿ ಇದರ ಉಪಾಸಕ ಉಪಾಸಿಕರು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಹಾಜರಿದ್ದು ಕಾರ್ಯಕ್ರಮವನ್ನು ಚಂದಗಾಣಿಸಿದರು. ಭಗವಾನ್ ಬುದ್ಧರ ಕಮ್ಮ ಸಿದ್ದಾಂತದ ಬಗ್ಗೆ ಚರ್ಚಿಸುತ್ತಾ ಎಲ್ಲರೂ ಪೌಷ್ಟಿಕ ಆಹಾರ ಸ್ವೀಕರಿಸಿದರು.

ಮುಂದಿನ ವಾರದ ವರ್ಷ ವಾಸದ ವಿಷಯ : ಬೌದ್ಧರ ಯಾತ್ರ ಸ್ಥಳಗಳು

ಜೈ ಭೀಮ್ ನಮೋ ಬುದ್ಧಾಯ🙏🏻
ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ.

Swabhimananews@gmail.com

Related posts

ದ್ವಿತೀಯ ಪಿಯುಸಿ ಫಲಿತಾಂಶ: ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಾನ್ವಿ ರಾವ್ ರಾಜ್ಯಮಟ್ಟದಲ್ಲಿ ತೃತೀಯ.

Swabhimana News Desk

ಉಡುಪಿ: ಬಸ್‌ ಟೈಮಿಂಗ್‌ ವಿಚಾರ – ಎರಡು ಖಾಸಗಿ ಬಸ್‌ ನಿರ್ವಾಹಕರ ನಡುವೆ ಹೊಡೆದಾಟ, ಮಹಿಳಾ ಬಸ್ ನಿರ್ವಾಹಕಿಯಿಂದ ಚಪ್ಪಲಿಯಲ್ಲಿ ಹಲ್ಲೆಗೆ ಯತ್ನ!

Swabhimana News Desk

ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ ಉಡುಪಿಯಲ್ಲಿ ಮತ್ತೊಂದು ಬೃಹತ್ ಅಕ್ರಮ ಕಟ್ಟಡ ಲೋಕಾರ್ಪಣೆಗೆ ಸಿದ್ದತೆ.ಇದು‌ ಬಿಜೆಪಿಯ ಕನಸಿನ ಕೂಸಿಗೆ. ಕಾಂಗ್ರೆಸ್ಸೇ ಇದಕ್ಕೆ ಶ್ರೀರಕ್ಷೆ.

Swabhimana News Desk

Leave a Comment