26.4 C
New York
31 July 2025
Coastal

ಕಾರ್ಕಳ ಕಟ್ಟಡ ಕಲ್ಲು ಕ್ವಾರಿಯಲ್ಲಿ ಸ್ಪೋಟ.ಕಾರ್ಮಿಕ ಸಾವು; ಗಣಿ ಮಾಲಿಕ ದಿನೇಶ್ ಶೆಟ್ಟಿ ಸೇರಿ
ಇಬ್ಬರ ವಿರುದ್ಧ ಪ್ರಕರಣ ದಾಖಲು.ಕಲ್ಲುಕ್ವಾರೆ, ಕ್ರಷರ್ ಮುಚ್ಚುವಂತೆ ಸಾರ್ವಜನಿಕರ ಒತ್ತಾಯ.

ಆಗಸ್ಟ್ -3-2023 swabhimananews@gmail.com
ಕಾರ್ಕಳ, ಆಗಸ್ಟ್. 2 ರಂದು ದಿನೇಶ್ ಶೆಟ್ಟಿ ಮಾಲಿಕತ್ವದ ಮಹಾಗಣಪತಿ ಜೆಲ್ಲಿ ಕ್ರಷರ್‌ ನ ಕಲ್ಲು ಕ್ವಾರಿಯಲ್ಲಿ ಸ್ಫೋಟಕ ಸ್ಫೋಟಗೊಂಡು ಕಾರ್ಮಿಕ ಮೃತ ಪಟ್ಟಿದ್ದು, ಮುನ್ನೆಚ್ಚರಿಕೆ ಕ್ರಮ ವಹಿಸದೆ ಕಲ್ಲು ಸ್ಫೋಟಗೊಳಿಸಿದ ಆರೋಪದಡಿ ಇಬ್ಬರ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳವಾರ ಮಧ್ಯಾಹ್ನದ ವೇಳೆಯಲ್ಲಿ ವೆಂಕಟೇಶ ಹಾಗೂ ಇತರ ಕಾರ್ಮಿಕರು ನಿಟ್ಟೆ ಗ್ರಾಮದ ದಿನೇಶ್‌ ಶೆಟ್ಟಿ ಅವರ ಮಾಲಕತ್ವದ ಗುಂಡ್ಯಡ್ಕ ಶ್ರೀ ಮಹಾಗಣಪತಿ ಕ್ರಷರ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಈ ವೇಳೆ ಕ್ರಷರ್‌ ನಿಂದ ಸುಮಾರು 150 ಮೀ. ದೂರದಲ್ಲಿ ಮಣಿಪಾಲದ ಬಾಲಾಜಿ ಎಕ್ಸ್‌ಪ್ಲೋಸಿವ್‌ನ ಯತೀಶ್ ಕುಮಾರ್ ದೇವಾಡಿಗ ಅವರು ಕಾರ್ಮಿಕರೊಂದಿಗೆ ಕಲ್ಲುಗಳನ್ನು ಬ್ಲಾಸ್ಟ್‌ ಮಾಡುತ್ತಿದ್ದರು. ಈ ಸಂದರ್ಭ ಕಲ್ಲು ಸ್ಫೋಟಗೊಂಡಿದ್ದು,

ವೆಂಕಟೇಶ ಅವರ ತಲೆಯ ಮೇಲೆ ಬಿದ್ದಿದೆ. ಪರಿ ಣಾಮ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಕಾರ್ಕಳ ಸ. ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಅನಂತರ ಹೆಚ್ಚಿನ ಚಿಕಿತ್ಸೆ ಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು – ಗಾಯಾಳು ವೆಂಕಟೇಶ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆಗೆ ಮುಂಜಾಗ್ರತ ಕ್ರಮ ವಹಿಸದೆ ಕಲ್ಲನ್ನು ಸೋಟಗೊಳಿಸಿರುವುದೇ ಕಾರಣವಾಗಿದೆ ಎಂದು ಕ್ರಷರ್ ಮಾಲಕ ದಿನೇಶ್‌ ಶೆಟ್ಟಿ ಹಾಗೂ ಮಣಿಪಾಲದ ಬಾಲಾಜಿ ಎಕ್ಸ್‌ಪ್ಲೋಸಿವ್‌ನ ಯತೀಶ್ ಕುಮಾರ್ ದೇವಾಡಿಗ ಅವರ ವಿರುದ್ಧ ಮೃತ ವ್ಯಕ್ತಿಯ ಸಹೋದರ ಮೋಹನ್ ಅವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಅದೆಲ್ಲ ಈ ದಿನೇಶ್ ಶೆಟ್ಟಿ ಎಂಬವರು ಅನೇಕ ವರ್ಷಗಳಿಂದ ಈ ಪ್ರದೇಶದಲ್ಲಿ ಸರಕಾರಿ ಭೂಮಿಯಲ್ಲಿ,ಅರಣ್ಯ ಭೂಮಿಯಲ್ಲಿ
ಅಕ್ರಮವಾಗಿ,ನಿಯಮ ಉಲ್ಲಂಘಿಸಿ, ಕಾನೂನು ಬಾಹಿರವಾಗಿ ದಿನೇಶ್ ಶೆಟ್ಟಿ ಎಂಬವರು. ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡುವಾಗ ಅನೇಕ ಷರತ್ತುಗಳನ್ನು ವಿಧಿಸಿ, ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ.ಆದರೆ ಇಲ್ಲಿ ಸಂಪೂರ್ಣ ನಿಯಮ ಉಲ್ಲಂಘಿಸಿ.ಗಡಿಗುರತ್ತು ನಾಶಮಾಡಿ.ನೂರಾರು ಕೋಟಿ ರೂಪಾಯಿಯ ಅಕ್ರಮ ಗಣಿಗಾರಿಕೆ ನಡೆಸಿ ಸರಕಾರಕ್ಕೆ.ನೂರಾರು ಕೋಟಿ ರೂಪಾಯಿ ವಂಚನೆ ಮಾಡಿರುವ ಬಗ್ಗೆ ಸಂಪೂರ್ಣ ತನಿಖೆ ನಡೆಸಿ.

ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಈ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಅನ್ನು ಕೂಡಲೆ ಬಂದ್ ಮಾಡಿ.ಅವರ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಾರ್ವಜನಿಕರು ಹೋರಾಟಗಾರರು ಆಗ್ರಹಿಸಿದ್ದಾರೆ.ಹಾಗೂ ಈ ಕುರಿತು ಮುಂದಿನ ದಿನಗಳಲ್ಲಿ ಬಹು ದೊಡ್ಡ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

swabhimananews@gmail.com

Related posts

ಹೆಣದಿಂದ ಹಣ.
ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷ ಹಾಲಿ ಪಂಚಾಯತ್ ಅಧ್ಯಕ್ಷೆ ಸೇರಿ ನಾಲ್ವರ ವಿರುದ್ದ ಲೋಕಾಯುಕ್ತಕ್ಕೆ ದೂರು.

Swabhimana News Desk

ಫ್ಲೈಓವರ್‌ನಿಂದ ಸರ್ವಿಸ್ ರಸ್ತೆಗೆ ಬಿದ್ದ ಕಾರು ದಂಪತಿ ಸಾವು; ಪುತ್ರ ಪ್ರಾಣಾಪಾಯದಿಂದ ಪಾರು

Swabhimana News Desk

ಅಕ್ರಮ ಮರಳು ಅಡ್ಡೆಗೆ ಮಂಗಳೂರು ಗಣಿ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಎಂಬ ದಿಟ್ಟ ಮಹಿಳಾ ಅಧಿಕಾರಿಯ ಮಿಂಚಿನ ದಾಳಿ; 20 ಇಂಜಿನ್ ಮತ್ತು ಗ್ಯಾಸ್ ಸಿಲಿಂಡರ್ ಸಹಿತ ಬೋಟ್‌ಗಳ ವಶ.

Swabhimana News Desk

Leave a Comment