19 C
New York
18 November 2024
National

ಮಧ್ಯಪ್ರದೇಶದಲ್ಲಿ ಕಂದಾಯ ಅಧಿಕಾರಿಯೊಬ್ಬರು ಲಂಚದ ಹಣವನ್ನು ಅಕ್ಷರಶಃ ತಿಂದು ತೇಗಿದ್ದಾರೆ.

ಭೋಪಾಲ್‌, ಜುಲೈ -30-2023 swabhimananews@gmail.com

ಜಾಗದ ದಾಖಲೆಗೆ ಲಂಚ
ಡಿಮ್ಯಾಂಡ್ ; ರೆಡ್ ಹ್ಯಾಂಡಾಗಿ ಸಿಕ್ಕಿ ಬೀಳುತ್ತಲೇ ಗಬಗಬನೆ 5000 ರೂ. ಹಣ ನುಂಗಿದ ಕಂದಾಯ ಅಧಿಕಾರಿ ; ಕಕ್ಕಿಸಿದ ವೈದ್ಯರು

ಮಧ್ಯಪ್ರದೇಶದ ಕಟ್ಟಿಯಲ್ಲಿ ಜಬಲ್ಪುರ ಲೋಕಾಯುಕ್ತದ ವಿಶೇಷ ಪೊಲೀಸ್ ಘಟಕವು (ಎಸ್‌ಪಿಇ) ಲಂಚ ತೆಗೆದುಕೊಳ್ಳುತ್ತಿದ್ದ ಕಂದಾಯ ಅಧಿಕಾರಿಯನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದರು. ಕೂಡಲೇ ಆತ ನೋಟುಗಳನ್ನು ಬಾಯಿಗೆ ತುರುಕಿಕೊಂಡು ಜಗಿದು ಗಬಗಬನೆ ನುಂಗಿದ್ದಾನೆ. ಕರೆನ್ಸಿ

ಪಕ್ವಾರಿಯಾಗಿರುವ ಗಜೇಂದ್ರ ಸಿಂಗ್ ಎಂಬ ಅಧಿಕಾರಿ, ಜಮೀನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರುದಾರ ಚಂದನ್ ಸಿಂಗ್ ಲೋಧಿಯಿಂದ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಈ ಬಗ್ಗೆ ಲೋಧಿ ಅವರು ಜಬಲ್ಪುರ ಲೋಕಾಯುಕ್ತ ಪೊಲೀಸರನ್ನು ಪೊಲೀಸರನ್ನು ಸಂಪರ್ಕಿಸಿ ನೀಡಿದ್ದರು.

ತನಿಖೆ ನಡೆಸಿದ ಬಳಿಕ ಲೋಕಾಯುಕ್ತ ಪೊಲೀಸರಿಗೆ ಈ ದೂರಿನಲ್ಲಿ ಸತ್ಯಾಂಶ ಇರುವುದು ಖಚಿತವಾಗಿತ್ತು. ಜಬಲ್ಪುರ ಲೋಕಾಯುಕ್ತರ ತಂಡವೊಂದು ಬಿಲ್ಲಾರಿಗೆ ತೆರಳಿ, ಗಜೇಂದ್ರ ಸಿಂಗ್‌ರನ್ನು ಸಾಕ್ಷಿ ಸಮೇತ ಹಿಡಿಯಲು ಯೋಜನೆ ರೂಪಿಸಿದ್ದರು. ತಮ್ಮ ಖಾಸಗಿ ಕಚೇರಿಯಲ್ಲಿ 5000.ರೂ ಪಡೆದುಕೊಳ್ಳುವಾಗ ಅವರನ್ನು ಹಿಡಿದರುಬಂಧಿಸಿದ ಕೂಡಲೇ ಗಜೇಂದ್ರ ಸಿಂಗ್, ತಾವು ಪಡೆದ ಲಂಚದ ಹಣವನ್ನು ಒಂದೇ ಸಮನೆಗೆ ಬಾಯಿಗೆ ತುರುಕಿಸಿಕೊಂಡು ನುಂಗಿಬಿಟ್ಟರು. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಸಾಕಷ್ಟು ಪ್ರಯತ್ನ ನಡೆಸಿದ ಬಳಿಕ ಕೊನೆಗೂ ಅವರ ಬಾಯಿಯಿಂದ ಕರೆನ್ಸಿ ನೋಟುಗಳ ಮುದ್ದೆಯನ್ನು ಹೊರಗೆ ಕಕ್ಕಿಸುವಲ್ಲಿ ಪೊಲೀಸರು ಮತ್ತು ವೈದ್ಯರು ಸಫಲರಾಗಿದ್ದಾರೆ.

ಗಜೇಂದ್ರ ಸಿಂಗ್ ಅವರು ತಮ್ಮ ಬಳಿ ಲಂಚ ಕೇಳುತ್ತಿದ್ದಾರೆ ಎಂದು ಬರ್ಖೇಡಾ ಗ್ರಾಮದ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಹಣ ಪಡೆದುಕೊಂಡ ಬಳಿಕ ಸಿಂಗ್ ಅವರು ಎಸ್‌ಪಿಇ ತಂಡವನ್ನು ಕಂಡಿದ್ದರು. ಕೂಡಲೇ ಹಣವನ್ನು ನುಂಗಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದರು” ಎಂಬುದಾಗಿ ಎಸ್‌ಪಿಇ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಸಾಹು ತಿಳಿಸಿದ್ದಾರೆ.

ಕಂದಾಯ ಅಧಿಕಾರಿ ಗಜೇಂದ್ರ ಸಿಂಗ್ ವಿರುದ್ಧ ಲಂಚ ತೆಗೆದುಕೊಂಡ ಆರೋಪದಡಿ ಪ್ರಕರಣ ದಾಖಲಾಗಿದೆ. ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
swabhimananews@gmail.com

Related posts

ನಿರ್ಭಯ ಪ್ರಕರಣದಲ್ಲಿ ವಾದ ಮಂಡಿಸಿದ ವಕೀಲರು.. ಇಂದು ಬ್ರಿಜ್ ಭೂಷಣ್ ನನ್ನು ಸಮರ್ಥಿಸಿದ್ದಾರೆ.

Swabhimana News Desk

ಪಾಂಡೇಶ್ವರ ಗ್ರಾಮದ ಸುರೇಶ್ .ಬಿ. ಪೂಜಾರಿ.ವಿಶ್ವ ಚಾಂಪಿಯಾನ್.ಭಾರತಕ್ಕೆ ಎರಡು ಚಿನ್ನದ ಪದಕ.

Swabhimana News Desk

ಮಹಿಳಾ ಹತ್ಯೆ ಕೇಸ್ ನಲ್ಲಿ 9 ಮಂದಿ ಅರೆಸ್ಟ್ : ನಾಗಾ ಪ್ರದೇಶ ಬಂದ್…

Swabhimana News Desk

Leave a Comment