ಜುಲೈ -16-2023- swabhimananews@gmail.com
ಉತ್ತರ ಪ್ರದೇಶದ ಸೋನ್‌ಭದ್ರಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ದಲಿತ ಸಮುದಾಯದ ವ್ಯಕ್ತಿಯ ಕಿವಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಮತ್ತೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯ ಭಾರೀ ವೈರಲ್ ಆದ ಬೆನ್ನಲ್ಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿ ಬಿಜೆಪಿ ಮುಖಂಡನೊಬ್ಬ ಬುಡಕಟ್ಟು ಸಮುದಾಯದ ಯುವಕನ ಮುಖದ ಮೇಲೆ ಮೂತ್ರ ಮಾಡಿದ ವಿಡಿಯೋ ವೈರಲ್ ಆಗಿತ್ತು.
swabhimananews@gmail.com
ಜುಲೈ 11ರಂದು ಸೋನ್‌ಭದ್ರಾ ಜಿಲ್ಲೆಯ ಜುಗೈಲ್ ಪ್ರದೇಶದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಆರೋಪಿ ಹಾಗೂ ದಲಿತ ವ್ಯಕ್ತಿ ಇಬ್ಬರು ಸ್ನೇಹಿತರಾಗಿದ್ದು, ಮದ್ಯ ಸೇವಿಸಿ ಜಗಳ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಎಸ್‌ಪಿ ಯಶವೀರ್ ಸಿಂಗ್ ಮಾಹಿತಿ ನೀಡಿದ್ದು, ”ಆರೋಪಿಗಳಾದ ಜವಾಹರ್ ಪಟೇಲ್ ಮತ್ತು ಇನ್ನೋರ್ವ ವ್ಯಕ್ತಿ ಹಾಗೂ ಗುಲಾಬ್ ಕೋಲ್ ಪರಸ್ಪರ ಸ್ನೇಹಿತರಾಗಿದ್ದು, ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ಮೂವರೂ ಒಟ್ಟಿಗೆ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಗುಲಾಬ್ ಜೊತೆ ಜಗಳವಾಡಿದ ಪಟೇಲ್ ಆತನನ್ನು ಥಳಿಸಿದ್ದಾನೆ. ಆ ಬಳಿಕ ಆತನ ಕಿವಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಹೇಳಿದರು. ಜೊತೆಗಿದ್ದ ಇನ್ನೋರ್ವ ಆರೋಪಿಯ ಹೆಸರು ಬಹಿರಂಗಪಡಿಸಿಲ್ಲ.
swabhimananews@gmail.com
ಕುಡಿದ ಮತ್ತಲ್ಲಿದ್ದ ಗುಲಾಬ್‌ಗೆ ಏನಾಯಿತು ಎಂದು ಗೊತ್ತಾಗಿಲ್ಲ ಆದರೆ, ಘಟನೆಯ ವಿಡಿಯೋವನ್ನು ಯಾರೋ ಚಿತ್ರೀಕರಿಸಿದ್ದಾರೆ. ಆ ಬಳಿಕ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗುಲಾಬ್ ಕೋಲ್ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ಯಶವೀರ್ ಸಿಂಗ್ ಹೇಳಿದ್ದಾರೆ.
swabhimananews@gmail.com
ಘಟನೆ ಮುನ್ನೆಲೆಗೆ ಬಂದ ನಂತರ ಹೆಚ್ಚಿನ ಸಂಖ್ಯೆಯ ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಪಟೇಲ್ ಮತ್ತು ಆತನ ಸಹಚರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
swabhimananews@gmail.com