25.6 C
New York
15 October 2026
Coastal

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಮಾರ್ಗ (ರಿ) ಉಡುಪಿ ಜಿಲ್ಲಾ ಸಂಚಾಲಕರಾಗಿ ಗೋಪಾಲ್ ಶಿವಪುರ ಆಯ್ಕೆ

ಉಡುಪಿ, ಆಗಸ್ಟ್ 30: swabhimaan EWS

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಮಾರ್ಗ (ರಿ) ಇದರ ಉಡುಪಿ ಜಿಲ್ಲಾ ಸಮಿತಿಯ ನೂತನ ಜಿಲ್ಲಾ ಸಂಚಾಲಕರಾಗಿ ಗೋಪಾಲ್ ಶಿವಪುರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ದಿನಾಂಕ 30 ಆಗಸ್ಟ್ 2026 ರಂದು ಉಡುಪಿ ಜಿಲ್ಲೆಯ ಹಾವಂಜೆಯಲ್ಲಿರುವ ಜಿಲ್ಲಾ ಕಚೇರಿಯಲ್ಲಿ ನಡೆದ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ, ರಾಜ್ಯ ಸಂಘಟನಾ ಸಂಚಾಲಕರಾದ ಶೇಖರ್ ಹಾವಂಜೆ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರ ಉಪಸ್ಥಿತಿಯಲ್ಲಿ ಸಂಘಟನೆಯ ಸಂವಿಧಾನದ ಚೌಕಟ್ಟಿನಂತೆ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ಹಿಂದಿನ ಜಿಲ್ಲಾ ಸಂಚಾಲಕರಾದ ಸಂಜೀವ ನಾಯ್ಕ ಕುಕ್ಕೆಹಳ್ಳಿ ಅವರು ತೀವ್ರತರವಾದ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆಯ ಸಭೆಗಳು, ಕಾರ್ಯಕ್ರಮಗಳು ಹಾಗೂ ಪ್ರತಿ ತಿಂಗಳು ನಡೆಯಬೇಕಾದ ಜಿಲ್ಲಾ ಸಮಿತಿಯ ಸಭೆಗಳನ್ನು ನಿಯಮಿತವಾಗಿ ನಡೆಸಿ ಸಂಚಾಲಕರ ಜವಾಬ್ದಾರಿಯನ್ನು ನಿರ್ವಹಿಸಲು ತೊಂದರೆಯಾಗುತ್ತಿರುವುದರಿಂದ, ಅವರೊಂದಿಗೆ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರೊಂದಿಗೆ ಸಮಗ್ರವಾಗಿ ಚರ್ಚಿಸಿ ಈ ಬದಲಾವಣೆಯ ತೀರ್ಮಾನ ಕೈಗೊಳ್ಳಲಾಗಿದೆ.

ಸಂಜೀವ ನಾಯ್ಕ ಕುಕ್ಕೆಹಳ್ಳಿ ಅವರ ಅನಾರೋಗ್ಯದ ಪರಿಸ್ಥಿತಿಯನ್ನು ಪರಿಗಣಿಸಿ, ಸಂಘಟನೆಯ ಕಾರ್ಯಚಟುವಟಿಕೆಗಳು ನಿರಂತರವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಯಬೇಕೆಂಬ ಉದ್ದೇಶದಿಂದ ಜಿಲ್ಲಾ ಸಂಚಾಲಕರ ಸ್ಥಾನಕ್ಕೆ ಮಾತ್ರ ಬದಲಾವಣೆ ಮಾಡಲಾಗಿದ್ದು, ಉಳಿದ ಎಲ್ಲಾ ಪದಾಧಿಕಾರಿಗಳು ಹಿಂದಿನಂತೆಯೇ ತಮ್ಮ ಜವಾಬ್ದಾರಿಗಳಲ್ಲಿ ಮುಂದುವರಿಯಲಿದ್ದಾರೆ.
ನೂತನ ಜಿಲ್ಲಾ ಸಮಿತಿ
ಜಿಲ್ಲಾ ಸಂಚಾಲಕರು: ಗೋಪಾಲ್ ಶಿವಪುರ
ಜಿಲ್ಲಾ ಖಜಾಂಚಿ: ಪೃಥ್ವಿ ಒಳಗುಡ್ಡೆ
ಜಿಲ್ಲಾ ಸಂಘಟನಾ ಸಂಚಾಲಕರು: ರಮೇಶ್ ಮಾಬಿಯಾನ್, ವಿಠ್ಠಲ ಹಾವಂಜೆ, ದಿನೇಶ್, ಸುರೇಂದ್ರ ಕೊಳಲಗಿರಿ
ಸಮಿತಿ ಸದಸ್ಯರು: ಸುಜಾತ ಹಾವಂಜೆ, ಸತೀಶ್ ಅಜೆಕಾರು, ಸುಧೀರ್, ನಾಥು ಒಳಗುಡ್ಡೆ, ಪೂರ್ಣಿಮಾ ಬೈರಂಪಳ್ಳಿ, ಪ್ರತಾಪ್, ಸುನೀತಾ ಒಳಗುಡ್ಡೆ
ಈ ಸಮಿತಿಯು ಮುಂದಿನ ಮೂರು ವರ್ಷಗಳ ಅವಧಿಗೆ ಅಧಿಕೃತವಾಗಿ ಕಾರ್ಯನಿರ್ವಹಿಸಲಿದೆ ಎಂದು ರಾಜ್ಯ ಸಂಘಟನಾ ಸಂಚಾಲಕರಾದ ಶೇಖರ್ ಹಾವಂಜೆ ತಿಳಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಮಾರ್ಗ (ರಿ) ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಾನತೆ, ಸ್ವಾತಂತ್ರ್ಯ, ಸಹೋದರತೆ ಮತ್ತು ಸಾಮಾಜಿಕ ನ್ಯಾಯದ ಸಿದ್ಧಾಂತಗಳನ್ನು ಜನಸಾಮಾನ್ಯರ ನಡುವೆ ಬಲಪಡಿಸುವುದು ಹಾಗೂ ಭಾರತದ ಸಂವಿಧಾನದ ಆಶಯಗಳನ್ನು ರಕ್ಷಿಸಿ, ಜಾರಿಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟ ನಡೆಸಲಿದೆ.
ದಲಿತರು, ಶೋಷಿತರು, ಹಿಂದುಳಿದವರು ಹಾಗೂ ಸಾಮಾಜಿಕವಾಗಿ ಅವಕಾಶ ವಂಚಿತ ಸಮುದಾಯಗಳ ಹಕ್ಕುಗಳಿಗಾಗಿ ಸಂಘಟಿತ ಹೋರಾಟವನ್ನು ಮತ್ತಷ್ಟು ಬಲಪಡಿಸುವುದು, ಸಂವಿಧಾನಬದ್ಧ ಹಕ್ಕುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಮಾಜದಲ್ಲಿ ಸಮಾನತೆ ಹಾಗೂ ನ್ಯಾಯದ ಮೌಲ್ಯಗಳನ್ನು ಬೆಳೆಸುವುದು ನೂತನ ಸಮಿತಿಯ ಪ್ರಮುಖ ಆದ್ಯತೆಗಳಾಗಿವೆ.

“ಸಂವಿಧಾನವೇ ನಮ್ಮ ಶಕ್ತಿ – ಸಮಾನತೆಯೇ ನಮ್ಮ ಗುರಿ – ಸಾಮಾಜಿಕ ನ್ಯಾಯವೇ ನಮ್ಮ ಹೋರಾಟ” ಎಂಬ ಆಶಯದೊಂದಿಗೆ ಉಡುಪಿ ಜಿಲ್ಲಾ ಸಮಿತಿಯು ಮುಂದಿನ ಅವಧಿಯಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಲಿದೆ ಎಂದು ರಾಜ್ಯ ಸಂಘಟನಾ ಸಂಚಾಲಕರಾದ ಶೇಖರ್ ಹಾವಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Swabhimaan news.

Related posts

ಮೂಲ ನಿವಾಸಿ ನಾಗ ಜನಾಂಗದ ಸ್ಮರಣಾರ್ಥವಾಗಿ ನಾಗರ ಪಂಚಮಿ ಆಚರಣೆ, ವಿಶೇಷ ಚೇತನರಿಗೆ ಹಾಲು, ಹಣ್ಣು, ಸಿಹಿ ತಿಂಡಿ ವಿತರಣೆ.

ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ, ಕೆಲವು ಸದಸ್ಯರು ಪಿಡಿಒ,ಕಾರ್ಯದರ್ಶಿಯ ಬೆಂಬಲದಲ್ಲೇ ಸರಕಾರಿ ಭೂಮಿಯಲ್ಲಿ ಅಕ್ರಮ ಅಂಗಡಿ ಕೋಣೆ ನಿರ್ಮಾಣ.ಕಣ್ಣಿದ್ದೂ ಕುರುಡರಾದ ಅಧಿಕಾರಿಗಳು. ಸಾಮಾಜಿಕ ಹೋರಾಟಗಾರರಿಗೆ ಬೆದರಿಸಿದ ಅಕ್ರಮ ಕಟ್ಟಡ ಮಾಲಿಕ..!

Swabhimana News Desk

ಸಿದ್ಧಾಂತಗಳ ಪಾಲನೆಯಿಂದ ಸದೃಢ ಹೋರಾಟ ಸಾಧ್ಯ  ಚೇತನ್.ಅಹಿಂಸಾ

Swabhimana News Desk

Leave a Comment