ಉಡುಪಿ: ಸೆಪ್ಟೆಂಬರ್ -03-2026 swabhimaan news.ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸುಜಯ್ ಪೂಜಾರಿ ಆರೋಪಿಸಿ,ಆಗ್ರಹಿಸಿದ್ದು ಹೀಗೆ.
ಶಿರೂರು ಪರ್ಯಾಯ ನಮ್ಮ ಪರ್ಯಾಯ ಎಂಬ ಕೇವಲ ಪದದಿಂದ ಮಾತ್ರ ನಡೆದಿರುತ್ತದೆ ಪರ್ಯಾಯ ಸಮಯದಲ್ಲಿ ಇದು ನಮಗೆ ಅರ್ಥವೇ ಆಗಲಿಲ್ಲ ಏನು ಮಾಡಲಿ ದ್ವಾರದಲ್ಲಿ ನಿಂತು ಸ್ಥಳೀಯರು ಕೃಷ್ಣ ಕೃಷ್ಣ ಕೃಷ್ಣ ಎಂದು ಹೇಳಿ ರಾಘವೇಂದ್ರ ಸ್ವಾಮಿ ಮಠಕ್ಕೆ ದರ್ಶನದ ಪಡೆದು ವಾಪಸು ಹೋಗುತ್ತಿರುವ ಸಾವಿರಾರು ಭಕ್ತಾದಿಗಳ ನೋವಿನ ಮಾತು ಇದು
ಹಲವಾರು ವರ್ಷಗಳಿಂದ ನಾವು ಕೃಷ್ಣ ಮಠಕ್ಕೆ ತೆರಳಿದಾಗ ಸ್ಥಳೀಯರೆಂದ ಕೂಡಲೇ ಗೌರವದಿಂದ ನೇರ ಸಂದರ್ಶನ ಯಾವುದೇ ಅಡೆತಡೆ ಇಲ್ಲದೆ ನಮ್ಮ ಕೃಷ್ಣ ದರ್ಶನವನ್ನು ಪಡೆದು ಭಾಗ್ಯವಂತರಾಗುತ್ತಿತ್ತು ಆದರೆ ಅದು ಈಗ ನುಚ್ಚುನೂರಾಯಿತು ಕಾರಣ ಹೀಗೆ ಇರುವ ವ್ಯವಸ್ಥೆಗಳು ಬಹಳ ಬೇಸರವಾಗುತ್ತದೆ ಕೃಷ್ಣನನ್ನು ನಾ ನೋಡಲಿಲ್ಲ ಬೇಸರ ಪರ್ಯಾಯ ಸಮಯದಲ್ಲಿ ಶಿರೂರು ಪರ್ಯಾಯ ನಮ್ಮ ಪರ್ಯಾಯ ಎಂದು ಸುತ್ತ ಮುತ್ತಲಿನ ಹಳ್ಳಿಯ ಜನರು ಶ್ರೀ ಕೃಷ್ಣನ ಅನುಗ್ರಹ ನಮಗಿರಲಿ ಎಂದು ತಿಳಿದು ಹೊರ ಕಾಣಿಕೆಗಳನ್ನು ಅಲ್ಲದೆ ಸೇವಕರಾಗಿ ಹಲವಾರು ಕೆಲಸ ಮಾಡಿದರು ಆದರೆ ಅದರಿಂದ ಶ್ರೀ ಕೃಷ್ಣನ ಪರ್ಯಾಯವೋ ಅದ್ದೂರಿಯಾಗಿ ನಡೆಯಿತು ನಡೆದ ಮೇಲಂತೂ ಬದಲಾವಣೆಯೇ ಬದಲಾವಣೆ ಅತಿ ಬದಲಾವಣೆಯೂ ಸಮಸ್ಯೆಯಾಗಿ ಪರಿವರ್ತನೆ ಆಗುತ್ತದೆ ಎಂದು ನಮಗೆ ತಿಳಿದೇ ಇರಲಿಲ್ಲ ಹಲವಾರು ಮಂದಿ ಹೊರೆ ಕಾಣಿಕೆಯನ್ನು ಕೊಟ್ಟು ಕೃಷ್ಣನ ಸೇವೆಯನ್ನು ಮಾಡಿದ ಅದೇ ಭಕ್ತರು ಶ್ರೀ ಕೃಷ್ಣನು ನೋಡಲು ಅವಕಾಶ ಸಿಗದಾಗ ಮನಸ್ಸಿಗಾಗುವ ನೋವು ಯಾರಲ್ಲಿ ಹೇಳಲಿ ಕನಕನ ಕಿಂಡಿಯಲ್ಲಿ ನೋಡಿದಾಗ ಒಳಗಡೆ ಜನರ ಸರತಿ ಸಾಲಿನಲ್ಲಿರುವಾಗ ಕೃಷ್ಣನ ಮುಖ ನೋಡದೆ ಭಾರವಾದ ಹೃದಯದಿಂದ ರಾಘವೇಂದ್ರ ಸ್ವಾಮಿ ದರ್ಶನವನ್ನು ಪಡೆದು ನೀನೇ ಕೃಷ್ಣನೆಂದು ಕೈಮುಗಿದು ಬರುವ ಪರಿಸ್ಥಿತಿ ಸ್ಥಳೀಯರಿ ಗಾಯಿತಲ್ಲ ಎಂಬ ಬೇಸರ ಸ್ಥಳೀಯರು ಕೂಡ ಹಣ ಕೊಟ್ಟು ಕೃಷ್ಣನನ್ನು ನೋಡುವುದಾದರೆ ಸ್ಥಳೀಯರು ಮುಂದಿನ ಪರ್ಯಾಯದಲ್ಲಿ ಭಾಗವಹಿಸುವುದು ಸಂಶಯ ಯಾಕಂತ ಹೇಳಿದ್ರೆ ಕಷ್ಟನ ಮೇಲೆ ಬೇಸರದಿಂದಲ್ಲ ಅಲ್ಲಿಯ ಮಠದಲ್ಲಿ ನಡೆಯುವ ಸರ್ವಾಧಿಕಾರಿಯ ನಡತೆಯಿಂದ ನಿಯಮಗಳು ಶಿಸ್ತುಗಳು ದೇವಸ್ಥಾನದಲ್ಲಿ ಅತಿ ಮುಖ್ಯ ಯಾರಾದರೂ ಸ್ಥಳೀಯರು ಹೊರ ಕಾಣಿಕೆ ಪತ್ರವನ್ನು ತೋರಿಸಿದ ಕೂಡಲೇ ಅವರಿಗೆ ದೇವರ ದರ್ಶನವನ್ನು ಅನು ಮಾಡಿಕೊಟ್ಟಲ್ಲಿ ಆ ಆತ್ಮ ತೃಪ್ತಿಯೇ ಬೇರೆ ನನ್ನೊಂದಿಗೆ ಕೃಷ್ಣನೆಂಬುವ ಭಾವನೆ ಅವರಲ್ಲಿ ಇರುತ್ತದೆ ಇದು ಕೃಷ್ಣನ ನಡೆಯಲ್ಲ ಸರ್ವಾಧಿಕಾರಿಗಳ ನಡೆ ಒಂದು ವೇಳೆ ದೂರದ ವ್ಯಕ್ತಿ ನಮ್ಮ ಸಂಬಂಧಿಯಾಗಿದ್ದು ಕೃಷ್ಣಮಟ್ಟಕ್ಕೆ ಕರೆದುಕೊಂಡು ಹೋಗಿ ಎಂದಾಗ ನಮ್ಮಲ್ಲಿ ಉತ್ತರ ಇಲ್ಲ ಯಾಕಂತ ಹೇಳಿದ್ರೆ ಅಲ್ಲಿ ಪುನಃ ಹಣ ಕೊಟ್ಟು ಕರೆದುಕೊಂಡು ಹೋದಾಗ
ಸ್ಥಳೀಯರಿಗೆ ಬೆಲೆ ಇಲ್ಲದಂತಾಗಿದೆ ಹಲವಾರು ವರ್ಷಗಳಿಂದ ಈ ಸಮಸ್ಯೆ ಇರಲಿಲ್ಲ ಯಾರಾದರೂ ಕೇಳಿದರೆ ಕೃಷ್ಣ ಮಟ್ಟಕ್ಕೆ ಹೋಗು ವ್ಯವಸ್ಥೆ ಮಾಡುತ್ತೀರಿ ಅಂತ ಕೇಳಿದಾಗ ಹಣಕೊಟ್ಟು ನೋಡಿಕೊಂಡು ಹೋಗಿ ಎನ್ನುವ ಪರಿಸ್ಥಿತಿ ಸ್ಥಳೀಯರಿಗೆ ಮನಸ್ಸಿಗೆ ಬಂದಿದೆ. ವ್ಯವಸ್ಥಾಪಕರಲ್ಲಿ ವಿನಂತಿ ದಿನದಲ್ಲಿ ಎಷ್ಟು ಜನ ಸ್ಥಳೀಯರು ದೇವಸ್ಥಾನದ ಒಳಗೆ ಹೋಗುತ್ತಾರೆ ಎನ್ನುವುದನ್ನು ವಿಮರ್ಶೆ ಮಾಡಿ ನೋಡಿ ಪ್ರತಿಯೊಬ್ಬರೂ ಸಂಜೆ ಹೊತ್ತಿನಲ್ಲಿ ನೇರದರ್ಶನ ಮಾಡಿ ಬರುತ್ತಿದ್ದರು ಆದರೆ ಇದಕ್ಕೆ ಮುಖ್ಯ ಕಾರಣ ವ್ಯವಸ್ಥಾಪಕರು ವ್ಯವಸ್ತೆಗಳು ಪರ್ಯಾಯ ಸಮಿತಿ ಪದಾಧಿಕಾರಿಗಳು ಅವರು ಹಳ್ಳಿ ಹಳ್ಳಿಗಳಲ್ಲಿ ಹೋಗಿ ಸಭೆಗಳನ್ನು ಮಾಡಿ ಹೊರ ಕಾಣಿಕೆಯನ್ನು ತಂದು ಕೊಡುವಲ್ಲಿ ಶ್ರಮವಹಿಸಿರುತ್ತಾರೆ ಅಷ್ಟೇ ಶ್ರಮವನ್ನು ಹಳ್ಳಿಯ ಜನರು ಕೃಷ್ಣನ ಭಕ್ತಿಯಿಂದ ಶ್ರೀ ದೇವರಿಗೆ ಹೊರಕಾಣಿಕೆ ಅರ್ಪಣೆ ಮಾಡಿರುತ್ತಾರೆ . ಪರ್ಯಾಯ ಸಮಿತಿಯ ಪದಾಧಿಕಾರಿಗಳು ಅವರು ಮುಂದಿನ ಪರ್ಯಾಯಕ್ಕೆ ಬರುವಾಗ ಒಂದು ಪ್ರಶ್ನೆ ಖಂಡಿತ ಉದ್ಬವಿಸುತ್ತದೆ ಅದೇನಂದರೆ ನಾವು ದೇವರಿಗೆ ಹೊರ ಕಾಣಿಕೆ ಕೊಟ್ಟವರಿಗೆ ತಿಂಗಳಿಗೆ ಒಮ್ಮೆಯಾದರೂ ಕೃಷ್ಣನ ದರ್ಶನ ತೊರೆದಿರುವುದು ಬಹಳ ಬೇಸರ ವ್ಯಕ್ತಪಡಿಸುವುದರೊಂದಿಗೆ ಇದು ಮುಂದಿನ ಪರ್ಯಾಯದಲ್ಲಿ ಖಂಡಿತ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ ನಮಗೊಂದು ಹೆಮ್ಮೆ ನಮ್ಮ ಕೃಷ್ಣ ನಮ್ಮೊಂದಿಗೆ ಇದ್ದಾನೆ ಅಂತ ತಿಂಗಳಿಗೊಮ್ಮೆ ಅವನ ಮುಖವನ್ನು ನೋಡಿದಾಗ ಏನು ಶಕ್ತಿ ತುಂಬಿದ ಅನುಭವ ಆಗುತ್ತೆ ಈಗ ರಾಘವೇಂದ್ರ ಸ್ವಾಮಿ ಗತಿಯಂದು ಉಡುಪಿ ಮಠದಿಂದ ಭಾರವಾದ ಹೆಜ್ಜೆಯನ್ನು ಹಾಕುತ್ತ ಮನೆಗೆ ಸ್ಥಳೀಯರು ಬರುತ್ತಿದ್ದಾರೆ ಆದ ಕಾರಣ ಸ್ಥಳೀಯರ ವಿನಂತಿಯೇನೆಂದರೆ ಯಾರು ಸೇವಕರಾಗಿ ಕೆಲಸ ಮಾಡಿದ್ದರು ಯಾರು ಹೊರ ಕಾಣಿಕೆಯಾಗಿ ನೀಡಿದರು ಅದಕ್ಕೆ ಸಂಬಂಧಪಟ್ಟ ದಾಖಲೆ ನೀಡಿದಲ್ಲಿ ಅವರನ್ನು ಉಚಿತವಾಗಿ ಒಳ ಕಳಸೋ ವ್ಯವಸ್ಥೆಯನ್ನು ಮಾಡಿ ಎಂದು ವಿನಂತಿಸುತ್ತೇವೆ ಒಂದು ವೇಳೆ ಇದು ಹೀಗೆ ಮುಂದುವರಿದರೆ ನಮ್ಮ ಕನ್ನಡ ನಾಡು ಸೇನೆ ಜಿಲ್ಲಾ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಸೇರಿ ಸ್ಥಳೀಯರೊಂದಿಗೆ ಹೋರಾಟ ಮಾಡಿ ಶ್ರೀ ಕೃಷ್ಣನ ಮಾರ್ಗದರ್ಶನನಂತೆ ಮುಂದಿನ ನಿರ್ಣಯವನ್ನು ತಿಳಿದುಕೊಳ್ಳುತ್ತೇನೆ.. ಎಂದು ತಿಳಿಸಿದ್ದಾರೆ.
Swabhimaananews.
