17.3 C
New York
8 September 2024
Coastal

ಕದಸಂಸ ಭೀಮವಾದ (ರಿ) ಉಡುಪಿ ಜಿಲ್ಲೆ ಇದರ ವತಿಯಿಂದ ಭೋಧಿಸತ್ವ ದಲ್ಲಿ. ಅಂಬೇಡ್ಕರ್ ರವರ 133 ನೇ ಜಯಂತಿ ಆಚರಣೆ ಮತ್ತು ಭೀಮವಾದ ಮತ್ತು ಹಾವಂಜೆ ಗ್ರಾಮಪಂಚಾಯತ್ ಸಹಯೋಗದಲ್ಲಿ ಮತದಾನ ಜಾಗೃತಿ ಅಭಿಯಾನ ಮತ್ತು ಪ್ರತಿಜ್ಞಾ ಸ್ವೀಕಾರ ನೆರವೇರಿತು.

ಏಪ್ರಿಲ್ -14-2024 Swabhimananews

ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಇದರ ವತಿಯಿಂದ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದಲ್ಲಿರುವ ಭೋಧಿಸತ್ವ ದಲ್ಲಿ ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿ, ವಿಶ್ವರತ್ನ,

ಪರಮಪೂಜ್ಯ ಡಾ ಬಾಬಸಾಹೇಬ್ ಅಂಬೇಡ್ಕರ್ ರವರ 133 ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೂ ಮೊದಲು ಉಡುಪಿ ಜಿಲ್ಲೆಯ ಬುದ್ಧ ಧಮ್ಮಾಚಾರಿಗಳಾದ ಶಂಭು ಸುವರ್ಣ ರವರ ನೇತೃತ್ವದಲ್ಲಿ ಬುದ್ಧವಂದನೆ ನೆರವೇರಿಸಲಾಯಿತು.ಅಂಬೇಡ್ಕರ್ ರವರ 133 ನೇ ಭೀಮ್ ಜಯಂತೋತ್ಸವ ಕಾರ್ಯಕ್ರಮವನ್ನು.

ಕದಸಂಸ ಭೀಮವಾದದ ರಾಜ್ಯ ಸಂಘಟನಾ ಸಂಚಾಲಕರಾದ ಶೇಖರ್ ಹಾವಂಜೆ ರವರು ಉದ್ಘಾಟಿಸಿದರು. ಸಭಾಧ್ಯಕ್ಷತೆತನ್ನು ಉಡುಪಿ ಜಿಲ್ಲಾ ಸಂಚಾಲಕರಾದ ಸಂಜೀವ ನಾಯ್ಕ್ ಕುಕ್ಕೆಹಳ್ಳಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೌದ್ಧ ಉಪಾಸಕರು ಮತ್ತು ಉಪನ್ಯಾಸಕರಾದ ಮಾನ್ಯ ಫಕೀರಪ್ಪ ,ಜಿಲ್ಲಾ ಆರ್ ಟಿ ಐ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸದಾಶಿವ ಶೆಟ್ಟಿ ಹೇರೂರು, ಭೀಮವಾದದ ಜಿಲ್ಲಾ ಸಂಘಟನಾ ಸಂಚಾಲಕರಾದ ಗೋಪಾಲ್ ಶಿವಪುರ,
RTI ನ ಪ್ರದಾನ ಕಾರ್ಯದರ್ಶಿ ವಿಜಯ್ ಕುಮಾರ್ ಬಾರ್ಕೂರು,ದಸಂಸದ ಜಿಲ್ಲಾ ಖಜಾಂಚಿ ಪೃಥ್ವಿ ಒಳಗುಡ್ಡೆ, ಬೌದ್ಧ ಧಮ್ಮಾಚಾರಿಗಳಾದ ಶಂಭು ಸುವರ್ಣ, ಜಿಲ್ಲಾ ಮೊಗವೀರ ಸಂಘಟನೆಯ ರತ್ನಾಕರ್ ಮೊಗವೀರ್,
ಅನಿಲ್ ಫೆರ್ನಾಂಡಿಸ್ ಬಾರ್ಕೂರು ಆಗಮಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ಶೇಖರ್ ಹಾವಂಜೆ ರವರು.ಅಂಬೇಡ್ಕರ್ ರವರು ಒಂದು ವೇಳೆ ಸಂವಿಧಾನ ಬರೆಯದೆ ಬೇರೊಬ್ಬರು ವ್ಯಕ್ತಿ ನಮ್ಮದೇಶದ ಸಂವಿಧಾನ ಬರೆದಿದ್ದರೆ ಶೋಷಿತ ವರ್ಗದ, ಕಾರ್ಮಿಕ,ದಲಿತರ, ನಿರ್ಗತಿಕರ ಮಹಿಳೆಯರ ಸ್ಥಿತಿ ಏನಾಗುತ್ತಿತ್ತು.ಈ ದೇಶದ ಎಲ್ಲಾ ವರ್ಗದ ಮಹಿಳೆಯರಿಗೆ ಸ್ವತಂತ್ರ, ಸಮಾನತೆ,ಸಾಮಾಜಿಕ ನ್ಯಾಯ ಮತ್ತು ತಂದೆಯ ಆಸ್ತಿಯಲ್ಲಿ ಸಮಪಾಲು, ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರಿಗೆ ಮೀಸಲಾತಿ, ಓಟು ಹಾಕುವ ಸಮಾನ ಹಕ್ಕು ಸಿಗುತ್ತಿತ್ತೇ ….?

ಮತ್ತು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಓಟು ಹಾಕುವ ಸಮಾನ ಹಕ್ಕು ತಂದವರು ಯಾರು.ನಮ್ಮ ದೇಶದಲ್ಲಿ ಮುಖ್ಯವಾಗಿ ಮಹಿಳೆಯರು ಬಾಬಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಬೇಕು, ಮೊದಲ ಗೌರವ ಅವರಿಗೆ ನೀಡಬೇಕಿತ್ತು.ಆದರೆ ನಮ್ಮ ದೇಶದ ಹೆಚ್ಚಿನ ಮಹಿಳೆಯರಿಗೆ ಬಾಬಸಾಹೇಬರು ಏನೆಂದೇ ಗೊತ್ತಿಲ್ಲದಿರುವುದು ಬಹುದೊಡ್ಡ ದುರಂತ.ಇಂದು ನಾವು ನೀವೆಲ್ಲರೂ ನೆಮ್ಮದಿಯಾಗಿ, ಇಷ್ಟೊಂದು ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ಬಾಬಸಾಹೇಬ್ ಅಂಬೇಡ್ಕರ್ ರವರು ಕೊಟ್ಟಂತಹ ಸಂವಿಧಾನವೇ ಹೊರತು ಬೇರೆ ಯಾವ ಶಕ್ತಿಯೂ ಅಲ್ಲ ವ್ಯಕ್ತಿಯೂ ಅಲ್ಲ ಎನ್ನುವುದನ್ನು ನಾವೆಲ್ಲರೂ ಒಪ್ಪಲೇ ಬೇಕು ಇದು ಸತ್ಯಕೂಡ.


ಹಾಗಾಗಿ ಈ ದೇಶದ ಪ್ರತಿಯೊಬ್ಬ ಪ್ರಜೆಯೂ ನಮ್ಮ ದೇಶದ ಸಂವಿಧಾನ ಓದಬೇಕು, ನಮ್ಮ ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರು.

ಮುಖ್ಯ ಅತಿಥಿ ಪಕೀರಪ್ಪ ರವರು ಮಾತನಾಡಿ.

ಅಂಬೇಡ್ಕರ್ ಎಂದರೆ ಜ್ಞಾನ, ಅವರನ್ನು ಸ್ಮರಿಸಬೇಕು ಇಂದು ಇಡೀ ವಿಶ್ವವೇ ಇಂದು ,ಅವರ ಜೀವನವನ್ನು ತಮ್ಮ ತಮ್ಮ ದಾರಿದೀಪವಾಗಿಸಿ ಕೊಂಡಿದ್ದೇವೆ ಅವರನ್ನು ಇಂದು ಮಾತ್ರವಲ್ಲ ಪ್ರತಿ ದಿನವೂ ಅವರ ಜೀವನದ ಬಗ್ಗೆ ನಾವು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಇರಬೇಕು ಎಂದರು.

ಇನ್ನೋರ್ವ ಮುಖ್ಯ ಅತಿಥಿ ಶಂಭು ಸುವರ್ಣ ರವರ ಮಾತಲ್ಲಿ ಬಾಬಸಾಹೇಬ್ ಅಂಬೇಡ್ಕರ್ ರವರು ಹಿಂದೂ ಧರ್ಮದ ಅನಿಷ್ಟ ಪದ್ಧತಿಗಳನ್ನು ಹಾಗೂ ಮೌಢ್ಯವನ್ನು ವಿರೋಧ ಮಾಡುತ್ತಲೇ ಬಂದಿದ್ದಾರೆ.ಅವರು ಅಂದು ಹೇಳಿದಂತೆ ನಾನು ಹಿಂದೂ ಆಗಿ ಹುಟ್ಟಿದ್ದೇ ಆದರೆ ಹಿಂದೂ ಆಗಿ ಸಾಯಲಾರೆ ಎಂದಿದ್ದರು ಅದರಂತೆ 1956 ರಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಅಧಿಕೃತವಾಗಿ ಸೇರಿದರು.ಆ ತತ್ವ ಸಿದ್ಧಾಂತಗಳನ್ನು ಪಾಲಿಸಲು ಇಂದು ನಮ್ಮೊಂದಿಗೆ ಇರುವ ಶೇಖರ್ ಹಾವಂಜೆ ರವರು ತನ್ನ ಒಬ್ಬ ಮಗನನ್ನೇ ಬೌದ್ಧ ಧಮ್ಮಕ್ಕೆ ದಾನ ನೀಡಿದ್ದಾರೆ.

ಇಂದು ಅವರು ದೊಡ್ಡಮಮಗ (ಭರತ್) ಬೌದ್ಧ ಧಮ್ಮದಲ್ಲಿ ಧಮ್ಮೊವರೋ ಭಂತೇಜಿಯಾಗಿ ಹೈದರಾಬಾದ್ ಮಹಾ ಬೋಧಿ ಯಲ್ಲಿ ಧಮ್ಮಪ್ರಚಾರ ಮಾಡುತ್ತಿದ್ದಾರೆ.ಇದರಲ್ಲೆ ಅರ್ಥ ಆಗುತ್ತದೆ ಶೇಖರ್ ಹಾವಂಜೆ ರವರಿಗೆ ಯಾವುದೇ ಸ್ವಾರ್ಥ, ಆಸೆ, ಆಕಾಂಕ್ಷೆ ಗಳಿಲ್ಲ ಎಂದು ತನ್ನ ಜೀವನದಲ್ಲಿ ಇಂದಿಗೂ ಎಂದೆಂದಿಗೂ ಅಳಿಸಲಾಗದ ಇತಿಹಾಸವನ್ನು ಶೇಖರ್ ಹಾವಂಜೆ ಮತ್ತು ಅವರ ಕುಟುಂಬಸ್ಥರು ಮಾಡಿದ್ದಾರೆ.ನಾವೆಲ್ಲರೂ ಅವರಿಗೆ ಕೃತಜ್ಞತೆ, ಅಭಿನಂದನೆಗಳನ್ನು ಸಲ್ಲಿಸೋಣ ಎಂದರು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಜೀವ ನಾಯ್ಕ್ ಕುಕ್ಕೆಹಳ್ಳಿ ಮಾತನಾಡುತ್ತಾ.ಇಂದು ನಾವು ಅಂಬೇಡ್ಕರ್ ರವರ 133 ನೇ ಜನ್ಮದಿನಾಚರಣೆ ಮಾಡ್ತಾ ಇದ್ದೇವೆ ಆದರೆ ನಮ್ಮನ್ನಾಳುವ ಸರ್ಕಾರಗಳು ಅಂಬೇಡ್ಕರ್ ರವರು ಕೊಟ್ಟಂತಹ ಸಂವಿಧಾನದ ಪ್ರಕಾರ ಪ್ರಶ್ನೆ ಮಾಡಿದರೆ, ನಮ್ಮ ಹಕ್ಕುಗಳನ್ನು ಕೇಳಿದರೆ, ಮತ್ತು  ಸಮಾಜದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು, ಪ್ರಕೃತಿ ಲೂಟಿ ಮಾಡುವವರ ವಿರುದ್ಧ ದ್ವನಿ ಎತ್ತಿದರೆ, ದೂರು ನೀಡಿದರೆ.

ಅಂತವರ ವಿರುದ್ಧ ಸುಳ್ಳು ದೂರುಗಳನ್ನೇ ನೀಡಿ.ಸಮಾಜದಲ್ಲಿ ಸಾಮಾಜಿಕ ಹೋರಾಟಗಾರರೆ.ಕೆಟ್ಟವರು,ಸಮಾಜ ಘಾತುಕರು ಎಂಬಂತೆ ಬಿಂಬಿಸಿ ಬಿಡುತ್ತಿದ್ದಾರೆ.ಇದಕ್ಕೆ ಕಾರಣ ನಮಗೆ ಕಾನೂನಿನಬಗ್ಗೆ ಸರಿಯಾದ ಅರಿವು ಇಲ್ಲದಿರುವುದು.ಮತ್ತು ಕೆಲವು ಭ್ರಷ್ಟ ಅಧಿಕಾರಿಗಳ ಕುತಂತ್ರ ದಿಂದ ಎಂದರು.

ಶರತ್ ಎಸ್ ಹಾವಂಜೆ ಕಾರ್ಯಕ್ರಮವನ್ನು. ನಿರೂಪಿಸಿ,ಸ್ವಾಗತಿಸಿದರು ಪೃಥ್ವಿ ಒಳಗುಡ್ಡೆ ದನ್ಯವಾದ ಸಮರ್ಪಿಸಿದರು.

ಸಂದರ್ಭದಲ್ಲಿ.ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕರಾದ ವಿಠಲ ಹಾವಂಜೆ, ಸಮಿತಿ ಸದಸ್ಯರಾದ ಸುಜಾತ ಎಸ್ ಹಾವಂಜೆ, ಪೂರ್ಣಿಮಾ ಬೈರಂಪಳ್ಳಿ, ಮಂಜು ಹರಿಖಂಡಿಗೆ,ನಾಥೂ ಒಳಗುಡ್ಡೆ,
ಕರ್ಣ ಬೈರಂಪಳ್ಳಿ, ಮಹಾಬಲ,ಸತೀಶ್ ಹಾವಂಜೆ,ರೂಪ,
ಪ್ರದೀಪ್ ಡಿ ಎಮ್, ಚೈತ್ರ, ಶ್ರೇಯಾ,ವನಿತಾ,ಶಿವರಾಜ್, ಸಂತೋಷ್, ಸುರೇಖಾ, ನಾರಾಯಣ,ವಸಂತಿ,ಶಮಿತ್, ಗೌತಮಿ,ಆಧ್ಯಾ, ಸನ್ನತಿ ಮತ್ತು ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.

ಕೊನೆಯಲ್ಲಿ ಹಾವಂಜೆ ಗ್ರಾಮಪಂಚಾಯತ್ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ಮತದಾನ ಜಾಗೃತಿ ಅಭಿಯಾನ ಮತ್ತು ಪ್ರತಿಜ್ಞಾ ವಿಧಿ ಬೋಧನೆ ನಡೆಯಿತು. ಪ್ರತಿಜ್ಞಾ ವಿಧಿ ಬೋಧನೆಯನ್ನು ಹಾವಂಜೆ ಗ್ರಾಮಪಂಚಾಯತ್ ನ ಸಿಬ್ಬಂದಿಗಳಾದ ಸದಾಶಿವ ಕೊಳಲಗಿರಿ ಮತ್ತು ಸುಮತಿ ಹಾವಂಜೆ ಭೋದಿಸಿದರು.

Swabhimananews

Related posts

ಕಾರ್ಕಳ ಕಟ್ಟಡ ಕಲ್ಲು ಕ್ವಾರಿಯಲ್ಲಿ ಸ್ಪೋಟ.ಕಾರ್ಮಿಕ ಸಾವು; ಗಣಿ ಮಾಲಿಕ ದಿನೇಶ್ ಶೆಟ್ಟಿ ಸೇರಿ
ಇಬ್ಬರ ವಿರುದ್ಧ ಪ್ರಕರಣ ದಾಖಲು.ಕಲ್ಲುಕ್ವಾರೆ, ಕ್ರಷರ್ ಮುಚ್ಚುವಂತೆ ಸಾರ್ವಜನಿಕರ ಒತ್ತಾಯ.

Swabhimana News Desk

ಫ್ಲೈಓವರ್‌ನಿಂದ ಸರ್ವಿಸ್ ರಸ್ತೆಗೆ ಬಿದ್ದ ಕಾರು ದಂಪತಿ ಸಾವು; ಪುತ್ರ ಪ್ರಾಣಾಪಾಯದಿಂದ ಪಾರು

Swabhimana News Desk

ನಾಳೆ ಜುಲೈ 25ರಂದು ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ : ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ…!!

Swabhimana News Desk

Leave a Comment