26.4 C
New York
31 July 2025
Coastal

ಸೌಜನ್ಯಾಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಮರುತನಿಖೆಗೆ
ಒತ್ತಾಯಿಸಿ ಉಡುಪಿಯಲ್ಲಿ ಅಂಬೇಡ್ಕರ್ ಯುವಸೇನೆ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿಭಟನೆ,

ಜುಲೈ 24-2023 Swabhimananews@gmail.com ಇಡೀ ಕರ್ನಾಟಕದ ಜನರ ಆಸೆ ಕನಸುಗಳ ಹಿಂದೆ ನಿಮ್ಮ ತುಂಬು ಹೃದಯದ ಹಾರೈಕೆಗಳು ಇರುವುದರಿಂದ ನಿಮ್ಮ ಜತೆ ಆತ್ಮೀಯವಾಗಿ ಮತ್ತು ಅನಿವಾರ್ಯವಾಗಿ ಈ ಬೇಡಿಕೆಯನ್ನು ಒತ್ತಾಯಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ.ಪ್ರತಿಭಟನಕಾರರ ಮುಖಂಡರಾದ ಜಯನ್ ಮಲ್ಪೆ ಪ್ರಸ್ತಾಪಿಸುತ್ತ.

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಕಳೆದ 2012
ಅಕ್ಟೋಬರ್ 1ರಂದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಭೀಕರವಾದ ಕ್ರೌರ್ಯ ನಡೆದಿರುವುದು
ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲೂ ಸುದ್ದಿಯಾಗಿತ್ತು.

ಕಾಲೇಜು ವಿಧ್ಯಾರ್ಥಿನಿ ಸೌಜನ್ಯಾಳನ್ನು ಅತ್ಯಾಚಾರಮಾಡಿ ಕೊಲೆಗೈದಿರುವುದು ಪತ್ತೆಯಾಗಿತ್ತು. ಬಳಿಕ ಈ ಘಟನೆಯನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸಲಾಗಿತ್ತು.ಇದೀಗ ಸುಮಾರು 12 ವರ್ಷದ ಬಳಿಕ 2023 ಜೂನ್ 16ರಂದು ಬಿಂಬಿಸಲ್ಪಟ್ಟಿದ್ದ ಸಂತೋಷ್‌ ರಾವ್ ಎಂಬ ಯುವಕ ಪ್ರಕರಣದಲ್ಲಿ ಆರೋಪಿ ಎಂದು ಮಾನ್ಯ ಸಿಬಿಐ

ನ್ಯಾಯಾಲಯ ತೀರ್ಪು ನೀಡಿದೆ. ಇದರಿಂದ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ನಡೆಸದೆ ಒಂದು ಸೈಡ್
ವಿಚಾರಣೆಯಿಂದ ನ್ಯಾಯ ಎಂಬೂದು ಮರಿಚಿಕೆಯಾಗಿದೆ. ಈ ಸೌಜನ್ಯಳ ಪ್ರಕರಣವನ್ನು ಆರಂಭದಿಂದ ಉದ್ದೇಶಪೂರ್ವಕವಾಗಿ ದಿಕ್ಕುತಪ್ಪಿಸಲಾಗಿದೆ.

ಸಾಕ್ಷ್ಯಗಳನ್ನು ನಾಶಮಾಡಲಾಗಿದೆ.ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದಲೇ ನಕಲಿ ಸಾಕ್ಷಿಗಳನ್ನು ಸೃಷ್ಟಿಸಲಾಗಿದೆ.ಮರಣೋತ್ತರ ಪರೀಕ್ಷೆಯ ವರದಿಯನ್ನುಸೃಷ್ಟಿಸಲಾಗಿದೆ.

.ಹಾಗಾಗಿ ಸೌಜನ್ಯಳನ್ನು ಅತ್ಯಾಚಾರಮಾಡಿ ಕೊಂದವರು ಯಾರು?’ ಎಂಬ ಪ್ರಶ್ನೆ ರಾಜ್ಯದ ಜನರಲ್ಲಿ ಮೂಡಿದೆ.

ನಮ್ಮ ಪೊಲೀಸರು ಪ್ರಭಾವಶಾಲಿಗಳು ಆಪರಾಧಿಗಳ ಬೆಂಬಲಕ್ಕೆ ನಿಂತಿದ್ದಾರಾ?ಧರ್ಮಸ್ಥಳದ ಮಂಜುನಾಥೇಶ್ವರ ಕಾಲೇಜಿಗೆ ಹೋಗಿದ್ದ ಸೌಜನ್ಯಾ: ಸಂಜೆ 4ಗಂಟೆಗೆ ಸ್ನಾನಘಟ್ಟದ ಬಳಿ ಮನೆ ಕಡೆಗೆ ಹೋಗುತ್ತಿದ್ದವಳು ಕೊನೆಗೂ ಮನೆ ತಲುಪಲೇ ಇಲ್ಲ,ಮರುದಿನ ವಿದ್ಯಾರ್ಥಿ ಸೌಜನ್ಯಾಳ ಮೃತದೇಹ ಪೊದೆಯಲ್ಲಿ ಪತ್ತೆಯಾಗಿದೆ. ಅಂದರೆ ಸೌಜನಾಳನ್ನು ಅಪಹರಿಸಿ ಅತ್ಯಾಚಾರಮಾಡಿ ಕೊಲೆಗೈದು ಈ ಪೊದೆಯಲ್ಲಿ ಎಸೆಯಲಾಗಿದೆ ಎಂಬ ಆರೋಪ ಮನೆಯವರಿಂದ ಕೇಳಿಬಂದಿದೆ. ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಬಾಹುಬಲಿ ಬೆಟ್ಟದಲ್ಲಿ ಕುಳಿತ್ತಿದ್ದ ಸಂತೋಷರಾವ್

ಎಂಬ ಪ್ರವಾಸಿಯೊಬ್ಬನ್ನು ಹಿಡಿದು ಪೊಲೀಸರ ವಶಕ್ಕೆ ಕೊಡಲಾಗಿತ್ತು. ಆದರೆ ಸರಿಯಾಗಿ ಪ್ರಕರಣವನ್ನು ಬೇಧಿಸದ ಬೆಳ್ತಂಗಡಿ ಪೊಲೀಸರು,ಸಿಐಡಿ ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳು ಇಡೀ ಘಟನೆಯನ್ನು ನಿರಪರಾಧಿಯಾಗಿದ್ದ ಸಂತೋಷರಾವ್‌ ಮೇಲೆ ಕಟ್ಟಿದರು.

ಇದೀಗ ಮಾನ್ಯ ಸಿಬಿಐ. ನ್ಯಾಯಲಯ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಆರೋಪಿ ಸಂತೋಷ್ ರಾವ್ ಅಲ್ಲ ಎಂದು ತೀರ್ಪು ನೀಡಿದೆ
ಹಾಗಾದರೆ

ಸೌಜನಾಳನ್ನು ಕೊಲೆ ಮಾಡಿದವರು ಯಾರು? ಎಂಬ ಪ್ರಶ್ನೆ ನಾಗರಿಕ ಸಮಾಜವನ್ನು ಕಾಡುತ್ತಿದೆ.

ಆದ್ದರಿಂದ ಕರ್ನಾಟಕ ಸರಕಾರ ಪ್ರಕರಣಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಇಡೀ

ಪ್ರಕರಣವನ್ನು ಎಸ್‌ಐಟಿ ಯಿಂದ ಮರುವನಿಖೆ ನಡೆಸಬೇಕು.ಅಥವಾ ಎನ್‌ಐಗೆ ನೀಡಬೇಕು

ಜೊತೆಗೆ ತನಿಖಾಧಿಕಾರಿಗಳಾಗಿದ್ದ ಪೊಲೀಸ್‌ ಅಧಿಕಾರಿಗಳನ್ನು,ವೈದ್ಯಾಧಿಕಾರಿ ಹಾಗೂ ಸೌಜನ್ಯಾಳ
ಮನೆಯವರು ಆರೋಪಿಸಿರುವ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಬೇಕು.

ಇದಲ್ಲದೆ ಧರ್ಮಸ್ಥಳದಲ್ಲಿ ಇದುವರೆಗೆ ನಡೆದಿರುವ ಸುಮಾರು 462 ಅಸಹಜ ಸಾವಿನ ಪ್ರಕರಣಗಳನ್ನೂ ಮರುತನಿಖೆ ನಡೆಸಬೇಕು. ಈ ನಿಟ್ಟಿನಲ್ಲಿ ತಮ್ಮ ಜನಪರ ಸರ್ಕಾರ ನಮ್ಮ ನ್ಯಾಯಬದ್ಧ ಬೇಡಿಕೆಗೆ ತಕ್ಷಣ ಸ್ಪಂದಿಸಬೇಕು.ಎಂದು ಪ್ರತಿಭಟನಾಕಾರರು ಆಗ್ರಹಿಸಿದರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಅಂಬೇಡ್ಕರ್ ಯುವಸೇನೆಯ ಸಂಸ್ಥಾಪಕರಾದ ಜಯನ್ ಮಲ್ಪೆ ವಹಿಸಿದ್ದರು.ಜಿಲ್ಲಾಧ್ಯಕ್ಷರಾದ ಹರೀಶ್ ಸಾಲ್ಯಾನ್, ಮೈಸೂರು ಒಡನಾಡಿ ಸಂಸ್ಥೆಯ ಉಚ್ಚನ್ಯಾಯಾಲಯದ ನ್ಯಾಯವಾದಿ ಶ್ರೀನಿವಾಸ್, ಶ್ರೀರಾಮ ದಿವಾನ್, ಫಣಿರಾಜ್,ಕಿಶನ್ ಹೆಗ್ಡೆ ಕೊಳ್ಕೆಬೈಲ್ , ಶೇಖರ್ ಲೈಲಾ, ಗುಣವಂತ ಪಾಲನ್ ,ದಯಾನಂದ್ ಕಪ್ಪೆಟ್ಟು, ಲೋಕೇಶ್ ಪಡುಬಿದ್ರಿ, ಭಗವಾನ್ ಮಲ್ಪೆ, ಕೃಷ್ಣ ಶ್ರೀ ಯಾನ್,ಸಂತೋಷ್ ಕಪ್ಪೆಟ್ಟು, ಕೃಷ್ಣ ಬಂಗೇರ ಪಡುಬಿದ್ರಿ, ರಾಜೇಶ್ ಕೆಮ್ಮಣ್ಣು, ದಿನೇಶ್ ಮೂಡಬೆಟ್ಟು,ಗಣೇಶ್ ನೆರ್ಗಿ,ರಮೇಶ್ ಪಾಲ್ ಮಲ್ಪೆ, ಸುಧಾಕರ್ ಕಾಂಚನ್, ಅರುಣ್ ಸಾಲಿಯನ್, ದೀಪಕ್,ಜಿ ಪ್ರಶಾಂತ್,ಬಿ ಎಂ ಹರೀಶ್ ಅಮಿನ್, ಸುಶೀಲ್.ಜಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಸುಜಾಯ್ ಪೂಜಾರಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

swabhimananews@gmail.com

Related posts

ಬೋಧಿಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ ಇದರ ವತಿಯಿಂದ ಭಗವಾನ್ ಬುದ್ಧರ 2568 ನೇ ಜಯಂತಿ ಆಚರಣೆ.

Swabhimana News Desk

ಬೈಂದೂರು ರಾಜಾರೋಷವಾಗಿ ಪ್ರಭಾವಿ ವ್ಯಕ್ತಿಗಳು ಎಲ್ಲೆಂದರಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ.ಕಣ್ಣು, ಬಾಯಿ, ಕಿವಿ ಇದ್ದೂ ಕುರುಡರು,ಮೂಗರು,ಕಿವುಡರಾದ ಉಡುಪಿ ಜಿಲ್ಲೆಯ ಅಧಿಕಾರಿಗಳು.

Swabhimana News Desk

ಕಾರ್ಕಳ ಕಟ್ಟಡ ಕಲ್ಲು ಕ್ವಾರಿಯಲ್ಲಿ ಸ್ಪೋಟ.ಕಾರ್ಮಿಕ ಸಾವು; ಗಣಿ ಮಾಲಿಕ ದಿನೇಶ್ ಶೆಟ್ಟಿ ಸೇರಿ
ಇಬ್ಬರ ವಿರುದ್ಧ ಪ್ರಕರಣ ದಾಖಲು.ಕಲ್ಲುಕ್ವಾರೆ, ಕ್ರಷರ್ ಮುಚ್ಚುವಂತೆ ಸಾರ್ವಜನಿಕರ ಒತ್ತಾಯ.

Swabhimana News Desk

Leave a Comment