swabhimananews.com- ಏಪ್ರಿಲ್ -11-2024
ಕುಂದಾಪುರ ಇಲ್ಲಿನ ಬೊಬ್ಬರ್ಯನಕಟ್ಟೆ ಎದುರಿನ ಪ್ಲೈಓವರ್ ಮೇಲೆ ವೇಗವಾಗಿ ಸಂಚರಿಸುತ್ತಿದ್ದ ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಆರು ಅಡಿ ಕೆಳಗಿನ ಸರ್ವಿಸ್ ರಸ್ತೆ ಉರುಳಿ ಬಿದ್ದು, ಪತಿ- ಪತ್ನಿ ಮೃತಪಟ್ಟಿದ್ದು 1. ಪುತ್ರ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಅಪರಾಹ್ನ 1.15ರ ಸುಮಾರಿಗೆ ಸಂಭವಿಸಿದೆ.
ಕಾರು ಚಲಾಯಿಸುತ್ತಿದ್ದ ಕೇರಳದ ಕಣ್ಣೂರು ಮೂಲದ ಮುನ್ನವರ್ (49) ಅವರ ಪತ್ನಿ ಸಮೀರಾ (41) ಮೃತಪಟ್ಟವರು. ಕಾರಿನಲ್ಲಿದ್ದ ಪುತ್ರ ಸುಹೈಲ್ (18) ತೀವ್ರ ಗಾಯ ಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಫ್ಲೈಓವರ್ ಕೆಳಗಿ ಉರುಳಿ ಬಿದ್ದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ,
ವಿವರ
ಮಂಗಳವಾರ ಅಪರಾಹ್ನ 1.15 ರ ಸುಮಾರಿಗೆ ಮುನ್ನವರ್ ಅವರ ಹುಟ್ಟೂರುಕೊಲ್ಲಾಪುರದಿಂದಸಮೀರಾ ಅವರ ತವರಾದ ಕಣ್ಣೂರಿಗೆ ಇವರು ತೆರಳುತ್ತಿದ್ದರು. ಕುಂದಾಪುರದ
ಸರ್ವಿಸ್ ರಸ್ತೆಗೆ ಮಗುಚಿ ಬಿದ್ದಿದೆ.
ಕಾರಿನಲ್ಲಿದ್ದ ಸಮೀರಾ ಕುಂದಾಪುರದ ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟರೆ ಪತಿ ಮುನ್ನವರ್ ಬುಧವಾರ ಮಣಿಪಾಲ ಆಸ್ಪತ್ರೆಯಲ್ಲಿ ಅಸುನೀಗಿದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ ವೃತ್ತ ನಿರೀಕ್ಷಕ ನಂದ ಕುಮಾರ್, ಸಂಚಾರ ಠಾಣಾ ಎಸ್ ಐಗಳಾದ ನವೀನ್ ನಾಯ್ಡ್ ಸಾವಿತ್ರಿ ನಾಯಕ್ ಹಾಗೂ ಸಿಬಂದಿ ಭೇಟಿ ನೀಡಿದರು. ಚಾಲಕನ ವೇಗದ, ಅಜಾಗರೂಕತೆಯ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎನ್ನುವುದಾಗಿ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Swabhimananews. Com