17.1 C
New York
15 October 2025
Coastal

ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಇದರ ನೂತನ ಉಡುಪಿ ಜಿಲ್ಲಾ ಸಂಚಾಲಕರಾಗಿ.ಸಂಜೀವ ಕುಕ್ಕೆಹಳ್ಳಿ ಆಯ್ಕೆ.

ಆಗಸ್ಟ್ -15-2023 swabhimananews@gmail.com

ಉಡುಪಿ ಜಿಲ್ಲೆಯ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಇದರ ಜಿಲ್ಲಾ ಸಮಿತಿಯ ಸಭೆಯು ದಸಂಸ ಭೀಮವಾದ ದ ರಾಜ್ಯ ಸಂಚಾಲಕರು ಹಾಗೂRPI Karnataka ಪಕ್ಷದ ರಾಜ್ಯಾಧ್ಯಕ್ಷರಾದ ಡಾ.ಆರ್ ಮೋಹನ್ ರಾಜ್,
ಆರ್ ಪಿ ಐ ಕ.ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸ್ವಪ್ನ ಮೋಹನ್, RPIK ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರಾದ ಸದಾಶಿವ ಶೆಟ್ಟಿ ಹೇರೂರು.ರವರ ಉಪಸ್ಥಿತಿಯಲ್ಲಿ ಕದಸಂಸ ಭೀಮವಾದ ದ ರಾಜ್ಯ ಸಂಘಟನಾ ಸಂಚಾಲಕರು ಹಾಗೂ ಆರ್ ಪಿ ಐ ಕ ಪಕ್ಷದ ರಾಜ್ಯ ಉಪಾಧ್ಯಕ್ಷರಾದ.

ಶೇಖರ್ ಹಾವಂಜೆ* ರವರ ಅಧ್ಯಕ್ಷತೆಯಲ್ಲಿ ದಿನಾಂಕ :-14/08/2023 ಸೋಮವಾರದಂದು ಬ್ರಹ್ಮಾವರ ತಾಲೂಕಿನ ಧರ್ಮಾವರ ಆಡಿಟೋರಿಯಂ ನಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ಭೀಮವಾದದ ಜಿಲ್ಲಾ ಸಮಿತಿಯ ಸಭೆಯಲ್ಲಿ ಅನೇಕ ವಿಚಾರದ ಬಗ್ಗೆ ಗಂಭೀರವಾಗಿ ಚರ್ಚಿಸಿ. ಉಡುಪಿ ಜಿಲ್ಲೆ ಹಾಗೂ ರಾಜ್ಯಾದ್ಯಂತ ಮುಂದಿನ ಸಾಮಾಜಿಕ ಹೋರಾಟದ ಕುರಿತು ಸುದೀರ್ಘವಾಗಿ ಚರ್ಚಿಸಿ. ಸಂಘಟನೆಯ ಮತ್ತು ಪಕ್ಷ ಸಂಘಟನೆಯ ಕಾರ್ಯ ಇನ್ನಷ್ಟು ವೇಗ ಹೆಚ್ಚಿಸಿ. ಉಡುಪಿ ಜಿಲ್ಲೆಯ 7 ತಾಲೂಕಿನಲ್ಲಿ ಸಕ್ರೀಯವಾಗಿ ಕಾರ್ಯಚರಿಸುವಂತೆ ರಾಜ್ಯ ಸಂಚಾಲಕರಾದ ಡಾ. ಆರ್ ಮೋಹನ್ ರಾಜ್ ತಿಳಿಸಿದರು.

ಹಾಗೂ ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ನೂತನ ಉಡುಪಿ ಜಿಲ್ಲಾ ಸಂಚಾಲಕರನ್ನಾಗಿ ಸಂಜೀವ ಕುಕ್ಕೆಹಳ್ಳಿರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಉಳಿದಂತೆ ಹಿಂದಿನ ಎಲ್ಲಾ ಪದಾಧಿಕಾರಿಗಳು ಅದೇ ಹುದ್ದೆಯಲ್ಲಿ ಮುಂದುವರಿಯಲು ರಾಜ್ಯ ಸಂಚಾಲಕರು ಸಲಹೆ ನೀಡಿದರು.ಹಾಗೂ ಹಿಂದಿನ ಜಿಲ್ಲಾ ಸಂಚಾಲಕರಾದ ಗೋಪಾಲ್ ಶಿವಪುರರವರು ಸಂಜೀವ ಕುಕ್ಕೆಹಳ್ಳಿ ರವರು ಈ ಹಿಂದೆ ನಿರ್ವಾಹಿಸುತಿದ್ದ ಜಿಲ್ಲಾ ಸಂಘಟನಾ ಸಂಚಾಲಕರ ಹುದ್ದೆಯಲ್ಲಿ ಮುಂದುವರಿಯುವುದೆಂದು. ತೀರ್ಮಾನಿಸಲಾಯಿತು.

ಜಿಲ್ಲಾ ಸಮಿತಿಯ ಸಂಘಟನಾ ಸಂಚಾಲಕರಾದ ರಮೇಶ್ ಮಾಬಿಯಾನ್, ಗೋಪಾಲ್ ಶಿವಪುರ,ಮುದ್ದು ಅಜೆಕಾರು, ಸುನಿತಾ,ಜಿಲ್ಲಾ ಖಜಾಂಚಿ ಪ್ರಥ್ವಿ ಒಳಗುಡ್ಡೆ, ಸಮಿತಿ ಸದಸ್ಯರಾದ ಸುಜಾತ ಹಾವಂಜೆ,ನಾಥು, ಮಂಜು ಇನ್ನಿತರರು ಉಪಸ್ಥಿತರಿದ್ದರು.
swabhimananews@gmail.com

Related posts

ಧರ್ಮಸ್ಥಳ ಗ್ರಾಮದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ-ಕೊಲೆ; ಕೃತ್ಯಗಳ ಬಗ್ಗೆ ಮಾಹಿತಿ ನೀಡುತ್ತೇನೆಂದಿದ್ದ ವ್ಯಕ್ತಿಯಿಂದ ದೂರು ಸಲ್ಲಿಕೆ!

Swabhimana News Desk

ಹೆಣದಿಂದ ಹಣ.
ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷ ಹಾಲಿ ಪಂಚಾಯತ್ ಅಧ್ಯಕ್ಷೆ ಸೇರಿ ನಾಲ್ವರ ವಿರುದ್ದ ಲೋಕಾಯುಕ್ತಕ್ಕೆ ದೂರು.

Swabhimana News Desk

ಅಕ್ರಮ ಮರಳು ಅಡ್ಡೆಗೆ ಮಂಗಳೂರು ಗಣಿ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಎಂಬ ದಿಟ್ಟ ಮಹಿಳಾ ಅಧಿಕಾರಿಯ ಮಿಂಚಿನ ದಾಳಿ; 20 ಇಂಜಿನ್ ಮತ್ತು ಗ್ಯಾಸ್ ಸಿಲಿಂಡರ್ ಸಹಿತ ಬೋಟ್‌ಗಳ ವಶ.

Swabhimana News Desk

Leave a Comment