13.2 C
New York
14 October 2025
Karnataka

ದಲಿತರಿಗೆ ವಂಚನೆ ಮಾಡಿದ ಕಾಂಗ್ರೆಸ್ ಸರಕಾರ.ನೈತಿಕ ಹೊಣೆ ಹೊತ್ತು. ಸಮಾಜಕಲ್ಯಾಣ ಸಚೀವ ಡಾ.ಹೆಚ್ ಸಿ ಮಹದೇವಪ್ಪ ರಾಜಿನಾಮೆಗೆ RPIK ಮತ್ತು ಕದಸಂಸ ಭೀಮವಾದ ಆಗ್ರಹ.

ಜುಲೈ -23 -2024 swabhimananewsUdupi:ಪ್ರತಿಭಾವಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮೋಸ ಮಾಡುತ್ತಿದ್ದು ಇದರ ನೇರ ಹೊಣೆ ಹೊತ್ತು ಸಮಾಜ ಕಲ್ಯಾಣ ಸಚಿವರು ರಾಜೀನಾಮೆ ನೀಡ ಬೇಕೆಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷ ಮತ್ತು ಕದಸಂಸ ಭೀಮವಾದ ಒತ್ತಾಯ.ರಾಜ್ಯ ಸರ್ಕಾರ ಶೋಷಿತ ಸಮುದಾಯಗಳ ಆಶಯವನ್ನು ಈಡೇರಿಸುವ ಜೊತೆಗೆ, ಮೊದಲಿಗೆ ಶಿಕ್ಷಣಕ್ಕೆ ಪ್ರಾತಿನಿಧ್ಯವನ್ನು ನೀಡಬೇಕಾಗಿತ್ತು. ಶಿಕ್ಷಣದಿಂದ ತಮ್ಮ ಬದುಕನ್ನು ಹಸನಾಗಿ ಮಾಡಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಇದರಿಂದ ಸಾಧ್ಯವಾಗುತ್ತಿತ್ತು.ಈ ಕಾರಣಕ್ಕಾಗಿಯೇ ಡಾ॥ ಬಾಬಾ ಸಾಹೇಬ್ ಅಂಬೇಡ್ಕ‌ರ್ ರವರು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಿದ್ದು, ಆದರೆ ದುರಂತ ಎಂದರೆ ಆಳುವ ವರ್ಗಗಳು. ಅದರಲ್ಲೂ ಇದೇ ಸಮುದಾಯದಿಂದ ಬಂದಂತಹ ಜನ ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಮರೆತು, ತಮ್ಮ ಸ್ವಹಿತಾಶಕ್ತಿಗಾಗಿ ತಮ್ಮನ್ನು ತಾವುಗಳು ತೊಡಗಿಸಿ ಕೊಂಡಿರುವುದು ಖಂಡನೀಯವಾದದ್ದು. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿರುವ ಡಾ. ಹೆಚ್.ಸಿ. ಮಹದೇವಪ್ಪ ಎಸ್.ಸಿ./ ಎಸ್.ಟಿ ಸಮುದಾಯದ ವಿದ್ಯಾರ್ಥಿಗಳ ಹಿತವನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.ಎಸ್.ಸಿ./ ಎಸ್.ಟಿ. ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರ ಅಲ್ಪಪ್ರಮಾಣದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ.
ಪ್ರೋತ್ಸಾಹಧನವನ್ನು ನೀಡುತ್ತಾ ಬಂದಿದ್ದು ಇದನ್ನು ಇನ್ನು ಹೆಚ್ಚು ಮಾಡಬೇಕಾಗಿತ್ತು. ಇದನ್ನು ಹೊರತುಪಡಿಸಿ ಇದಕ್ಕೆ ಯಾವುದೇ ಕಾರಣವನ್ನು ನೀಡದೇ ಪ್ರೋತ್ಸಾಹ ಧನವನ್ನು ತಡೆಹಿಡಿದಿರುವುದು
ಖಂಡನೀಯ ಹಾಗೂ ಇದಕ್ಕೆ ಹಾಕಿರುವ ಮಾನದಂಡ ಅವೈಜ್ಞಾನಿಕವಾದುದ್ದು ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದ್ದು, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಈ ಸರ್ಕಾರ ಎಸ್.ಸಿ./ ಎಸ್.ಟಿ ವಿದ್ಯಾರ್ಥಿಗಳಿಗೆ ಮೋಸ ಮಾಡುತ್ತಿದೆ. ಎಸ್.ಸಿ./ ಎಸ್.ಟಿ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ/ ಪಿಯುಸಿ ಯಲ್ಲಿ 75% ಅಂಕ ಪಡೆದಿರಬೇಕು ಹಾಗೂ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ಮೀರಬಾರದು ಎಂದು, ತಾಕಿತ್ತು ಮಾಡಿದೆ.ಇದು ಯಾವ ನ್ಯಾಯ ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದ್ದು. ಆದ್ದರಿಂದ ಹೊಸ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು.ಹಾಗೂ ಪಿ.ಹೆಚ್‌ಡಿ ಹಾಗೂ ಉನ್ನತ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳ ಸಹಾಯಧನಕ್ಕೂ ಕತ್ತರಿ ಹಾಕಿದೆ. ಈ ಯೋಜನೆಯನ್ನು ಸರ್ಕಾರ ಮತ್ತೆ ಮುಂದುವರಿಸಬೇಕು.ಈ ಸರ್ಕಾರ ಬಡವರ ಎಸ್.ಸಿ/ಎಸ್.ಟಿ. ಗಳ ವಿರೋಧಿ ಸರ್ಕಾರ ಮತ್ತೊಂದು ಕಡೇ ಎಸ್‌ಸಿಎಸ್ಪಿ/ ಟಿಎಸ್‌ಪಿ ಹಣವನ್ನು ವರ್ಗಾವಣೆ ಮಾಡಿಕೊಂಡಿರುವುದು ಅಪರಾಧ,ಅನ್ಯಾಯ ,ಹಾಗೂ ಮೋಸ, ಇವರಿಗೇ ಧೈರ್ಯವಿದ್ದರೇ ಎಸ್.ಸಿ/ ಎಸ್.ಟಿ. ಸಮುದಾಯದ ಹಣವನ್ನು ಹೊರತುಪಡಿಸಿ ಇತರೇ ಸಮುದಾಯಗಳ ಹಣವನ್ನು ಮುಟ್ಟಲಿಕ್ಕೆ ತಾಕತ್ತು ಇಲ್ಲವ. ಕೂಡಲೇ ಎಸ್‌ಸಿಎಸ್‌ ಪಿ / ಟಿಎಸ್‌ಪಿ ಹಣವನ್ನು ಹಿಂತಿರುಗಿಸಬೇಕು.
ಇದನ್ನು ವಿರೋಧಿಸಿ ರಾಜ್ಯಾದ್ಯಾಂತ ಬೀದಿ ಹೋರಾಟವನ್ನು ರೂಪಿಸಲು ತೀರ್ಮಾನಿಸಿದ್ದೇವೆ
ದಿನಾಂಕ: 25/07/2024 ರಂದು ನಡೆಯುವ ರಾಜ್ಯ ಸಮಿತಿ ಸಭೆಯಲ್ಲಿ ನಿರ್ಣಯವನ್ನು ತೆಗೆದುಕೊಳ್ಳುತ್ತೇವೆ. ಇದೇ ಸಂದರ್ಭದಲ್ಲಿ ಈ ರಾಜ್ಯದ ಸಮಾಜ ಕಲ್ಯಾಣ ಸಚಿವರು ಈ ಎಲ್ಲಾ ಕಾರಣಗಳಿಂದ ಕೂಡಲೇ ನೈತಿಕ ಹೊಣೆ ಹೊತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಮತ್ತು ಕದಸಂಸ ಭೀಮವಾದ (ರಿ)ಕರ್ನಾಟಕ ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ಕದಸಂಸ ಭೀಮವಾದದ ರಾಜ್ಯ ಸಂಘಟನಾ ಸಂಚಾಲಕರು ಶೇಖರ್ ಹಾವಂಜೆ.ದಿನಾಂಕ -ಜುಲೈ- 23 -2024 ರಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.ಸಂದರ್ಭದಲ್ಲಿ RPIK ಪಕ್ಷದ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಸದಾಶಿವ ಶೆಟ್ಟಿ ಹೇರೂರು, ಕದಸಂಸ ಭೀಮವಾದದ ಉಡುಪಿ ಜಿಲ್ಲಾ ಸಂಚಾಲಕರಾದ ಸಂಜೀವ ನಾಯ್ಕ್, ಕುಕ್ಕೆಹಳ್ಳಿಜಿಲ್ಲಾ ಖಜಾಂಚಿ ಪೃಥ್ವಿ ಒಳಗುಡ್ಡೆ, ಜಿಲ್ಲಾ ಸಮಿತಿ ಸದಸ್ಯೆ ಸುಜಾತ ಎಸ್ ಹಾವಂಜೆ ಉಪಸ್ಥಿತರಿದ್ದರು.SWABHIMANANEWS.

Related posts

IT. ದಾಳಿ 4.8 ಕೋಟಿ ರೂಪಾಯಿ ಬಿಜೆಪಿ ಅಭ್ಯರ್ಥಿ ಸುಧಾಕರ್ ವಿರುದ್ಧ ಪ್ರಕರಣ ದಾಖಲು.

Swabhimana News Desk

ಕಾಂಗ್ರೆಸ್ ಸರಕಾರ ದಲಿತರ ನಿಧಿಯನ್ನು ದುರ್ಬಳಕೆ ಮಾಡಿರುವುದನ್ನು ಉನ್ನತ ಮಟ್ಟದ ತನಿಖೆ ನಡೆಸುವಂತೆ. ಆಗ್ರಹಿಸಿ ಕ ದ ಸಂ ಸ ಭೀಮವಾದ ಮತ್ತು RPIK ವತಿಯಿಂದ ರಾಜ್ಯಪಾಲಾರಿಗೆ ದೂರು.

Swabhimana News Desk

ಜೋರಾದ ವರುಣಾರ್ಭಟ:ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ.!

Swabhimana News Desk

Leave a Comment