17.3 C
New York
8 September 2024
Karnataka

ಸೌಜನ್ಯ ಕೇಸ್: ‘ಅಭಿಮಾನಿಗಳನ್ನು ನಾನೇ ತಡೆದಿರುವೆ, ಏನನ್ನಾದರೂ ಮಾಡಲು ಸಿದ್ದ’: ಹೋರಾಟಗಾರರಿಗೆ ಹೆಗ್ಗಡೆ ಪರೋಕ್ಷ ಬೆದರಿಕೆ?

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸೋದರನ ಮಗ ನಿಶ್ಚಲ್ ಜೈನ್ ಮತ್ತು ಆತನ ಸ್ನೇಹಿತರ ಮೇಲೆ ಸೌಜನ್ಯ ಕುಟುಂಬ ಮೊದಲಿನಿಂದಲೂ ಶಂಕೆ ವ್ಯಕ್ತಪಡಿಸಿದ್ದು, ಈದೀಗ ಅವರನ್ನು ವಿಚಾರಣೆಗೆ ಒಳಪಡಿಸಲೇಬೇಕು ಎಂದು ಅನೇಕ ಪ್ರಗತಿಪರ ಸಂಘಟನೆಗಳು ಒತ್ತಾಯಿಸುತ್ತಿವೆ. ಮತ್ತೊಂದೆಡೆ ವೀರೇಂದ್ರ ಹೆಗ್ಗಡೆ ಬೆದರಿಕೆಯ ದಾಟಿಯಲ್ಲಿ ಮಾತನಾಡಿದ್ದಾರೆ.

ಈ ಪ್ರಕರಣದಲ್ಲಿ ಸಂತೋಷ್ ರಾವ್ ನಿರ್ದೋಷಿ ಎಂದು ಸಿಬಿಐ ಕೋರ್ಟ್‌ ತೀರ್ಪು ನೀಡಿದ ಬಳಿಕ ಸೌಜನ್ಯ ಕುಟುಂಬ ಶಂಕೆ ವ್ಯಕ್ತಪಡಿಸಿದವರನ್ನು ವಿಚಾರಣೆ ಮಾಡಬೇಕು ಎಂದು ಅನೇಕ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇದೀಗ ಮೈಸೂರಿನ ಒಡನಾಡಿ ಸಂಸ್ಥೆ ಹೋರಾಟದ ನೇತೃತ್ವ ವಹಿಸಿಕೊಂಡಿದೆ.

ಈ ವರೆಗೂ ಮೌನವಾಗಿದ್ದ ವೀರೇಂದ್ರ ಹೆಗ್ಗಡೆ, ಇದೀಗ ಮೌನ ಮುರಿದಿದ್ದಾರೆ. ”ನಮ್ಮ ಅಭಿಮಾನಿಗಳು ಏನನ್ನಾದರೂ ಮಾಡಲು ಸಿದ್ದರಿದ್ದಾರೆ. ಅದನ್ನು ಬೇಡವೆಂದು ಹೇಳಿದ್ದೇವೆ” ಎಂದು ಬೆದರಿಕೆಯೊಡ್ಡುವ ಮಾತುಗಳನ್ನಾಡಿದ್ದಾರೆ.

”ಧರ್ಮಸ್ಥಳ ಕ್ಷೇತ್ರದ ಸಾಧನೆ ಕಂಡು ದ್ವೇಷ ಮಾಡುತ್ತಿರುವ ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಸೌಜನ್ಯ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ನಮಗೆ ಯಾವುದೇ ಭಯವಿಲ್ಲ. ಸಿಬಿಐ ಸಹಿತ ಯಾವುದೇ ತನಿಖೆ ಮಾಡಿದರೂ ಸ್ವಾಗತಿಸುತ್ತೇವೆ” ಎಂದು ಹೇಳಿದ್ದಾರೆ.

”ಕೆಲವರು ನಮ್ಮ ಮೌನವನ್ನೇ ದೌರ್ಬಲ್ಯವೆಂದು ಭಾವಿಸಿದ್ದಾರೆ. ಏನೇನೋ ಮಾತನಾಡುತ್ತಿದ್ಧಾರೆ. ನಾವು ಸುಮ್ಮನಿದ್ದೇವೆ ಎಂದರೆ ತಪ್ಪು ಮಾಡಿದ್ದೇವೆ ಎಂದರ್ಥವಲ್ಲ. ಚರ್ಚೆಗೆ ಅವಕಾಶ ಮಾಡಿಕೊಟ್ಟು ಅನಾಹುತಕ್ಕೆ ದಾರಿ ಮಾಡಿಕೊಡಬಾರದು ಎಂಬುದು ನಮ್ಮ ಉದ್ದೇಶ” ಎಂದಿದ್ದಾರೆ.

”ಈಗ ಕೆಲವರು ಮಾತನಾಡುವ ವಿಷಯಗಳು ನಮಗೆ ಸಂಬಂಧವೇ ಇಲ್ಲ. ಈ ವಿಚಾರದಲ್ಲಿ ತನಿಖೆ ಮಾಡಲು ಸರ್ಕಾರಕ್ಕೆ ಮೊದಲು ಪತ್ರ ಬರೆದಿದ್ದೇ ನಾನು. ಅವರು ಮತ್ತಷ್ಟು ತನಿಖೆ, ಸಂಶೋಧನೆ ಮಾಡಲಿ” ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

11ವರ್ಷಗಳ ಹಿಂದೆ ಅಂದರೆ 2012ರ ಅಕ್ಟೋಬರ್ 9ರಂದು ಧರ್ಮಸ್ಥಳದಲ್ಲಿ 17 ವರ್ಷದ ಬಾಲಕಿ ಸೌಜನ್ಯಳನನ್ನು ಅಪಹರಿಸಿ, ಅತ್ಯಾಚಾರಗೈದು, ಕೊಲೆ ಮಾಡಲಾಗಿತ್ತು. ಇದು ರಾಜ್ಯಾದ್ಯಾಂತ ಭಾರೀ ಸದ್ದು ಮಾಡಿತ್ತು.

ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದಾಗ ಅಮಾಯಕ ಸಂತೋಷ್‌ ರಾವ್‌ನನ್ನು ಬಂಧಿಸಿದ್ದರು. ಆಬಳಿಕ ಅವನಿಗೆ ತಾನೇ ಕೃತ್ಯ ಎಸಗಿದ್ದೇನೆಂದು ಒಪ್ಪಿಕೊಳ್ಳುವಂತೆ ದೌರ್ಜನ್ಯ ಮಾಡಲಾಗಿತ್ತು. 2013ರಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಂತೋಷ್‌ ರಾವ್ ಸುತ್ತಲೇ ತನಿಖೆ ನಡೆಸಿದ ಸಿಬಿಐ, ಆತ ಕೃತ್ಯ ಎಸಗಿದ್ದಾನೆ ಎಂಬುದನ್ನು ಸಾಬೀತು ಮಾಡುವಲ್ಲಿ ವಿಫಲವಾಯಿತು.

ಇತ್ತೀಚೆಗೆ ಸಿಬಿಐ ಕೋರ್ಟ್‌ ಆಮಾಯಕ ಸಂತೋಷ್‌ನನ್ನು ನಿರ್ದೋಷಿ ಎಂದು ತೀರ್ಪು ನೀಡಿತು. ಇದೀಗ, ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ರಾಜ್ಯದ ಕೆಲವಡೆ ಪ್ರತಿಭಟನೆಗಳು ನಡೆಯುತ್ತಿವೆ.


ಜುಲೈ-20-2023 swabhimananews@gmail.com

Related posts

ಎಸ್‍ಸಿ-ಎಸ್‍ಟಿ ಮೀಸಲು ಹಣ ಬಳಕೆಗೆ ಪಂಚತಂತ್ರ-2 ಜಾರಿ: ಸಚಿವ ಪ್ರಿಯಾಂಕ್ ಖರ್ಗೆ

Swabhimana News Desk

ಚೀನಾದ ಹ್ಯಾಂಡ್ಲರ್‌ಗಳು ಭಾಗಿಯಾಗಿರುವ ಬೃಹತ್‌ ವಂಚನೆ ಜಾಲವನ್ನು ಭೇದಿಸಿದ ಹೈದರಾಬಾದ್‌ ಪೊಲೀಸರು.

Swabhimana News Desk

ಬಿಜೆಪಿಯಿಂದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಉಚ್ಚಾಟನೆ

Swabhimana News Desk

Leave a Comment