15.8 C
New York
26 September 2026
Coastal

ಉಡುಪಿ ಜಿಲ್ಲಾ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಹೋರಾಟ ವೇದಿಕೆ (ರಿ.) ಉಡುಪಿ ಜಿಲ್ಲೆ Reg. DRUD/SOR/88/2021-22 ಇದರ ಸರ್ವಸದಸ್ಯರ ಮಹಾಸಭೆ.

ಉಡುಪಿ: ಸೆಪ್ಟೆಂಬರ್ 26-2026 swabhimaananews

2026-27 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯು ವೇದಿಕೆಯ ಜಿಲ್ಲಾಧ್ಯಕ್ಷರಾದ ಬಿ. ಸದಾಶಿವ ಶೆಟ್ಟಿ ಹೇರೂರು ಇವರ ಅಧ್ಯಕ್ಷತೆಯಲ್ಲಿ ಆಶ್ರಯ ಹೋಟೆಲ್ ಸಭಾಭವನದಲ್ಲಿ ದಿನಾಂಕ 26/09/2026ರ ಶನಿವಾರ ನಡೆಯಿತು. ಈ ಸಭೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷರಾಗಿ ಶೇಖರ್ ಹಾವಂಜೆ,ರವರನ್ನು ನೇಮಿಸಲಾಯಿತು.

ಜಿಲ್ಲಾ ಅಧ್ಯಕ್ಷರಾಗಿ ಸದಾಶಿವ ಶೆಟ್ಟಿ ಹೇರೂರು, ಕಾರ್ಯದರ್ಶಿಯಾಗಿ ವಿಜಯ್ ಪೂಜಾರಿ ಬಾರ್ಕುರ್,ಸಲಹೆಗಾರರಾಗಿ ಉದಯ ದೇವಾಡಿಗ, ಖಜಾಂಜಿಯಾಗಿ ರಾಘವೇಂದ್ರ ಐರೋಡಿ, ಜೊತೆ ಕಾರ್ಯದರ್ಶಿಯಾಗಿ ಜಯಕರ ನಾಯ್ಕ್ ಕರ್ಜೆ,

ಉಪಾಧ್ಯಕ್ಷರಾಗಿ ಸದಾಶಿವ ಕುಂದಾಪುರ, ಜಿಲ್ಲಾ ಕೋಶಾಧಿಕಾರಿಯಾಗಿ ಅಕ್ಟರ್ ಭಾಷಾ ಇವರೆಲ್ಲರೂ ಪುನರ್ ಆಯ್ಕೆಗೊಂಡಿರುತ್ತಾರೆ.

ಜೊತೆಯಲ್ಲಿ ಹೊಸದಾಗಿ 4 ಜನ ಪದಾಧಿಕಾರಿಗಳನ್ನು ಸೇರ್ಪಡೆಗೊಳಿಸಲಾಯಿತು. ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸುಖಾನಂದ ಕುಕ್ಕುಡೆ, ಉಪಾದ್ಯಕ್ಷರಾಗಿ ಮಹೇಶ್ ಉಡುಪ ಕುಂದಾಪುರ,

ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಭಾಕರ ಮೇಸ್ತ, ಜಿಲ್ಲಾ ಉಪಾಧ್ಯಕ್ಷರಾಗಿ ಅನಿಲ್ ಫೆರ್ನಾಂಡಿಸ್ ಬಾರ್ಕೂರು, ಒಟ್ಟು 12 ಜನರ ಆಡಳಿತ ಮಂಡಳಿಯನ್ನು ರಚನೆ ಮಾಡಲಾಯಿತು.ಮುಂದೆ ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ, ಅನಾಚಾರ, ಭ್ರಷ್ಟಾಚಾರ, ಸರಕಾರಿ ಭೂ ಒತ್ತುವರಿ ಅಕ್ರಮ ಕಟ್ಟಡಗಳು,

ಹಾಗೂ ಅನೇಕ ಪ್ರಕೃತಿ ವಿರೋಧಿ ಚಟುವಟಿಕೆಗಳ ವಿರುದ್ಧ ಗಂಭೀರವಾಗಿ ಹೋರಾಟಗಳನ್ನು ಮಾಡುವಂತೆ ನೂತನವಾಗಿ ಆಯ್ಕೆಯಾದ ವೇದಿಕೆಯ ಗೌರವಾದ್ಯಕ್ಷರಾದ ಶೇಖರ್ ಹಾವಂಜೆ ಸರ್ವರಿಗೂ ಹುರಿದುಂಬಿಸಿದರು.


ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Related posts

ಡಾ| ಬಾಬಸಾಹೇಬ್ ಅಂಬೇಡ್ಕರ್ ರವರ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ವಿಚಾರ ವಿನಿಮಯ ಚರ್ಚೆ ಮತ್ತು ಸಂವಿಧಾನ ಜಾಗೃತಿ ಕಾರ್ಯಕ್ರಮ.

Swabhimana News Desk

ಸೌಜನ್ಯಾಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಮರುತನಿಖೆಗೆ
ಒತ್ತಾಯಿಸಿ ಉಡುಪಿಯಲ್ಲಿ ಅಂಬೇಡ್ಕರ್ ಯುವಸೇನೆ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿಭಟನೆ,

Swabhimana News Desk

ಸುರತ್ಕಲ್: ಗಾಳಿ-ಮಳೆಗೆ ಕುಸಿದು ಬಿದ್ದ ಟೋಲ್ ಗೇಟ್ ಕ್ಯಾಬಿನ್ – ಅಪಾಯದಿಂದ ಪಾರಾದ ಸ್ಕೂಟರ್ ಸವಾರ!

Swabhimana News Desk

Leave a Comment