ಉಡುಪಿ: ಸೆಪ್ಟೆಂಬರ್ -28-2026 swabhimaananews
ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಕೆ ರೆಸಾರ್ಟ್ ಮಾಲೀಕರ ಕೈಗೊಂಬೆಯಾಗಿದೆ ಎಂದು ಸಾರ್ವಜನಿಕರ ಅರೋಪ ಇದೀಗ ದೃಡ ಪಟ್ಟಿದೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರಾವಳಿಯನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ದಿ ಪಥದಲ್ಲಿ ಬೆಳಸಬೇಕು ಎನ್ನುವ ಮಹಾ ಕನಸಿಗೆ ಉಡುಪಿ ಜಿಲ್ಲೆಯ ಅಧಿಕಾರಿಗಳು ಕೊಳ್ಳಿ ಇಡುತ್ತಿರುವುದು ಇಂತಹ ಬೆಳವಣಿಗೆಗಳಿಂದ ಕಂಡು ಬರುತ್ತಿದೆ.
ಪ್ರವಾಸೋದ್ಯಮ ದಿನವನ್ನು ಜಿಲ್ಲಾಡಳಿತ ಅದ್ದೂರಿಯಾಗಿ ನಾಡಿನ ಜನರ ಜೊತೆ ಅಚರಿಸುವ ಬದಲು
ಬಿಸ್ಕಿಟ್ ಬೀಸಾಡುವ ರೆಸಾರ್ಟ್ ಮಾಲೀಕರ ಮಧ್ಯೆ ಅಚರಿಸಿರುವುದು ನಿಜಕ್ಕೂ ಜಿಲ್ಲೆಯ ಜನತೆ ತಲೆತಗ್ಗಿಸುವಂತೆ ಮಾಡಿದೆ.
ಸ್ವಯಂ ಘೊಷಿತ ಲೋಟಸ್ ಮ್ಯಾನ್ ಗಳು ಸೇರಿದಂತೆ ಕೆಲವೊಂದು ರೆಸಾರ್ಟ್ ಮಾಲೀಕರು ಬೆರಳೆಣಿಕೆಯ ವ್ಲಾಗರ್ ಗಳ ಜೊತೆ ಉಂಡು ತಿಂದು ಸರಕಾರದ ಹಣ ವ್ಯರ್ಥ ಮಾಡಲಾಗಿದೆ ಎನ್ನುವ ಅರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.
ಜಿಲ್ಲಾ ಕೇಂದ್ರದಲ್ಲಿ ಅಥವಾ ತಾಲೂಕು ಕೇಂದ್ರದಲ್ಲಿ ಮಾಡಬೇಕಾದ ಕಾರ್ಯಕ್ರಮವನ್ನು ರೆಸಾರ್ಟ್ ಮಾಲೀಕರು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿರುವುದು ಮತ್ತು ಪ್ರವಾಸೋದ್ಯಮಕ್ಕೆ ಬೇರೆ ಯಾರು ಪ್ರವೇಶ ಮಾಡಬಾರದು ಎನ್ನುವ ದುರುದ್ದೇಶ ಹೊಂದಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.
ಬರೀ ರೆಸಾರ್ಟ್ ಗಳಿಂದ ಮಾತ್ರ ಪ್ರವಾಸೋದ್ಯಮ ಎನ್ನುವ ಉದ್ಯಮಿ ಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳಿಗೆ ,ನಾಡಿನ ಸಂಸ್ಕೃತಿ , ಜನಪದ ಅಚರಣೆ ಅಹಾರ ಪದ್ದತಿಗಳನ್ನು ಬೆಳಸಿ ಪೋಷಿಸುವುದು ಪ್ರವಾಸೋದ್ಯಮದ ಪ್ರಮುಖ ಭಾಗ ಎನ್ನುವುದು ಮರೆತು ಬಿಟ್ಟಿದ್ದಾರೆ.
ಕಳೆದ ಎರಡು ವರುಷಗಳಿಂದ ಪ್ರವಾಸೋದ್ಯಮ ಇಲಾಖೆ ಯಾವುದೇ ಮಹತ್ತರ ಪ್ರವಾಸೋದ್ಯಮ ಯೋಜನೆಗಳನ್ನು ಯಶಸ್ವಿ ಗೊಳಿಸಿರುವುದು ಗಮನಕ್ಕೆ ಬಂದಿಲ್ಲ.
ಸಣ್ಣ ಪುಟ್ಟ ಹೋಂ ಸ್ಟೇ ಗಳಿಗೆ ರೆಸಾರ್ಟ್ ಮಾಲೀಕರ ಅಣತಿಯಂತೆ ದಾಳಿ ಮಾಡುವುದು, ಅನುಮತಿ ನೀಡಲು ಸತಾಯಿಸುವುದು ,ಪ್ರವಾಸೋದ್ಯಮ ಇಲಾಖೆ ,ಬಂದರು ಇಲಾಖೆ ಭೂಮಿಗಳನ್ನು ಕಾಂಟ್ರಾಕ್ಟರ್ ಗಳಿಗೆ ಗುತ್ತಿಗೆ ನೀಡಿರುವುದು ಬಿಟ್ರೆ ,ಉಳಿದವು ಬರೀ ಸರಕಾರದ ಲೆಕ್ಕಪತ್ರಗಳಿಗೆ ಸೀಮಿತವಾಗಿದೆ.
ಸರಕಾರದ ಹೆಚ್ಚಿನ ಯೋಜನೆಗಳನ್ನು ರೆಸಾರ್ಟ್ ಮಾಫಿಯಾದ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳ ಧನ ದಾಹಕ್ಕೆ ಉಡುಪಿ ಪ್ರವಾಸೋದ್ಯಮ ರೆಸಾರ್ಟ್ ಬಕಾಸುರರ ಕೈಗೆ ಸಿಕ್ರೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕನಸಿಗೆ ಕೊಳ್ಳಿ ಇಟ್ಟಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅನುಭವಿ ಉತ್ಸಾಹಿ ಪ್ರಾಮಾಣಿಕ ಅಧಿಕಾರಿಗಳ ಅಗತ್ಯತೆ ಇದೆ ಈಗಿರುವ ನಿಷ್ಪ್ರಯೋಜಕ ಅಧಿಕಾರಿಗಳನ್ನು ವರ್ಗಾಯಿಸಬೇಕು ,ಉಡುಪಿ ಪ್ರವಾಸೋದ್ಯಮವನ್ನು ರೆಸಾರ್ಟ್ ಮಾಲೀಕರ ಕೈಯಿಂದ ರಕ್ಷಣೆ ಮಾಡುಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
Swabhimananews.
