ಉಡುಪಿ: ಅಕ್ಟೋಬರ್ 28 -2026 swabhimaananews
ಉಡುಪಿ ಜಿಲ್ಲೆ: ಮರಾಠಿ ಸಮಾಜದ ಸಂಘಟನೆಯ ಅಧ್ಯಕ್ಷರ ಕಾರ್ಯವೈಖರಿ, ನಾಯಕತ್ವ ಮತ್ತು ಸಮಾಜದ ಅಭಿವೃದ್ಧಿಗೆ ನೀಡಿರುವ ಕೊಡುಗೆಯ ಕುರಿತು ಜಯಕರ್ ನಾಯ್ಕ್ ಕರ್ಜೆ.ಪ್ರಶ್ನೆ ಮಾಡಿದ್ದಾರೆ ಸಂಘಟನೆಯ ಅಧ್ಯಕ್ಷ ಸ್ಥಾನ ಅಲಂಕರಿಸುವುದೇ ಸಮಾಜಸೇವೆಯಲ್ಲ; ಬದಲಾಗಿ ಸಮಾಜದ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವುದೇ ನಿಜವಾದ ಸಮಾಜಸೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮರಾಠಿ ಮಹಿಳೆಯರ ಅಭಿವೃದ್ಧಿ, ಯುವಜನರ ಭವಿಷ್ಯ, ಬಡ ಕುಟುಂಬಗಳ ಸಮಸ್ಯೆಗಳು ಹಾಗೂ ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಯಂತಹ ಹಲವು ಪ್ರಮುಖ ವಿಚಾರಗಳು ಇಂದಿಗೂ ಗಮನಹರಿಸಬೇಕಾದ ವಿಷಯಗಳಾಗಿವೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾಜದ ನಾಯಕರು ಯಾವ ರೀತಿಯ ಕಾರ್ಯಯೋಜನೆಗಳನ್ನು ರೂಪಿಸಿದ್ದಾರೆ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಸಮಾಜದ ಹೆಸರಿನಲ್ಲಿ ಹುದ್ದೆ ಪಡೆಯಲು ಬಯಸುವವರು, ಸಮಾಜದ ಅಭಿವೃದ್ಧಿಗಾಗಿ ತಾವು ನೀಡಿರುವ ಕೊಡುಗೆಯ ಬಗ್ಗೆಯೂ ಉತ್ತರಿಸಬೇಕು ಎಂಬ ಅಭಿಪ್ರಾಯವನ್ನು ಮುಂದಿಡಲಾಗಿದೆ. ಕೇವಲ ಅಧ್ಯಕ್ಷ ಸ್ಥಾನ ಅಥವಾ ಸಂಘಟನೆಯಲ್ಲಿ ಪ್ರಭಾವ ಹೊಂದುವುದರಿಂದ ಸಮಾಜದ ಪ್ರಗತಿ ಸಾಧ್ಯವಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಮಹಿಳೆಯರು ಮತ್ತು ಯುವಜನರಿಗೆ ಅವಕಾಶಗಳನ್ನು ಕಲ್ಪಿಸುವುದು ಹಾಗೂ ಬಡವರ ನೆರವಿಗೆ ನಿಲ್ಲುವುದು ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ, ಮಾಜಿ ಅಧ್ಯಕ್ಷರ ಬಗ್ಗೆ ತೋರಿಸಲಾಗುತ್ತಿರುವ ಕಾಳಜಿ ಮತ್ತು ಸಂಘಟನೆಯೊಳಗಿನ ಸ್ಥಾನಮಾನಗಳ ಕುರಿತ ಚರ್ಚೆಯ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ. ಸಂಘಟನೆಯಲ್ಲಿನ ಭಿನ್ನಾಭಿಪ್ರಾಯಗಳು ವೈಯಕ್ತಿಕ ಹಿತಾಸಕ್ತಿಗಳ ಬದಲಾಗಿ ಸಮಾಜದ ಹಿತದೃಷ್ಟಿಯಿಂದ ಬಗೆಹರಿಯಬೇಕು ಎಂದು ಅವರು ಆಗ್ರಹಿಸಿದರು
ಮರಾಠಿ ಸಮಾಜದ ಜನರ ವಿಶ್ವಾಸ ಮತ್ತು ಒಗ್ಗಟ್ಟನ್ನು ಕಾಪಾಡುವುದು ಪ್ರತಿಯೊಬ್ಬ ಪದಾಧಿಕಾರಿಯ ಜವಾಬ್ದಾರಿಯಾಗಿದೆ. ಸಮಾಜದ ನಂಬಿಕೆಯನ್ನು ಗೌರವಿಸಿ, ವೈಯಕ್ತಿಕ ಹಿತಾಸಕ್ತಿಗಳಿಗಿಂತ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.
ಸಮಾಜದ ಅಭಿವೃದ್ಧಿಯೇ ಆದ್ಯತೆಯಾಗಲಿ
ಮರಾಠಿ ಸಮಾಜದ ಮಹಿಳೆಯರ ಸಬಲೀಕರಣ, ಯುವಜನರ ಶೈಕ್ಷಣಿಕ ಪ್ರಗತಿ, ಬಡ ಕುಟುಂಬಗಳ ಸಮಸ್ಯೆಗಳ ಪರಿಹಾರ ಹಾಗೂ ಸಂಘಟನೆಯ ಬಲವರ್ಧನೆಗೆ ಆದ್ಯತೆ ನೀಡಬೇಕು. ಹುದ್ದೆಗಾಗಿ ನಡೆಯುವ ಪೈಪೋಟಿಗಿಂತ ಸಮಾಜದ ಅಭಿವೃದ್ಧಿಗಾಗಿ ನಡೆಯುವ ಕೆಲಸಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂಬುದು ಈ ವಿಚಾರದ ಪ್ರಮುಖ ಆಶಯವಾಗಿದೆ.
“ಹುದ್ದೆ ತಾತ್ಕಾಲಿಕ; ಸಮಾಜಕ್ಕೆ ಮಾಡಿದ ಸೇವೆಯೇ ಶಾಶ್ವತ. ಸಮಾಜದ ಹೆಸರಿನಲ್ಲಿ ಸ್ಥಾನಮಾನ ಪಡೆಯುವುದಕ್ಕಿಂತ ಸಮಾಜದ ಏಳಿಗೆಗಾಗಿ ದುಡಿಯುವುದು ಮುಖ್ಯ ಎಂದು ಜಯಕರ್ ನಾಯ್ಕ್ ಕರ್ಜೆ ತಿಳಿಸಿದ್ದಾರೆ.
Swabhimaananews
