20.2 C
New York
28 June 2025
Coastal

ನಳಂದ ಬೌದ್ಧ ವಿಹಾರ ಟಿ ನರಸೀಪುರದ ಬಂತೆ ಪೂಜ್ಯ ಬೋದಿ ರತ್ನ ರವರ ನೇತೃತ್ವದಲ್ಲಿ ಗೃಹಪ್ರವೇಶ.

ಜುಲೈ -23-2023 swabhimananews@gmail.com
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ
ವಾರಂಬಳ್ಳಿ ಗ್ರಾಮದಲ್ಲಿ ಉಪಾಸಕ ಪಕೀರಪ್ಪ ಹಾಗೂ ಉಪಾಸಕಿ ನಾಗಲಕ್ಷ್ಮಿ ದಂಪತಿಗಳು ಹೊಸದಾಗಿ ನಿರ್ಮಿಸಿದ ಅಪೂರ್ವ ಮನೆಯ ಗೃಹಪ್ರವೇಶ ಕಾರ್ಯಕ್ರಮವನ್ನು ನಳಂದ ಬೌದ್ಧ ವಿಹಾರ ಟಿ ನರಸೀಪುರ ಇಲ್ಲಿಯ ಬಂತೆ ಪೂಜ್ಯ ಬೋದಿ ರತ್ನ ರವರ ನೇತೃತ್ವದಲ್ಲಿ ಬುದ್ಧ ವಂದನೆ, ಧರ್ಮ ವಂದನೆ, ಸಂಘ ವಂದನೆ ಮತ್ತು ಮೈತ್ರಿ ಧ್ಯಾನ ಮಾಡುವ ಮೂಲಕ ನೆರವೇರಿಸಲಾಯಿತು.

ಆಗಮಿಸಿದವರಿಗೆ ಪಂಚಶೀಲವನ್ನು ಬೋಧಿಸಲಾಯಿತು. ಮಳೆಯ ಹೊರತಾಗಿಯೂ ಕಾರ್ಯಕ್ರಮವನ್ನು ಪಕೀರಪ್ಪ ದಂಪತಿಗಳು ಅಚ್ಚುಕಟ್ಟಾಗಿ ವ್ಯವಸ್ಥೆಪಡಿಸಿದ್ದು ಕಾರ್ಯಕ್ರಮದಲ್ಲಿ ಫಕೀರಪ್ಪ ದಂಪತಿಗಳ ಬಂಧುಗಳು ಹಿತೈಷಿಗಳು ಸ್ನೇಹಿತರು ಬುದ್ಧಿ ಸೊಸೈಟಿ ಆಫ್ ಇಂಡಿಯಾದ ಎಲ್ಲಾ ಉಪಾಸಕ ಉಪಾಸಿಕರು ಕುಟುಂಬ ಸಹಿತ ಆಗಮಿಸಿ ಮಂಗಳ ಮೈತ್ರಿಯನ್ನು ಆಶಿಸಿದರು.

ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ಪರವಾಗಿ ಭಗವಾನ್ ಬುದ್ಧ ಹಾಗೂ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿ ಪ್ರಜ್ಞೆ ಕರುಣೆ ಮೈತ್ರಿಯ ದಾರಿಯಲ್ಲಿ ಸಾಗುವಂತೆ ಆಶಿಸಲಾಯಿತು.


ಅತಿಥಿಗಳಿಗೆ ಉತ್ತಮ ಪೌಷ್ಟಿಕ ಆಹಾರ ವ್ಯವಸ್ಥೆ ಪಡಿಸಲಾಗಿತ್ತು.

ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ

swabhimananews@gmail.com

Related posts

ಕುಂದಾಪುರ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ನಗರದಲ್ಲಿ ಬೃಹತ್ ಪಾದಯಾತ್ರೆ: ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಮತಯಾಚನೆ-ಅಭಿವೃದ್ಧಿಗೆ ನಿಮ್ಮ ಮತ ನೀಡಿ: ಜಯಪ್ರಕಾಶ್‌ ಹೆಗ್ಡೆ.

Swabhimana News Desk

ಬ್ರಹ್ಮಾವರ ತಾಲೂಕಿನಲ್ಲಿ ಲೋಕಾಯುಕ್ತರಿಂದ ಅಹವಾಲು ಸ್ವೀಕಾರ.

Swabhimana News Desk

ಹೆಣದಿಂದ ಹಣ.
ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷ ಹಾಲಿ ಪಂಚಾಯತ್ ಅಧ್ಯಕ್ಷೆ ಸೇರಿ ನಾಲ್ವರ ವಿರುದ್ದ ಲೋಕಾಯುಕ್ತಕ್ಕೆ ದೂರು.

Swabhimana News Desk

Leave a Comment