7 September 2026
Karnataka

Milk Price Rise : ಗ್ರಾಹಕರಿಗೆ ಬರೆ, ಹಾಲಿನ ದರ 5 ರೂ. ಹೆಚ್ಚಳ


ಜುಲೈ -14-2023 Swabhimananews@gmail.com
ಹಾಲಿನ ದರ ಹೆಚ್ಚಳ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಪಶುಸಂಗೋಪನ ಸಚಿವ ಕೆ.ವೆಂಕಟೇಶ್‌ ಅವರು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಹೆಚ್ಚಳ ಮಾಡಲಾಗುವುದು ಎಂದಿದ್ದಾರೆ.

Swabhimananews@gmail.com

ಬೆಂಗಳೂರು : Milk Price Rise : ಕಳೆದ ಎರಡು ವಾರದಿಂದ ಟೊಮ್ಯಾಟೊ ಸೇರಿದಂತೆ ಇತರ ತರಕಾರಿ ಬೆಲೆ ಏರಿಕೆಯಿಂದ ರಾಜ್ಯದ ಜನರು ಆತಂಕಗೊಂಡ ಹೊತ್ತಲ್ಲೇ, ಹಾಲಿನ ದರ ಏರಿಕೆಯಿಂದ ಮತ್ತೊಂದು ಶಾಕ್‌ ನೀಡಿದಂತೆ ಆಗಿದೆ. ಹೌದು ರಾಜ್ಯದಲ್ಲಿ ಒಂದರ ಹಿಂದೆ ಮತ್ತೊಂದು ಎನ್ನುವಂತೆ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದ್ದು, ಜನಸಾಮಾನ್ಯರಿಗೆ ಪ್ರತಿನಿತ್ಯ ಜೀವನ ನಡೆಸಲು ಕಷ್ಟಕರವಾಗಿದೆ.
Swabhimananews@gmail.com
ಈ ವಾರದಿಂದಲೇ ಹಾಲಿನ ದರದಲ್ಲಿ ಏರಿಕೆಯಾಗಲಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಗುಲಿದೆ ಎನ್ನಲಾಗಿದೆ.
Swabhimananews@gmail.com
ಹಾಲಿನ ದರ ಹೆಚ್ಚಳ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಅವರು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಹೆಚ್ಚಳ ಮಾಡಲಾಗುವುದು ಎಂದಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಹಾಲಿನ ದರ ಏರಿಕೆಯಾಗುವ ಸೂಚನೆ ಸಿಕ್ಕಿದೆ.
Swabhimananews@gmail.com
ವಿವಿಧ ಕಾರಣಗಳಿಂದ ಹಾಲಿನ ದರವನ್ನು ಹೆಚ್ಚಳ ಮಾಡುವುದಕ್ಕೆ ರಾಜ್ಯ ಸರಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಕೆಎಂಎಫ್‌ ಹಾಗೂ ಅಧಿಕಾರಿಗಳ ಮನವಿಯಂತೆ ಹಾಲಿನ ಮೊತ್ತವನ್ನು 5 ರೂ. ಗೆ ಹೆಚ್ಚಳ ಮಾಡಲು ಮನವಿ ಸಲ್ಲಿಸಲಾಗಿದೆ.

Swabhimananews@gmail.com

ಕಳೆದ ಕೆಲವು ತಿಂಗಳುಗಳಿಂದ ಹಾಲಿನ ದರ ಹೆಚ್ಚಳ ಮಾಡಬೇಕು ಎನ್ನುವುದರ ಕುರಿತು ನಿರಂತರವಾಗಿ ಬೇಡಿಕೆ ಕೇಳಿ ಬರುತ್ತಲೇ ಇದೆ. ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಕೆಎಂಎಫ್‌ನ ಅಧ್ಯಕ್ಷರು ಸಹ ಈ ಹಿಂದೆ ಹಾಲಿನ ದರ ಹೆಚ್ಚಳ ಮಾಡುವ ಕುರಿತು ಪ್ರಸ್ತಾವ ಸಲ್ಲಿಸಿದ್ದರು.
Swabhimananews@gmail.com

Related posts

ಕಾಂಗ್ರೆಸ್ ಸರಕಾರ ದಲಿತರ ನಿಧಿಯನ್ನು ದುರ್ಬಳಕೆ ಮಾಡಿರುವುದನ್ನು ಉನ್ನತ ಮಟ್ಟದ ತನಿಖೆ ನಡೆಸುವಂತೆ. ಆಗ್ರಹಿಸಿ ಕ ದ ಸಂ ಸ ಭೀಮವಾದ ಮತ್ತು RPIK ವತಿಯಿಂದ ರಾಜ್ಯಪಾಲಾರಿಗೆ ದೂರು.

Swabhimana News Desk

ಬಿಜೆಪಿಯಿಂದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಉಚ್ಚಾಟನೆ

Swabhimana News Desk

ಜೋಕಾಲಿಯಲ್ಲಿ ಆಟ ಆಡುತ್ತಿದ್ದ ಬಾಲಕಿಗೆ ಹಗ್ಗ ಸುತ್ತಿಕೊಂಡು ಮೃತ್ಯು..!!

Swabhimana News Desk

Leave a Comment