ಉಡುಪಿ : ನವೆಂಬರ್ 25-2026 ಬಹು ದಿನಗಳಿಂದ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದ ‘ನಾಯಕ’ ಕಿರುಚಿತ್ರದ ಚಿತ್ರೀಕರಣ ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಹಾವಂಜೆಯ ಪವಿತ್ರ ತಾಣವಾದ ಬೋಧಿ ಸತ್ವ ಬುದ್ಧವಿಹಾರದಲ್ಲಿ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯಿತು. ಶೇಖರ್ ಹಾವಂಜೆ ಅವರ ನೇತೃತ್ವದಲ್ಲಿ ನಡೆದ ಈ ಚಿತ್ರೀಕರಣದಲ್ಲಿ ಇಡೀ ತಂಡ ಅತ್ಯಂತ ಶ್ರದ್ಧೆ ಮತ್ತು ಉತ್ಸಾಹದಿಂದ ಭಾಗವಹಿಸಿತ್ತು.
ಈ ಚಿತ್ರದಲ್ಲಿ ಶೇಖರ್ ಹಾವಂಜೆ ಅವರು ಅತಿಥಿ ಕಲಾವಿದರಾಗಿ ಅಭಿನಯಿಸಿರುವುದು ವಿಶೇಷ ಆಕರ್ಷಣೆ. ಅವರ ಅಭಿನಯ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ ಎಂಬ ನಿರೀಕ್ಷೆ ಚಿತ್ರತಂಡದ್ದು.
ಡಿಸೆಂಬರ್ 6 ರಂದು ಬಿಡುಗಡೆ
ಚಿತ್ರವು ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ದಿನೇಶ್ ಕೊಡವೂರು ತಿಳಿಸಿದ್ದಾರೆ.
*ಇದು ಕೇವಲ ಚಿತ್ರವಲ್ಲ, ಒಂದು ಸಂದೇಶ*
‘ನಾಯಕ’ ಕೇವಲ ಮನರಂಜನೆಗಾಗಿ ಮಾಡಿದ ಕಿರುಚಿತ್ರವಲ್ಲ. ಇಂದಿನ ಸಮಾಜಕ್ಕೆ ಅಗತ್ಯವಿರುವ ಮಾನವೀಯತೆ, ಶಾಂತಿ, ಸಹಬಾಳ್ವೆ ಮತ್ತು ಸತ್ಯದ ಪರ ನಿಲ್ಲುವ ಧೈರ್ಯದ ಸಂದೇಶವನ್ನು ಈ ಚಿತ್ರ ಹೊತ್ತಿದೆ.
ಬುದ್ಧನ ಶಾಂತಿ ಸಂದೇಶದ ನೆಲದಲ್ಲಿ ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿರುವುದೇ ಒಂದು ಸಾಂಕೇತಿಕ ಸಂದೇಶ. ಪ್ರತಿಯೊಬ್ಬರಲ್ಲೂ ಒಬ್ಬ ‘ನಾಯಕ’ ಇದ್ದಾನೆ. ಕೆಟ್ಟದ್ದರ ವಿರುದ್ಧ ನಿಲ್ಲಲು, ಒಳ್ಳೆಯದ್ದನ್ನು ಬೆಂಬಲಿಸಲು ಧೈರ್ಯ ತೋರಿದವನೇ ನಿಜವಾದ ನಾಯಕ ಎಂಬುದು ಈ ಚಿತ್ರದ ಮುಖ್ಯ ಆಶಯ.
ಚಿತ್ರೀಕರಣದ ವೇಳೆ ಸ್ಥಳೀಯರು, ಬುದ್ಧವಿಹಾರದ ಸದಸ್ಯರು ಮತ್ತು ಕಲಾವಿದರು ನೀಡಿದ ಸಹಕಾರಕ್ಕೆ ನಿರ್ದೇಶಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರೇಕ್ಷಕರು ಡಿಸೆಂಬರ್ 6 ರಂದು ಈ ಕಿರುಚಿತ್ರವನ್ನು – ನೋಡಿ ಪ್ರೋತ್ಸಾಹಿಸಬೇಕೆಂದು ಚಿತ್ರತಂಡ ಮನವಿ ಮಾಡಿದ್ದಾರೆ.

