15 November 2026
Coastal

ಕೊಳಲಗಿರಿಯಲ್ಲಿ ಸಂಗೀತದ ಹೊಸ ಲೋಕಕ್ಕೆ ಶುಭಾರಂಭ! ಪ್ರಿಯಾ ಮ್ಯೂಸಿಕ್ ವರ್ಲ್ಡ್ ಸಂಗೀತ ತರಬೇತಿ ಕೇಂದ್ರ ಉದ್ಘಾಟನೆ:

ಅಂಬೇಡ್ಕರ್, ಬುದ್ಧರ ತತ್ವಗಳೊಂದಿಗೆ ಸಂಗೀತ ಸಂಭ್ರಮ

ಉಡುಪಿ, ನವೆಂಬರ್ 15-2026 Swabhimaananews:

ಸಂಗೀತದ ಮೂಲಕ ಸಾಮಾಜಿಕ ಜಾಗೃತಿ, ಸ್ವಾಭಿಮಾನ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವ ಆಶಯದೊಂದಿಗೆ ಪ್ರಾರಂಭಗೊಂಡ ಪ್ರಿಯಾ ಮ್ಯೂಸಿಕ್ ವರ್ಲ್ಡ್ ಸಂಗೀತ ತರಬೇತಿ ಕೇಂದ್ರ ಕೊಳಲ ಗಿರಿಯ ದ ಉದ್ಘಾಟನಾ ಸಮಾರಂಭವು ನವೆಂಬರ್ 14, 2026ರ ಸಂಜೆ 5 ಗಂಟೆಗೆ ಅದ್ದೂರಿಯಾಗಿ ನಡೆಯಿತು.


ಬಿ.ಎಸ್.ಐ. ನ ಉಡುಪಿ ಜಿಲ್ಲಾಧ್ಯಕ್ಷರಾದ ಅಜಯ್ ಕುಮಾರ್ ಅವರು ಬಾಬಾಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೇಣದಬತ್ತಿಯ ದೀಪ ಬೆಳಗಿಸುವ ಮೂಲಕ ಸಂಗೀತ ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿಯಾ ಮ್ಯೂಸಿಕ್ ವರ್ಲ್ಡ್‌ನ ಮಾಲೀಕರಾದ ದಿನೇಶ್ ಕೊಡವೂರು ಅವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಡುಪಿಯ ಬೌದ್ಧ ಧಮಮ್ಮಾಚಾರಿಗಳಾದ ಮರಳಿ ಮಾರ್ಪಳ್ಳಿ , ರಮಣಿ ಟೀಚರ್,ರಾಯಲ್ ಪ್ಯಾಲೇಸ್ ನ ಮಾಲೀಕರಾದ ಅಬ್ದುಲ್ ರೆಹಮಾನ್ ಗೋಳಿಕಟ್ಟೆ ಆಗಮಿಸಿದ್ದರು.


ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಬೋಧಿಸತ್ವ ಕಲಾತಂಡವು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಸಂದೇಶಗಳನ್ನು ಸಾರುವ ಗೀತೆಗಳನ್ನು ಹಾಗೂ ಭಗವಾನ್ ಬುದ್ಧರ ಶಾಂತಿ, ಕರುಣೆ ಮತ್ತು ಮಾನವೀಯತೆಯ ತತ್ವಗಳನ್ನು ಪ್ರತಿಬಿಂಬಿಸುವ ಬುದ್ಧಗೀತೆಗಳನ್ನು ಅತ್ಯಂತ ಮನಮೋಹಕವಾಗಿ ಹಾಡಿ ಪ್ರೇಕ್ಷಕರ ಮನಸೂರೆಗೊಂಡಿತು.

ಇದರೊಂದಿಗೆ ಜನಪದ ಗೀತೆಗಳ ಗಾಯನವು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

ಬೋಧಿಸತ್ವ ಕಲಾತಂಡದ ಸದಸ್ಯರ ಅದ್ಭುತ ಗೀತಗಾಯನವು ಸಭಿಕರಲ್ಲಿ ಉತ್ಸಾಹ ಮತ್ತು ವೈಚಾರಿಕ ಚಿಂತನೆಯ ವಾತಾವರಣವನ್ನು ಮೂಡಿಸಿತು.


ಸಂಗೀತವು ಕೇವಲ ಮನರಂಜನೆಯ ಸಾಧನವಲ್ಲ; ಅದು ಸಮಾಜದ ಪರಿವರ್ತನೆಗೆ, ಜನರಲ್ಲಿ ಅರಿವು ಮೂಡಿಸಲು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ಪರಿಣಾಮಕಾರಿ ಮಾಧ್ಯಮವಾಗಿದೆ ಎಂಬ ಆಶಯವು ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಪ್ರಿಯಾ ಮ್ಯೂಸಿಕ್ ವರ್ಲ್ಡ್ ಸಂಗೀತ ತರಬೇತಿ ಕೇಂದ್ರವು ಸಂಗೀತಾಸಕ್ತರಿಗೆ, ಯುವ ಪ್ರತಿಭೆಗಳಿಗೆ ಹಾಗೂ ಕಲಾವಿದರಿಗೆ ಉತ್ತಮ ವೇದಿಕೆಯಾಗಲಿ.

ಮತ್ತು ಅಂಬೇಡ್ಕರ್–ಬುದ್ಧರ ವಿಚಾರಧಾರೆಗಳನ್ನು ಸಂಗೀತದ ಮೂಲಕ ಸಮಾಜಕ್ಕೆ ತಲುಪಿಸುವ ಕೇಂದ್ರವಾಗಿ ಬೆಳೆಯಲಿ ಎಂಬ ಆಶಯದೊಂದಿಗೆ ಉದ್ಘಾಟನಾ ಸಮಾರಂಭವು ಸಂಗೀತಮಯವಾಗಿ ಸಂಪನ್ನಗೊಂಡಿತು.

ಶೇಖರ್ ಹಾವಂಜೆ ರವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಬೋಧಿಸತ್ವ ಕಲಾ ತಂಡದಲ್ಲಿ

ಅಧ್ಬುತ ಗಾಯಕರುಗಳಾದ

ಮುರಳಿ ಮಾರ್ಪಳ್ಳಿ, ಅನುಷಾ, ಸುಜಾತ, ಪೃಥ್ವಿ, ಸುನಿತಾ, ಕುಶಲ ರವೀಂದ್ರ,ಧೀಮಂತ್ ಜೈ ಭೀಮ್,ಚಿರಾಗ್ ಸಾಲಿಕೇರಿ, ಸಾನ್ವಿ, ನಿಶ್ಮಿತಾ,ಇವರು ಗೀತಾ ಗಾಯನ ಪ್ರಸ್ತುತಿ ಪಡಿಸಿದರು.

Swabhimaananews.

ಮೊಟ್ಟಮೊದಲ ಬಾರಿಗೆ ಕಾರ್ಕ್ರಮದ ನಿರೂಪಣೆ ಗೈದ ಪೃಥ್ವಿ ಒಳಗುಡ್ಡೆ.

ವಿಠಲ್ ಸಾಲಿಕೇರಿ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.
Swabhimaananews.

Related posts

ಭೋಧಿಸತ್ವ ಬುದ್ಧವಿಹಾರದ ದ್ವಿತೀಯ ವರ್ಷಾಚರಣೆ ಪ್ರಯುಕ್ತ ಧಮ್ಮದೀಪ ಕಾರ್ಯಕ್ರಮ.

Swabhimana News Desk

ಸೌಜನ್ಯ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ RPI. KARNATAKA ಮತ್ತು KDSS. ಭೀಮವಾದ(ರಿ) ಉಡುಪಿ ಜಿಲ್ಲೆ ಇದರ ವತಿಯಿಂದ ಸರ್ಕಾರಕ್ಕೆ ಮನವಿ.

Swabhimana News Desk

ಹಿರಿಯಡ್ಕದಲ್ಲಿ ಬಯಲಾಯಿತು ಟಿಂಬರ್ ಮಾಫಿಯಾ.ಕೋಟಿ ಕೋಟಿ ಮೌಲ್ಯದ ಮರಗಳ್ಳ ಸಾಗಾಣಿಕೆಯ ಹಿಂದೆ ಉಡುಪಿ RFO, ಹಿಂದಿನ DRFO, beet forest ಕೈವಾಡ ಶಂಕೆ..!

Swabhimana News Desk

Leave a Comment