17 November 2026
Coastal

ಬಡವರು ಕಚೇರಿಗಳಿಗೆ ಅಲೆದಾಟ, ದಳ್ಳಾಳಿಗಳಿಗೆ ರಾಜಮರ್ಯಾದೆ? ಉಡುಪಿಯಲ್ಲಿ ಗಂಭೀರ ಪ್ರಶ್ನೆ!

ಉಡುಪಿ ನವೆಂಬರ್ -17-2026 swabhimaananews

ಉಡುಪಿ ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ, ಎಲ್ಲಾ ತಾಲೂಕಿನ ತಹಶೀಲ್ದಾರ್ ಕಚೇರಿ,ಇನ್ನಿತರ ಹೆಚ್ಚಿನ ಇಲಾಖೆಗಳ ಕಚೇರಿಗಳಲ್ಲಿ ಬ್ರೋಕರ್‌ಗಳದ್ದೇ ಕಾರುಬಾರು? ಜನಸಾಮಾನ್ಯರಿಗೆ ಸಂಕಷ್ಟ!

ಇದು ಸ್ವಾಭಿಮಾನ ನ್ಯೂಸ್ ವರದಿ.

ಉಡುಪಿಯ ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ತಹಶೀಲ್ದಾರ್ ಕಚೇರಿ ಇನ್ನಿತರ ಕಚೇರಿಗಳಲ್ಲಿ ಜನಸಾಮಾನ್ಯರ ಕೆಲಸಗಳು ಸುಲಭವಾಗಿ ನಡೆಯುತ್ತಿವೆಯೇ? ಅಥವಾ ದಳ್ಳಾಳಿಗಳ ಮೂಲಕವೇ ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆಯೇ?

ಸರ್ಕಾರಿ ಕಚೇರಿಗಳಲ್ಲಿ ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ ಎಂಬ ಸಾರ್ವಜನಿಕರ ಆರೋಪಗಳು ಗಂಭೀರ ಚರ್ಚೆಗೆ ಕಾರಣವಾಗಿವೆ.

ಸಾಮಾನ್ಯ ಜನರು ತಮ್ಮ ಸಣ್ಣಪುಟ್ಟ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದರೆ, ಮಧ್ಯವರ್ತಿಗಳ ಮೂಲಕ ಕೆಲಸಗಳು ವೇಗವಾಗಿ ನಡೆಯುತ್ತವೆ ಎಂಬ ದೂರುಗಳು ಕೇಳಿಬರುತ್ತಿವೆ.

ಇನ್ನೊಂದೆಡೆ, ಕೆಲವು ಮಧ್ಯವರ್ತಿಗಳ ಐಷಾರಾಮಿ ಜೀವನಶೈಲಿ, ದುಬಾರಿ ಕಾರುಗಳು ಮತ್ತು ಬಂಗಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಇವರ ಆದಾಯದ ಮೂಲವೇನು? ಸರ್ಕಾರಿ ಕಚೇರಿಗಳಲ್ಲಿ ಇವರ ಪ್ರಭಾವ ಎಷ್ಟಿದೆ? ಅಧಿಕಾರಿಗಳು ಇವರ ಮುಂದೆ ಅಸಹಾಯಕರಾಗಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖೆಗಳು ಉತ್ತರ ನೀಡಬೇಕಿದೆ.

ಕಾನೂನಿನ ಅರಿವಿಲ್ಲದ ಬಡವರು, ಅನಕ್ಷರಸ್ಥರು ಮತ್ತು ಸಾಮಾನ್ಯ ನಾಗರಿಕರು ಇಂತಹ ವ್ಯವಸ್ಥೆಯಿಂದ ಸಂಕಷ್ಟ ಅನುಭವಿಸಬಾರದು. ಸರ್ಕಾರಿ ಕಚೇರಿಗಳು ಜನಸೇವೆಯ ಕೇಂದ್ರಗಳಾಗಬೇಕೇ ಹೊರತು ದಳ್ಳಾಳಿಗಳ ವ್ಯವಹಾರದ ಕೇಂದ್ರಗಳಾಗಬಾರದು.

ಆದ್ದರಿಂದ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಈ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಇಡೀ ಜಿಲ್ಲಾದ್ಯಂತ ಸರಕಾರಿ ಕಛೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ, ಅಕ್ರಮ ಹಣ ವಸೂಲಿ ಮತ್ತು ಅಧಿಕಾರಿಗಳೊಂದಿಗೆ ಇರುವ ಸಂಭಾವ್ಯ ಒಳಜಾಲದ ಬಗ್ಗೆ ಪರಿಶೀಲನೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಜನರ ತೆರಿಗೆ ಹಣದಿಂದ ನಡೆಯುವ ಸರ್ಕಾರಿ ಕಚೇರಿಗಳಲ್ಲಿ ಜನರಿಗೇ ಮೊದಲ ಆದ್ಯತೆ ಸಿಗಬೇಕು.

ದಳ್ಳಾಳಿಗಳಿಗಲ್ಲ!
Swabhimaananews

ಇದು ಸ್ವಾಭಿಮಾನ ನ್ಯೂಸ್‌ನ ಜನಪರ ಧ್ವನಿ.
ಜೈ ಭೀಮ್!

Related posts

ಸಾಮಾಜಿಕ ಹೋರಾಟಗಾರ, ಅಂಬೇಡ್ಕರ್ ರವರ ಅನುಯಾಯಿ ಚೇತನ್ ಅಹಿಂಸಾ ರವರ 4ನೇ ರಾಜಕೀಯ ಮುನ್ನೋಟ ಸಭೆ ಯಶಸ್ವಿ.

Swabhimana News Desk

ಉಡುಪಿ ಜಿಲ್ಲೆಯ. ಬೈಂದೂರು ತಾಲೂಕಿನಾದ್ಯಂತ. ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ,ಕೋಟ್ಯಾಂತರ ರೂಪಾಯಿ ಸರಕಾರಕ್ಕೆ ವಂಚನೆ, ದಲಿತರಿಗೆ ಮೀಸಲಿಟ್ಟ ಡಿ ಸಿ ಮನ್ನಾ ಭೂಮಿಯನ್ನು,ಹಾಗೂ ಬಹುಕೋಟಿ ರೂಪಾಯಿ ಮೌಲ್ಯದ ಸರಕಾರಿ
ಭೂಮಿ.ಲೂಟಿ ಹೊಡೆದರೂ,ಎಷ್ಟೇ ದೂರು ನೀಡಿದರು. ಕಣ್ಣ್ ಮುಚ್ಚಿ ಕುಳಿತ ಇಲಾಖೆಗಳ ಅಧಿಕಾರಿಗಳು.

Swabhimana News Desk

ಡೀಲ್ ಚೈತ್ರಾಳ‌ ಸುಳಿವು  ಸಿಸಿಬಿ ಗೆ ಕೊಟ್ಟಿದ್ದೆ ಹಿಂದೂ ಸಂಘಟನೆಯ ಕಾರ್ಯಕರ್ತರು.!

Swabhimana News Desk

Leave a Comment