ಉಡುಪಿ: ನವೆಂಬರ್ -26-2026 swabhimaananews:
ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರು ಸ್ಥಾಪಿಸಿದ ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ (BSI) ಉಡುಪಿ ಜಿಲ್ಲಾ ಘಟಕದ ವತಿಯಿಂದ ಇದೇ ದಿನಾಂಕ 29 ನವೆಂಬರ್ 2026ರ ಭಾನುವಾರ, ಆದಿ ಉಡುಪಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ
ಧಮ್ಮದೀಕ್ಷೆ ಮತ್ತು ವಿಚಾರ ಸಂಕಿರಣ ಎಂಬ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವು ಬೆಳಿಗ್ಗೆ ಸರಿಯಾಗಿ 9 ಗಂಟೆಗೆ ಆರಂಭವಾಗಲಿದ್ದು, ಪೂಜ್ಯ ಧಮ್ಮವೀರ ಬಂತೇಜಿ, ಬೆಂಗಳೂರು ಅವರು ಧಮ್ಮದೀಕ್ಷೆಯ ಬೋಧನೆ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಆಯುಷ್ಮಾನ್ ಡಾ. ಹ. ರಾ. ಮಹೇಶ್, ಆಯುಷ್ಮಾನ್ ಡಾ. ಆರಡಿ ಮಲ್ಲಯ್ಯ ಕಟ್ಟ್ಕೆರೆ ಹಾಗೂ ಆಯುಷ್ಮಾನ್ ಭಾಸ್ಕರ ವಿಟ್ಲ (BSI, ಮಂಗಳೂರು) ಅವರು ವಿವಿಧ ವಿಷಯಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ.
ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆಯಾಗಿ ಬೋಧಿಸತ್ವ ಕಲಾತಂಡದ ವತಿಯಿಂದ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಭಗವಾನ್ ಬುದ್ಧರ ಜೀವನ ಸಂದೇಶ, ಸಮಾನತೆ, ಸ್ವಾತಂತ್ರ್ಯ, ಸಹೋದರತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಗೀತಾಗಾಯನ ಕಾರ್ಯಕ್ರಮ ನಡೆಯಲಿದೆ.
ಬುದ್ಧರ ಕರುಣೆ, ಪ್ರೀತಿ, ಮೈತ್ರಿ ಮತ್ತು ಪ್ರಜ್ಞೆಯ ಮಾರ್ಗದಲ್ಲಿ ಸಾಗಲು ಹಾಗೂ ಬಾಬಾಸಾಹೇಬರು ತೋರಿಸಿಕೊಟ್ಟ ಸಮಾನತೆಯ ಧಮ್ಮಮಾರ್ಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಈ ಕಾರ್ಯಕ್ರಮ ಒಂದು ಮಹತ್ವದ ವೇದಿಕೆಯಾಗಲಿದೆ.

ಆದ್ದರಿಂದ ಉಡುಪಿ ಜಿಲ್ಲೆಯ ಎಲ್ಲಾ ಬೌದ್ಧ ಬಾಂಧವರು, ನವ ಬೌದ್ಧರು, ಅಂಬೇಡ್ಕರ್ ಅನುಯಾಯಿಗಳು ಹಾಗೂ ಸಮಾನತೆಯನ್ನು ಬಯಸುವ ಸರ್ವರೂ ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಮ್ಮದೀಕ್ಷೆ ಪಡೆದು ಸತ್ಯ, ಪ್ರಜ್ಞೆ ಮತ್ತು ಮಾನವೀಯತೆಯ ಮಾರ್ಗದಲ್ಲಿ ಮುನ್ನಡೆಯಬೇಕೆಂದು ಸಂಘಟಕರು ಮೈತ್ರಿಪೂರ್ಣ ಆಹ್ವಾನ ನೀಡಿದ್ದಾರೆ.
ದಿನಾಂಕ: 29 ನವೆಂಬರ್ 2026, ಭಾನುವಾರ
ಸಮಯ: ಬೆಳಿಗ್ಗೆ 9 ಗಂಟೆಗೆ
ಸ್ಥಳ: ಡಾ. ಬಿ.ಆರ್. ಅಂಬೇಡ್ಕರ್ ಭವನ, ಆದಿ ಉಡುಪಿ.
ಎಲ್ಲರಿಗೂ ಜೈ ಭೀಮ್! ನಮೋ ಬುದ್ಧಾಯ!
ನವ ಬೌದ್ಧರಿಗೆ ಮತ್ತೊಮ್ಮೆ ಮೈತ್ರಿಪೂರ್ಣ ಆಹ್ವಾನ.
ಕಾರ್ಯಕ್ರಮದ ಸಂಪೂರ್ಣ ಚಿತ್ರಣವು ಜೈ ಭೀಮ್ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ
ಮತ್ತು ಶೇಖರ್ ಹಾವಂಜೆ ಫೇಸ್ಬುಕ್ ಪೇಜ್ ನಲ್ಲಿ ನೇರಪ್ರಸಾರವಾಗಲಿದೆ.
ಯೂಟ್ಯೂಬ್ ಚಾನೆಲ್ ಗೆ SUBSCRIBE ಆಗಿ
ಫೇಸ್ಬುಕ್ ಫಾಲೋ ಮಾಡಿ.ಬೆಂಬಲಿಸಿ.👇
https://www.facebook.com/share/p/19wFNfgYRT/

